ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು!

Upayuktha
0



ರ ಬರಲಿ, ರೋಗ ರುಜಿನಗಳು ಬರಲಿ ರೈತರ ಸಂಕಷ್ಟವನ್ನು ಕೇಳುವುದಕ್ಕೆ ಯಾರೂ ಸಿದ್ದ ಇಲ್ಲ.  ಬರದ ಸಮಸ್ಯೆ ಶುರುವಾಗಿ 3-4 ತಿಂಗಳಾಯ್ತು. ಸಮೀಕ್ಷೆ ಆಯ್ತು,  ಇಂತಿಂತಹ ಜಿಲ್ಲೆಗಳು ತೀವ್ರ ಬರ ಪೀಡಿತ, ಇಂತಿಂತಹ ಜಿಲ್ಲೆಗಳು ಭಾಗಶಃ ಬರ ಪೀಡಿತ ಅಂತ ಪಟ್ಟಿ ಸಿದ್ದವಾಯ್ತು ಅಷ್ಟೆ.  ಬರದ ತೀವ್ರತೆ ಮತ್ತಷ್ಟು ಹೆಚ್ಚಾಗುತ್ತಿದೆ.  ಬಾವಿ, ಕೆರೆಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ.  ಜಲಾನಯನಗಳ ನೀರಿನ ಮಟ್ಟ ಇಳಿಯುತ್ತಿದೆ.  ಆಕಾಶದಲ್ಲಿ ಮೋಡದ ಕುರುಹೂ ಇಲ್ಲ.  ಇನ್ನು ಮೂರು ತಿಂಗಳು ಚಿಂತಾಜನಕ ಸ್ಥಿತಿ ಉಂಟಾಗುವ ಸಾದ್ಯತೆ ಇದೆ.  ತರಕಾರಿ, ಧಾನ್ಯ, ಎಣ್ಣೆ ಬೆಲೆಗಳು ಏರ್ತಾ ಇವೆ.  




ಅಡಿಕೆ ಎಲೆ ಚುಕ್ಕಿ, ಹಳದಿ ರೋಗ ಬಂದ ತೋಟಗಳು ಮತ್ತಷ್ಟು ಶಿಥಿಲವಾಗುತ್ತಿವೆ.  ಅಡಿಕೆ ಎಲೆ ಚುಕ್ಕಿ ಬಾದಿತ ರೈತರ ಸಹಾಯಕ್ಕೆ ಅಂತ ಎರಡು ವರ್ಷಗಳಿಂದ ಅಳೆದು ತೂಗಿ ಸುಮಾರು 225.73 ಕೋಟಿಯ ಒಂದು ಅನುದಾನದ ಪ್ರಪೋಸಲ್ ನ್ನು ರಾಜ್ಯ ಸರಕಾರ ಕೇಂದ್ರ ಸರಕಾರದ ಮುಂದಿಟ್ಟಿತು.  ಕೇಂದ್ರ 60% ಭರಿಸುವ ಮಾತಾಡಿತು. ಅಪ್ಪ ಅಮ್ಮನ ಜಗಳ ಹೇಗಿರುತ್ತೋ ಹಾಗೇ ಆಯ್ತು. "60% ನಾವು ಕೊಡ್ತೇವೆ ಆದರೆ ಅದಕ್ಕೆ ಮೊದಲು 40%  ರಾಜ್ಯ ಸರಕಾರ ಕೊಡಬೇಕು" ಅಂತ ಅಪ್ಪನ ಸ್ಥಾನದಲ್ಲಿ ನಿಂತ ಕೇಂದ್ರ ಷರಾ ಬರೆದಿದೆ.  ರಾಜ್ಯ "ಅವರು ಮೊದಲು 60% ಕೊಡಲಿ, ನಾವು 40% ಕೊಡ್ತೀವಿ" ಅಂತ ಹೇಳಿಕೆ ಆಯ್ತು.  ಇಷ್ಟಾಗಿ ಎರಡು ತಿಂಗಳಾಯ್ತು.  ಅಡಿಕೆ ತೋಟ IಅU ನಲ್ಲಿದೆ, ಸರ್ಜರಿ, ಟ್ರೀಟ್‌ಮೆಂಟ್‌ಗಳು ಆಗುವ ಸಾಧ್ಯತೆ ಯಾವುದೂ ಕಾಣುತ್ತಿಲ್ಲ.  




ಬರದ ವಿಚಾರವನ್ನೂ ಈಗ ಎರಡೂ ಸರಕಾರಗಳು ಜಗಳಕ್ಕೆ ಎತ್ತಿ ಕೊಂಡಿವೆ. ಜಗಳದ ಪ್ರಸಂಗ ಅದ್ಭುತವಾಗಿ ಲೈವ್ ಟೆಲಿಕ್ಯಾಸ್ಟ್ ಆಗ್ತಾ ಇದೆ. ಮಲೆನಾಡು, ಕರಾವಳಿಯ ಜನ ಪ್ರತಿನಿಧಿಗಳು, ಶಾಸಕರು, ಸಂಸದರು, ಸಚಿವರು ಎಲ್ಲ ಮುಂದಿನ ರಾಜಕೀಯ ಸೀಟ್ ಹಂಚಿಕೆ ಮತ್ತು ಪರಸ್ಪರ ವಾಚಾಮಗೋಚರ ಬೈಗುಳಗಳಲ್ಲಿ ತಲ್ಲೀನರಾಗೀದ್ದಾರೆ. ಕೆಲವು ಜನ ಪ್ರತಿನಿಧಿಗಳು ಮತ್ತು ಅವರ ಪಟಾಲಮ್ ಸೇರಿಕೊಂಡು, ಊರಿನ ರಸ್ತೆ ರಸ್ತೆಗಳಲ್ಲಿ ಬರದ ಬವಣೆಯ ಕಾಲದಲ್ಲೂ  ಹುಟ್ಟು ಹಬ್ಬದ, ಮಾಡದ ಸಾಧನೆಯ, ಹಬ್ಬ ಹರಿದಿನಗಳ ಶುಭಾಶಯ ಕೋರುವ ಕೈ ಮುಗಿದು ನಿಂತ ಕೊಳಕು ನಾಚಿಕೆ ಇಲ್ಲದ ಸೊಡ್ಡುಗಳ ಆಳೆತ್ತರದ ಪ್ಲಾಸ್ಟಿಕ್ ಫ್ಲೆಕ್ಸ್ ಕಟ್ಟಿ ವ್ಯಂಗ್ಯವಾಡಲಾಗುತ್ತಿದೆ. ಇತ್ತ ಬರ, ನೀರಿನ ಸಮಸ್ಯೆ, ಅಡಿಕೆ ರೋಗಗಳಿಂದ ರೈತರು ಬಡವಾಗುತ್ತಿದ್ದಾರೆ. ಬರ, ಕೃಷಿ ರೋಗಗಳ ಪರಿಹಾರದ ಹೊಣೆ ಯಾವ ಸರಕಾರದ್ದೂ ಅಲ್ಲ ಅನ್ನುವುದು ರೈತರಿಗೆ ರಾತ್ರಿ ಬ್ರೇಕಿಂಗ್ ನ್ಯೂಸ್ ನೋಡುತ್ತ ಅನುಭವಕ್ಕೆ ಬರುತ್ತಿದೆ. ರೈತರು ಬಡವಾಗುತ್ತಿದ್ದಾರೆ




- ಅರವಿಂದ ಸಿಗದಾಳ್, 

ಮೇಲುಕೊಪ್ಪ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top