ಉಜಿರೆ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕಾರ

Upayuktha
0

 



ಉಜಿರೆ :  ಮಂಗಳೂರಿನ ಶ್ರೀನಿವಾಸ ಯೂನಿವರ್ಸಿಟಿ ಹಾಗೂ ಸಮೂಹ ಸಂಸ್ಥೆಗಳ  ಎ. ಶಾಮ ರಾವ್ ಫೌಂಡೇಶನ್ ವತಿಯಿಂದ ಸಂಸ್ಥಾಪಕರ ದಿನದ ಅಂಗವಾಗಿ ಕೊಡಮಾಡುವ ಎ. ಶಾಮ ರಾವ್ ಸ್ಮಾರಕ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಇವರು ಮಂಗಳೂರಿನ ಮುಕ್ಕದ ಶ್ರೀನಿವಾಸ ಯೂನಿವರ್ಸಿಟಿಯಲ್ಲಿ  ಸ್ವೀಕರಿಸಿದರು. 



ಶ್ರೀನಿವಾಸ ಯೂನಿವರ್ಸಿಟಿಯ ಕುಲಪತಿ ಸಿಎ. ರಾಘವೇಂದ್ರ ರಾವ್, ಉಪ ಕುಲಪತಿ ಶ್ರೀನಿವಾಸ ರಾವ್ , ಆಡಳಿತ ಮಂಡಳಿಯ ಟ್ರಸ್ಟಿಗಳಾದ ಎ.ವಿಜಯಲಕ್ಷ್ಮೀ ಆರ್ ರಾವ್ ಹಾಗೂ ಮಿತ್ರಾ ಎಸ್ ರಾವ್ ,  ಅತಿಥಿಗಳಾದ  ಬೆಂಗಳೂರಿನ ರಾಜೀವ ಗಾಂಧಿ ಹೆಲ್ತ್ ಸೈನ್ಸ್ ಇದರ ಸಿಂಡಿಕೇಟ್ ಸದಸ್ಯರಾದ ಯು.ಟಿ ಇಫ್ತಿಕರ್ ಅಲಿ , ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ಕಾರ್ಯ ನಿರ್ವಾಹಕ ನಿರ್ದೇಶಕ ಆಶಿಷ್ ಪಾಂಡೆ , ಮೌಲ್ಯಮಾಪನ ರಿಜಿಸ್ಟ್ರಾರ್ ಶ್ರೀನಿವಾಸ ಮಯ್ಯ , ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಡಾ.ಎ.ಆರ್ ಶಬರಾಯ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ನೀಡಿ ಗೌರವಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top