ಫೆ.19 : ಮಾತಾ ಅಮೃತಾನಂದಮಯಿ ಮಠದಲ್ಲಿ ಯೋಗ ತರಬೇತಿ

Upayuktha
0



ಮಂಗಳೂರು: ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಅಮೃತ ಯೋಗ ಕೇಂದ್ರದ ವತಿಯಿಂದ 'ಸ್ವಸ್ಥ ಜೀವನಕ್ಕೆ ಯೋಗ' ಎಂಬ ಧ್ಯೇಯದೊಂದಿಗೆ ದೇಲಂಪಾಡಿ ಯೋಗ ಪ್ರತಿಷ್ಠಾನದ ಸಹಯೋಗದೊಂದಿಗೆ ಫೆ. 19ರಿಂದ ಯೋಗ ತರಬೇತಿ ಶಿಬಿರ ನಡೆಯಲಿದೆ.



12 ದಿನಗಳ ತರಬೇತಿಯಲ್ಲಿ ಯೋಗ ಗುರುಗಳಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮತ್ತು ತಂಡದವರು ಸರಳ ವ್ಯಾಯಾಮ, ಸೂರ್ಯ ನಮಸ್ಕಾರ, ಯೋಗಾಸನ, ಪ್ರಾಣಾಯಾಮ, ಧ್ಯಾನ ಹಾಗೂ ಮಂತ್ರಮುದ್ರೆಗಳನ್ನು ಕಲಿಸುವರು. ಎಲ್ಲ ವಯಸ್ಸಿನವರು, ಪುರುಷರು, ಮಹಿಳೆಯರು, ಯಾವುದೇ ಜಾತಿ, ಮತ, ಧರ್ಮ, ಲಿಂಗಭೇದವಿಲ್ಲದೆ ಎಲ್ಲರಿಗೂ ಭಾಗವಹಿಸಲು ಅವಕಾಶವಿರುತ್ತದೆ. ಮೊದಲು ನೋಂದಣಿ ಮಾಡಿಕೊಂಡ 40 ಮಂದಿಗೆ ಮಾತ್ರ ಅವಕಾಶವಿರುತ್ತದೆ. 



ಅರ್ಜಿ ನಮೂನೆಯು ಬೋಳೂರು ಮಠದ ಆವರಣದಲ್ಲಿರುವ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಮಠದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತಕುಮಾರ ಪೆರ್ಲ ತಿಳಿಸಿದ್ದಾರೆ. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top