ಫೆ.17: ಅಡ್ಯನಡ್ಕ ಜನತಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ತಾಯಂದಿರ ಮಹಾ ಸಮಾವೇಶ

Upayuktha
0

ಅಡ್ಯನಡ್ಕ : ಬಂಟ್ವಾಳ ತಾಲೂಕಿನ ಅಡ್ಯನಡ್ಕ ಎಜುಕೇಶನಲ್ ಸೊಸೈಟಿ(ರಿ) ವತಿಯಿಂದ ತಾಯಂದಿರ ಮಹಾ ಸಮಾವೇಶ ಕಾರ್ಯಕ್ರಮವು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಫೆಬ್ರುವರಿ 17ರಂದು ನಡೆಯಲಿದೆ.



ಸುಂದರ ನಾಳೆಗೆ, ತಾಯಂದಿರ ಬೆಸುಗೆ' ಹಾಗೂ 'ಸಮೃದ್ಧ ಸುಶಿಕ್ಷಿತ ಕುಟುಂಬ ಬಂಧಕ್ಕೆ ದಿವ್ಯ ಸುಗಂಧ' ಸಮಾವೇಶದ ಘೋಷವಾಕ್ಯವಾಗಿದ್ದು . ಸಮಾವೇಶದಲ್ಲಿ 'ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಸಹಯೋಗ' ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ.            



 ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ಅಡ್ಯನಡ್ಕ ಇದರ ಅಧ್ಯಕ್ಷ  ಗೋವಿಂದ ಪ್ರಕಾಶ ಸಾಯ ಸಮಾವೇಶ ಉದ್ಘಾಟಿಸುವರು. ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ  ಆಯಿಷಾ ಎ. ಎ. ಪೆರ್ಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರಿನ ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಇದರ ಅಧ್ಯಕ್ಷರಾದ  ಸುಮಾ ಅರುಣ್ ಮಾನ್ವಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡಲಿರುವರು ಎಂದು  ಅಡ್ಯನಡ್ಕ ಎಂಜುಕೇಶನ್ ಸೊಸೈಟಿ ಆಡಳಿತಾಧಿಕಾರಿ ರಮೇಶ ಎಂ ಬಾಯಾರು ತಿಳಿಸಿರುತ್ತಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top