ಗಾಂಗೇಯ ಭೀಷ್ಮನ ಸ್ಮರಣೆ: ಅಯೋಧ್ಯೆಯಲ್ಲಿ ಗಂಗೆಯ ಮೆರವಣಿಗೆ

Upayuktha
0

ಅಯೋಧ್ಯೆ: ಶನಿವಾರ ಭೀಷ್ಮಾಷ್ಟಮಿ ಪ್ರಯುಕ್ತ ಅಯೋಧ್ಯೆಯಲ್ಲಿ ಶ್ರೀ ಪೇಜಾವರ ಶ್ರೀಗಳು ವಿಶಿಷ್ಟವಾಗಿ ಆಚರಿಸಿದರು. ಮುಂಜಾನೆ ಪಟ್ಟದ ದೇವರ ಪೂಜೆಯ ಬಳಿಕ ಭೀಷ್ಮನಿಗೆ ಅರ್ಘ್ಯ ಸಮರ್ಪಿಸಿದರು. ಬಳಿಕ ಗಾಂಗೇಯ ಭೀಷ್ಮನ ಸ್ಮರಣಾರ್ಥ ರಜತ ಕುಂಭದಲ್ಲಿ ಪವಿತ್ರ ಗಂಗೋದಕವನ್ನು ತುಂಬಿಸಿ ಗಂಗಾಪೂಜೆ ನೆರವೇರಿಸಿದರು.


ನಂತರ ಮಠದಿಂದ ಶಿಷ್ಯರು ಭಕ್ತರ ವಿಷ್ಣುಸಹಸ್ರನಾಮ‌ ಪಾರಾಯಣದೊಂದಿಗೆ ಮೆರವಣಿಗೆಯಲ್ಲಿ ಗಂಗೆಯನ್ನು ಅಯೋಧ್ಯೆ ರಾಮಮಂದಿರದ ಯಾಗಶಾಲೆಗೆ ತರಲಾಯಿತು. ಅಲ್ಲಿ ವೈದಿಕರಿಂದ ವಿವಿಧ ಹೋಮಹವನಗಳು ಹಾಗೂ ಶ್ರೀಗಳಿಂದ ಕಲಶಾರಾಧನೆ ಕಲಶಪೂಜೆಗಳನ್ನು ನೆರವೇರಿಸಿ ಶ್ರೀಬಾಲರಾಮನಿಗೆ ಗಾಂಗೇಯ ಭೀಷ್ಮಾಚಾರ್ಯರ ಪ್ರೀತ್ಯರ್ಥವಾಗಿ ಗಂಗಾಭಿಷೇಕ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top