ಮುಂಬಯಿ ಬಳಿಯ ಘಾರಾಪುರಿ ಗುಹೆಯಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ಅಧಿಕಾರ ನೀಡಿ

Upayuktha
0

ಪ್ರತಿಭಟನೆ ನಂತರ ಪ್ರತೀಕಾತ್ಮಕ ಪೂಜೆ ಸಲ್ಲಿಸಿ ಹಿಂದೂ ಸಂಘಟನೆಗಳಿಂದ ಕೇಂದ್ರ ಸರಕಾರಕ್ಕೆ ಆಗ್ರಹ 




ಮುಂಬಯಿ: ಯುನೆಸ್ಕೊಯಿಂದ ಅಂತರಾಷ್ಟ್ರೀಯ ಪರಂಪರೆ ಎಂದು ಮಾನ್ಯತೆ ಪಡೆದಿರುವ ಮುಂಬಯಿ  ಹತ್ತಿರದ ದ್ವೀಪದಲ್ಲಿ ಘಾರಾಪುರಿ ಗುಹೆ (ಎಲಿಫೆಂಟಾ ಕೇವ್ಸ್) ಇದು ಭಗವಾನ್ ಶಿವನ ಪ್ರಾಚೀನ ಸ್ಥಾನವಾಗಿದೆ. ಹಿಂದೂಗಳ ಸಾಂಸ್ಕೃತಿಕ ನಿಧಿ ಮತ್ತು ಧಾರ್ಮಿಕ ಸ್ಥಳವಾಗಿರುವ ಘಾರಾಪುರಿಯಲ್ಲಿ ಹಿಂದೂಗಳಿಗೆ ಪೂಜೆಯ ಅಧಿಕಾರ ಸಿಗಬೇಕೆಂದು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರಕ್ಕೆ ಆಗ್ರಹಿಸಲಾಗಿದೆ. ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ, ಹಿಂದೂ ಜನಜಾಗೃತಿ ಸಮಿತಿ ಮತ್ತು ಸುದರ್ಶನ ವಾಹಿನಿಯ ನೇತೃತ್ವದಲ್ಲಿ ಘಾರಾಪುರಿಯ ಶಿವಲಿಂಗಕ್ಕೆ ಪ್ರತೀಕಾತ್ಮಕ ಪೂಜೆ ಅರ್ಚನೆ ನಡೆಯಿತು. ಆ ಸಮಯದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ  ರಣಜಿತ ಸಾವರ್ಕರ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ  ರಮೇಶ ಶಿಂದೆ ಮತ್ತು ಸುದರ್ಶನ ವಾಹಿನಿಯ ಮುಖ್ಯ ಸಂಪಾದಕರಾದ  ಸುರೇಶ್ ಚೌಹಾಣಕೆ ಇವರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಈ ಪೂಜಾ ವಿಧಿಗಾಗಿ ಘಾರಾಪುರಿ ಗ್ರಾಮ ಪಂಚಾಯತಿಯ ಉಪಸರಪಂಚ ಬಳಿರಾಮ್ ಠಾಕೂರ್ ಇವರ ಸಹಿತ ವಿವಿಧ ಹಿಂದುತ್ವನಿಷ್ಠ ಸಂಘಟನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಮುಂಬೈಯ ಗೇಟ್ ವೇ ಆಫ್ ಇಂಡಿಯಾದಿಂದ ಕೈಯಲ್ಲಿ ಕೇಸರಿ ಧ್ವಜ ಹಿಡಿದು ಹರ ಹರ ಮಹಾದೇವ, ಜೈ ಶ್ರೀ ರಾಮ, ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ, ಈ ಘೋಷಣೆಗಳನ್ನು ಕೂಗುತ್ತಾ ಧರ್ಮಪ್ರೇಮಿಗಳು ಘಾರಾಪುರಿ ಗುಹೆಯ ಕಡೆಗೆ ಪ್ರಯಾಣ ಬೆಳೆಸಿದರು. ಇಲ್ಲಿಯ ಶಿವಲಿಂಗದ ಮೇಲೆ ಗಂಗಾಜಲದಿಂದ ಅಭಿಷೇಕ ಮಾಡಿ ಪುಷ್ಪಗಳನ್ನು ಅರ್ಪಿಸಿ ಸಾಮೂಹಿಕ ಆರತಿ ನಡೆಸಿದರು. ಈ ಸ್ಥಳದಲ್ಲಿ ಶಿವಸ್ತೋತ್ರದ ಪಠಣೆ ಮಾಡಿ ಹಿಂದೂಗಳು ಹರ ಹರ ಮಹಾದೇವನ ಜಯಘೋಷ ಮಾಡಿದರು.


ಏನಿದು ಪ್ರಕರಣ? - ಘಾರಾಪುರಿಯಲ್ಲಿನ ಗುಹೆ 6 - 8 ನೇ ಶತಮಾನದ್ದೆಂದು ಹೇಳಲಾಗುತ್ತದೆ. ಇಲ್ಲಿಯ ಗುಹೆ ಭಾರತೀಯ ಶಿಲ್ಪ ಕಲೆಯ ಸರ್ವೋತ್ಕೃಷ್ಟ  ಮಾದರಿ ಎಂದು ನಂಬಲಾಗಿದೆ. ಇಲ್ಲಿ 5 ಗುಹೆಗಳ ಸಮೂಹವಿದ್ದು ಈ ಎಲ್ಲ ಗುಹೆಗಳಲ್ಲಿ ಶೈವಶಿಲ್ಪ ಕಲೆಯನ್ನು ಕೆತ್ತಿದ್ದಾರೆ. ಪೋರ್ಚುಗೀಸರ ಕಾಲದಲ್ಲಿ ಈ ಶಿಲ್ಪವನ್ನು ಧ್ವಂಸ ಮಾಡಿದ್ದರು. ಬ್ರಿಟಿಷರ ಕಾಲದಲ್ಲಿ ಈ ಶಿಲ್ಪಗಳ ಮೇಲೆ ಗುಂಡು ಹಾರಿಸುವ ಅಭ್ಯಾಸ ಮಾಡುತ್ತಿದ್ದರು. ಆದ್ದರಿಂದ ಈಗ ಅಲ್ಲಿಯ ಬಹಳಷ್ಟು ಶಿಲ್ಪಗಳು ಭಗ್ನವಾಗಿವೆ. ಈಗ ಇದು ಪುರಾತತ್ವ ಇಲಾಖೆಯ ಅಡಿಯಲ್ಲಿದ್ದು ಇಲ್ಲಿಯ ಶಿವಲಿಂಗದ ಪೂಜೆ ಅರ್ಚನೆ ನಿಂತು ಹೋಗಿದೆ.


ಧಾರ್ಮಿಕ ಸ್ಥಳಗಳಲ್ಲಿ ಪೂಜೆಯ ಅಧಿಕಾರ ಇಲ್ಲದಿರುವುದು ಹಿಂದೂಗಳ ಮೇಲಿನ ಅನ್ಯಾಯವಾಗಿದೆ- ರಮೇಶ ಶಿಂದೆ

ಕೇಂದ್ರ ಸಂಸತ್ ಸಮಿತಿಯ ವರದಿಯ ಪ್ರಕಾರ ಪುರಾತತ್ವ ಇಲಾಖೆಯ ಅಂತರ್ಗತ ಇರುವ ಧಾರ್ಮಿಕ ಸ್ಥಳಗಳ ಸ್ಥಾನಗಳಲ್ಲಿ ಪೂಜೆ ಮಾಡಲು ಅನುಮತಿ ನೀಡಲಾಗಿದೆ. ಕೇಂದ್ರ ಪುರಾತತ್ವ ಇಲಾಖೆಯಿಂದ ಅವರ ಅಧಿಕಾರದಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿ ಪೂಜೆಯ ಅನುಮತಿ ನೀಡಿದ್ದರೆ ಆಗ ರಾಜ್ಯಗಳಿಗೂ ಈ ಅನುಮತಿ ನೀಡಲು ಯಾವುದೇ ತಕರಾರು ಇರಬಾರದು. ಜಗನ್ನಾಥ ಪುರಿಯಲ್ಲಿ ಇರುವ ಕೋನಾರ್ಕ ಸೂರ್ಯಮಂದಿರದಲ್ಲಿ ಹಿಂದುಗಳಿಗೆ ಪೂಜೆಯ ಅಧಿಕಾರವಿಲ್ಲ. ಸೂರ್ಯದೇವನ ಮೂರ್ತಿ ಎದುರಿಗೆ ಇದ್ದರೂ ಕೂಡ  ಹಿಂದುಗಳಿಗೆ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ ಇದು ಒಂದು ರೀತಿಯ ಅನ್ಯಾಯವೇ ಆಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಹೇಳಿದರು.


ಹಿಂದುಗಳು ತಮ್ಮ ಸಂಸ್ಕೃತಿಯನ್ನು ಗೌರವಿಸಿದರೆ, ಇತರರೂ ಗೌರವಿಸುವರು - ರಣಜಿತ ಸಾವರ್ಕರ್ 

ಜೀವನ ನಡೆಸುವಾಗ ಸಂಸ್ಕೃತಿಯ ಅಭಿಮಾನ ಇರಬೇಕು. ಘಾರಾಪುರಿಯಲ್ಲಿನ ಗುಹೆ ನಮ್ಮ ಸಂಸ್ಕೃತಿ ಆಗಿದೆ. ಕೆಲವರಿಗೆ ಇದು  ಶ್ರದ್ಧಾಸ್ಥಾನವಾಗಿದ್ದರೆ ಇನ್ನು ಕೆಲವರಿಗೆ ಪೂಜಾ ಸ್ಥಳಗಳಾಗಿವೆ, ದೃಷ್ಟಿಕೋನ ಬೇರೆ ಬೇರೆ ಇರಬಹುದು, ಆದರೆ ಈ ಗುಹೆಗಳು ನಮ್ಮ ಪೂರ್ವಜರು ನಿರ್ಮಿಸಿದ್ದಾರೆ ಎಂಬುದು ಮಾತ್ರ ಸತ್ಯವಾಗಿದೆ. ಆದ್ದರಿಂದ ಅದರ ಅವಮಾನ ಮಾಡುವುದು ಯಾರಿಗೂ ಸಹಮತವಿಲ್ಲ. ಯಾರಾದರೂ ನಮ್ಮ ಮನೆಗೆ ಬರುವುದು ಮತ್ತು ದೇವರ ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಹೋಗುವುದು ಇದು ಯೋಗ್ಯವಲ್ಲ. ಚರ್ಚಿನಲ್ಲಿ ಚಪ್ಪಲಿ ಹಾಕಿಕೊಂಡು ಹೋದರೆ ಅಭ್ಯಂತರವಿಲ್ಲ ಆದರೆ ಹಿಂದುಗಳಲ್ಲಿ ಚಪ್ಪಲಿ ಹಾಕಿಕೊಂಡು ದೇವರ ಮನೆಗೆ ಹೋಗುವುದು ನಮ್ಮ ಸಂಸ್ಕೃತಿ ಅಲ್ಲ. ನಾವು ನಮ್ಮ ಸಂಸ್ಕೃತಿಯನ್ನು ಗೌರವಿಸಬೇಕು, ಆಗ ಬೇರೆಯವರು ಗೌರವಿಸುತ್ತಾರೆ, ಹೀಗೆ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ್ ಇವರು ಹೇಳಿದರು.


ಪುರಾತತ್ವ ಇಲಾಖೆಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಹಿಂದುಗಳಿಗೆ ಪೂಜೆಯ ಅಧಿಕಾರ ದೊರೆಯಬೇಕು - ಸುರೇಶ್ ಚೌಹಾಣಕೆ 

ಪುರಾತತ್ವ ಇಲಾಖೆಯ ಅಧಿಕಾರದಲ್ಲಿರುವ ದೇವಸ್ಥಾನಗಳಲ್ಲಿ ಪೂಜೆ ನಡೆಯುವುದಿಲ್ಲ; ಆದರೆ ಪುರಾತತ್ವ ಇಲಾಖೆಯ ಅಧಿಕಾರದಲ್ಲಿರುವ ಮಸೀದಿಗಳಲ್ಲಿ ನಮಾಜ ಪಠಣೆ ನಡೆಯುತ್ತದೆ. ಪುರಾತತ್ವ ಇಲಾಖೆಯ ಅಧಿಕಾರದಲ್ಲಿನ ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಚಪ್ಪಲಿ ಹಾಕಿಕೊಂಡು ಹೋಗುತ್ತಾರೆ. ಘಾರಾಪುರಿಯಲ್ಲಿನ ಧಾರ್ಮಿಕ ಸ್ಥಳದ ಸ್ಥಿತಿಯೂ ಹಾಗೆ ಇದೆ. ಪುರಾತತ್ವ ಇಲಾಖೆಯ ಅಧಿಕಾರದಲ್ಲಿರುವ ಹಿಂದುಗಳ ಎಷ್ಟು ಧಾರ್ಮಿಕ ಸ್ಥಳಗಳು ಇವೆ, ಆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಅರ್ಚನೆ ಆರಂಭಿಸಲು ಅನುಮತಿ ನೀಡಬೇಕು ಹಾಗೂ ಅಲ್ಲಿ ಚಪ್ಪಲಿ ಹಾಕಿಕೊಂಡು ಪ್ರವೇಶಿಸಲು ನಿಷೇಧಿಸಬೇಕು, ಎಂದು ನಾವು ಬೇಡಿಕೆ ಸಲ್ಲಿಸಿದ್ದೇವೆ ಎಂದು ಸುದರ್ಶನ ವಾಹಿನಿಯ ಸಂಪಾದಕದಾದ ಸುರೇಶ ಚೌಹಾಣಕೆ ಇವರು ಹೇಳಿದರು.


ಘಾರಾಪುರಿ ಗುಹೆ ಇದು ಶಿವನ ಸ್ಥಾನವಿದೆ. ಆದ್ದರಿಂದ ಘಾರಾಪುರಿ ಗುಹೆ ಸೋಮವಾರ ಮುಚ್ಚಬಾರದೆಂದು ನಾವು ಈ ಹಿಂದೆಯೇ ಭಾರತೀಯ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಇಲ್ಲಿಯ ಶಿವಮಂದಿರದಲ್ಲಿ ಪೂಜೆ ಮಾಡಲು ಸಾಧ್ಯವಾಗಬೇಕು ಎಂದೂ ನಾವು ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಘಾರಾಪುರಿಯ ಉಪಸರಪಂಚ ಬಳಿರಾಮ ಠಾಕೂರ್ ಇವರು ಈ ಸಮಯದಲ್ಲಿ ಹೇಳಿದರು.

 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top