ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಗೆ ಪುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯಿಂದ ಪ್ರಮಾಣಪತ್ರ ದೊರೆತಿದೆ.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಂಬಿಕಾ ಹಾಸ್ಟೆಲ್ ಗಳಲ್ಲಿ ವಸತಿ ವ್ಯವಸ್ಥೆ ಹೊಂದಿದ್ದು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾದ ಅತ್ಯಂತ ಶುಚಿ ರುಚಿಯಾದ ಶುದ್ಧ ಸಸ್ಯಾಹಾರಿ ಊಟ ಉಪಹಾರಗಳ ವ್ಯವಸ್ಥೆಯನ್ನು ಅಂಬಿಕಾ ಹಾಸ್ಟೆಲ್ ನ ಅಡುಗೆಮನೆ ಒದಗಿಸಿಕೊಡುತ್ತಿದೆ. ಇತ್ತೀಚೆಗಷ್ಟೇ ಅಂಬಿಕಾ ಹಾಸ್ಟೆಲ್ ಗೆ ಸಂಬಂಧಿಸಿದಂತೆ ನೂತನ ಹಾಗೂ ಅತ್ಯಾಧುನಿಕ ವ್ಯವಸ್ಥೆಯ ಅಡಿಗೆ ಮನೆಯನ್ನು ನಿರ್ಮಿಸಿದ್ದು, ಆಹಾರದ ಗುಣಮಟ್ಟದ ಬಗೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಇದೀಗ ಆಹಾರದ ಗುಣಮಟ್ಟವನ್ನು ಪ್ರಮಾಣೀಕರಿಸುವ ಸರ್ಕಾರದ ಎಫ್‌ಎಫ್‌ಎಸ್‌ಎಐ ಪ್ರಮಾಣಪತ್ರವೂ ದೊರೆತಿರುವುದು ಗುಣಮಟ್ಟಕ್ಕೆ ಅಧಿಕೃತ ಮುದ್ರೆಯನ್ನೊದಗಿಸಿಕೊಟ್ಟಂತಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ