ಶರೀರ ಅಂದ ಹಾಳುಮಾಡಿಕೊಳ್ಳಲು ಇಷ್ಟವಿಲ್ಲದೆ "ಭ್ರೂಣ" ಹತ್ಯೆ ಅಪರಾಧ: ಸ್ವರ್ಣಲತಾ

Upayuktha
0



ಉಜಿರೆ: ಅಂದಕ್ಕಾಗಿ   ಭ್ರೂಣ ಹತ್ಯೆಯನ್ನು ಮಾಡುವುದು ಒಂದು ಅಪರಾಧ ಅದರ ಜೊತೆಗೆ ಭ್ರೂಣವು ತಾಯಿಯ ಗರ್ಭದಲ್ಲಿರಬೇಕಾದರೆ ಆ ಭ್ರೂಣದ ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ. ಹಿಂದೆ ತಾಯಿಯ ಗರ್ಭದಲ್ಲಿ ಹೆಣ್ಣು ಅಥವಾ ಗಂಡು ಭ್ರೂಣವಿದೆಯೇ ಎಂದು ಪರಿಶೀಲಿಸಿ ಹೆಣ್ಣು ಎಂದು ತಿಳಿದ ಮರುಕ್ಷಣವೇ ಆ ಭ್ರೂಣವನ್ನು ಜಗತ್ತಿಗೆ ಕಾಲಿಡುವ ಮೊದಲೇ ಚಿವುಟಿ ಹಾಕುತ್ತಿದ್ದರು. ಅಂತಹ ಕೃತ್ಯಗಳನ್ನು ತಡೆಯಬೇಕೆಂದು ಬೆಳ್ತಂಗಡಿಯ ಹಿರಿಯ ವಕೀಲೆ ಸ್ವರ್ಣಲತಾ ಮಹಿಳೆಯರ ಕಾನೂನು ಸಬಲೀಕರಣ  ವಿಷಯದ ಬಗೆಗಿನ ಅತಿಥಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.



ಎಸ್. ಡಿ. ಎಂ ಕಾಲೇಜಿನ ಸಮ್ಯಕ್ ದರ್ಶನ ಭವನದಲ್ಲಿ ಬುಧವಾರದಂದು ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ, ಮಹಿಳಾ ಅಭಿವೃದ್ಧಿ ಕೋಶ, ಮಹಿಳಾ ಕುಂದು ಕೊರತೆ ನಿವಾರಣಾ ಕೋಶ ಮತ್ತು ಆಂತರಿಕ ದೂರುಗಳ ಸಮಿತಿ. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಿಂದ ನಡೆದ ಅಥಿತಿ ಉಪನ್ಯಾಸದಲ್ಲಿ ಮಾತನಾಡಿದ ಅವರು ಭ್ರೂಣ ಹತ್ಯೆ, ಲಿಂಗ ಪತ್ತೆ, ಬಾಲ್ಯ ವಿವಾಹ, ಪೋಕ್ಸೋ ಕಾಯಿದೆ ಹೀಗೆ  ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅವುಗಳ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಬಗ್ಗೆ ವಿವರಣೆ ನೀಡಿದರು.



ಇದರ ಜೊತೆ ಕಾನೂನು ಎನ್ನುವುದು ಒಂದು ದೊಡ್ಡ ಸಮುದ್ರ, ನಿತ್ಯ ಜೀವನಕ್ಕೆ ಬೇಕಾಗಿರುವ ಕಾನೂನನ್ನು ತಿಳಿಯುವುದು ನಮ್ಮ ಕರ್ತವ್ಯ ಹಾಗೂ ಒಬ್ಬ ವ್ಯಕ್ತಿಗೆ ಅದೇ ಹಕ್ಕುಗಳನ್ನು ಅಥವಾ ಕಾನೂನುಗಳನ್ನು ದುರ್ಬಳಕೆ ಮಾಡುವ ಹಕ್ಕಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು.



ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ. ಎ. ಕುಮಾರ್ ಹೆಗ್ಡೆ ಸಂವಿಧಾನ ಆಶಯಗಳನ್ನ ಪ್ರತಿಯೊಬ್ಬರಿಗೂ ದೊರಕುವ ಹಾಗೆ ಮಾಡುವುದು ನ್ಯಾಯಾಂಗ.ಪ್ರತಿಯೊಬ್ಬ ವ್ಯಕ್ತಿಯು  ಕಾನೂನಿನ ಬಗ್ಗೆ ಚೆನ್ನಾಗಿ ಅರಿತಿರಬೇಕು. ಕಾನೂ ನನ್ನು ಕಡೆಗಣಿಸಬಾರದು. ಹಾಗಾಗಿ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಉಪಯೋಗಕರವಾಗಲಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.



ಕಾರ್ಯಕ್ರಮದಲ್ಲಿ ಕಾಲೇಜಿನ ಮಹಿಳಾ ಕುಂದು ಕೊರತೆ ನಿವಾರಣಾ ಸಮಿತಿ ಮುಖ್ಯಸ್ಥೆ  ಮಾಲಿನಿ ಅಂಚನ್, ಸಂಯೋಜಕಿ ಅಕ್ಷತಾ, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಮುಖ್ಯಸ್ಥ ನಟರಾಜ್ ಹೆಚ್.ಕೆ  ಹಾಗೂ ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top