ಬಜೆಟ್ ಗಾತ್ರ: 47.66 ಲಕ್ಷ ಕೋಟಿ ರೂಪಾಯಿ ಹೊಂದಿರುವುದು ಉತ್ತಮ ಅಂಶವಾಗಿದ್ದು,
ತೆರಿಗೆ ವಿನಾಯಿತಿ: 7 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ. ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು ಉತ್ತಮ ಅಂಶ.
ರೈಲ್ವೆ ಇಲಾಖೆಗೆ ಬೂಸ್ಟರ್: 40 ಸಾವಿರ ಸಾಮಾನ್ಯ ಬೋಗಿಗಳು ವಂದೇ ಭಾರತ್ ಮಾದರಿಯಲ್ಲಿ ಅಭಿವೃದ್ಧಿ
ಉಡಾಣ್ ಯೋಜನೆ: ಟೈರ್ 1 ಮತ್ತು ಟೈರ್ 2 ನಗರಗಳಿಗೂ ಯೋಜನೆ ವಿಸ್ತರಣೆ ರೈಲ್ವೆ ಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿರುವುದು ಸಂತೋಷದಾಯಕ.
ಆರೋಗ್ಯ ಯೋಜನೆ ವಿಸ್ತರಣೆ:
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆಯಾಗುತ್ತಿರುವುದು ಉತ್ತಮ. ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ ನಿರ್ಮಿಸಲಾಗುತ್ತಿರುವ 3 ಕೋಟಿ ಮನೆ ಸದ್ಯದಲ್ಲೇ ಪೂರ್ಣ. ಮುಂದಿನ 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಬಜೆಟ್ ನಲ್ಲಿ ಹೇಳಿದ್ದು, ಇದರ ಅನುಷ್ಟಾನ ವಾಗಬೇಕಾಗಿದೆ. 1 ಕೋಟಿ ಮನೆಗಳಿಗೆ ಉಚಿತ ಸೌರ ವಿದ್ಯುತ್ ಸಂಪರ್ಕ. ಈ ಯೋಜನೆಯಿಂದ ಫಲಾನುಭವಿಗಳು ವಾರ್ಷಿಕವಾಗಿ 15-18 ಸಾವಿರ ರೂ ಹಣ ಉಳಿಸಿಕೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಮೂರು ಆರ್ಥಿಕ ರೈಲ್ವೆ ಕಾರಿಡಾರ್ ನಿರ್ಮಾಣ:
ಬಹು ಮಾದರಿ ಸಂಪರ್ಕ ಕಲ್ಪಿಸುವ ಪಿಎಂ ಗತಿ ಶಕ್ತಿ ಕಾರಿಡಾರ್ ಅಡಿಯಲ್ಲಿ 1) ಖನಿಜ ಶಕ್ತಿ ಮತ್ತು ಸಿಮೆಂಟ್ ಕಾರಿಡಾರ್ 2) ಅಧಿಕ ಸಂಚಾರ ಸಾಂದ್ರತೆಯ ಕಾರಿಡಾರ್ 3) ಪೋರ್ಟ್ ಕನೆಕ್ಟಿವಿಟಿ ಕಾರಿಡಾರ್ ಕಾರ್ಯಕ್ರಮ ಜಾರಿಯಾಗುವುದು ಉತ್ತಮ ಅಂಶವಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ:
ಲಕ್ಷದ್ವೀಪ ಸೇರಿದಂತೆ ಹಲವು ಪ್ರವಾಸಿ ತಾಣಗಳ ಅಭಿವೃದ್ಧಿ ಉತ್ತಮವಾದ ಬೆಳವಣಿಗೆ
ವಿಕಸಿತ ಭಾರತಕ್ಕಾಗಿ ರಾಜ್ಯ ಸರ್ಕಾರಗಳಿಗೆ 75 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಣೆ
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಮಹಿಳಾ ಉದ್ಯಮಿಗಳಿಗಾಗಿ 43 ಕೋಟಿ ರೂ. ಸಾಲ ನೀಡಲಾಗುವುದು
9-14 ವರ್ಷದೊಳಗಿನ ಬಾಲಕಿಯರಿಗೆ ಸರ್ವೈಕಲ್ ಕ್ಯಾನ್ಸರ್ ಲಸಿಕೆಗೆ ಸರ್ಕಾರ ಉತ್ತೇಜನ
ಹೆಚ್ಚು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಚಿಂತನೆ
ಹೈನುಗಾರಿಕೆಗೆ ಉತ್ತೇಜನ ನೀಡಲು ಕಾರ್ಯಕ್ರಮ ಈ ಅಂಶಗಳು ವಿಕಸಿತ ಭಾರತವಾಗಲು ಈ ಬಜೆಟ್ ಪ್ರೇರಕವಾಗಿದೆ.ಚುನಾವಣಾ ವಷ೯ದ ಬಜೆಟ್ ಆದರೂ ಸಮತೋಲನ ಬಜೆಟ್ ಆಗಿರುವುದು ನೆಮ್ಮದಿಯ ಅಂಶವಾಗಿದೆ.
ಕೊನೆಯದಾಗಿ ಈ ಬಜೆಟ್ ಮಧ್ಯಂತರ ಆಗಿರುದರ ಹೊರತಾಗಿಯೂ ಉತ್ತಮವಾಗಿದೆ.
- ರಾಘವೇಂದ್ರ ಪ್ರಭು, ಕವಾ೯ಲು
ಸಂಪನ್ಮೂಲ ವ್ಯಕ್ತಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ