ಗೋವಿಂದ ದಾಸ ಕಾಲೇಜಿನ ಎನ್.ಸಿ.ಸಿ. ಕೆಡೆಟ್ JUO ವಿವೇಕ್ ಎನ್. ಶೆಟ್ಟಿಗೆ ಸನ್ಮಾನ

Upayuktha
0



ಸುರತ್ಕಲ್‍: ಜನವರಿ 26ರಂದು ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಸುರತ್ಕಲ್‍ನ ಗೋವಿಂದ ದಾಸ ಕಾಲೇಜಿನ ಎನ್.ಸಿ.ಸಿ. ಕೆಡೆಟ್ ಅಂತಿಮ ಬಿ.ಕಾಂ.ನ JUO ವಿವೇಕ್ ಎನ್. ಶೆಟ್ಟಿ  ಅವರನ್ನು ಸನ್ಮಾನಿಸಲಾಯಿತು.



ಇವರು ಗಣರಾಜ್ಯೋತ್ಸವ ಪೆರೇಡ್ ಪ್ರಯುಕ್ತ ಅನೇಕ ಹಂತಗಳಲ್ಲಿ ನಡೆದ ತರಬೇತಿಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಎನ್.ಸಿ.ಸಿ ಮಹಾನಿರ್ದೇಶನಾಲಯ ಪದಕ (ಡಿಜಿ ಮೆಡಲ್) ಮತ್ತು ಉಪ ಮಹಾನ್ ನಿರ್ದೇಶನಾಲಯ ಪ್ರಶಂಸಾ ಪತ್ರವನ್ನು (ಡಿಡಿಜಿ ಕಮಾಂಡೇಶನ್ ಕಾರ್ಡ್) ಪಡೆದುಕೊಂಡಿರುತ್ತಾರೆ. ಪ್ರಧಾನ ಮಂತ್ರಿಯವರ ಸಮ್ಮುಖದಲ್ಲಿ ನಡೆದ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ತುಳುನಾಡಿನ ವಿಶಿಷ್ಟ ಜಾನಪದ ನೃತ್ಯ ಹುಲಿ ಕುಣಿತವನ್ನು ಪ್ರದರ್ಶಿಸಿ ಪ್ರಶಂಸೆಯನ್ನು ಪಡೆದುಕೊಂಡಿದ್ದಾರೆ.



 ಕಾಲೇಜಿನ ಆಡಳಿತಾತ್ಮ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ ಮತ್ತು  ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಅಭಿನಂದನಾ ನುಡಿಗಳನ್ನಾಡಿದರು.  ಎನ್.ಸಿ.ಸಿ ಅಧಿಕಾರಿ ಕ್ಯಾಪ್ಟನ್. ಡಾ. ಸುಧಾ ಯು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ನೀಲಪ್ಪ ವಿ., ಐಶೆ ಸಂಯೋಜಕ ಪ್ರೊ. ವಾಮನ ಕಾಮತ್ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top