ಕೃಷಿಯನ್ನು ಉದ್ದಿಮೆಯಾಗಿ ಪರಿವರ್ತಿಸಬೇಕು: ಡಾ. ವಸಂತಕುಮಾರ್ ತಿಮಕಾಪುರ

Upayuktha
0

ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ  ಕಾಲೇಜಿನಲ್ಲಿ ಉಪನ್ಯಾಸ 

 



ನಿಟ್ಟೆ: ಇತ್ತೀಚೆಗೆ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕೃಷಿಯಲ್ಲಿ  ಸಾಮಾಜಿಕ ವ್ಯವಹಾರ’ ಎನ್ನುವ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮವನ್ನು   ಆಯೋಜಿಸಲಾಯಿತು. ಖ್ಯಾತ ವಿಜ್ಞಾನ ಲೇಖಕ, ಕೃಷಿಕ ಮತ್ತು ಸಾಮಾಜಿಕ ಉದ್ಯಮಿ ಡಾ. ವಸಂತಕುಮಾರ್ ತಿಮಕಾಪುರ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದರು.



ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ತಿಮಕಾಪುರ ಅವರು ಆಹಾರವು ಕೇವಲ ಜೀವನೋಪಾಯದ ಸಾಧನವಲ್ಲ, ಅದು ಆಯುಧ, ಶಾಂತಿ, ಶಕ್ತಿ,  ಸ್ವಾತಂತ್ರ್ಯ  ಮತ್ತು ಸಾರ್ವಭೌಮತ್ವವಾಗಿದೆ. ಹಾಗಾಗಿ  ಕೃಷಿಯನ್ನು ಉದ್ದಿಮೆಯಾಗಿಸುವಲ್ಲಿ ನಾವು ಸೋತಿದ್ದು 21 ನೇ  ಶತಮಾನವನ್ನು ನಾವು ಕೃಷಿಯನ್ನು ಉದ್ದಿಮೆಯಾಗಿ  ಪರಿವರ್ತಿಸಬೇಕು ಎಂದು ಕರೆನೀಡಿದರು. ಇದಕ್ಕಾಗಿ ವೈಜ್ಞಾನಿಕ ಮತ್ತು  ಆಧುನಿಕ  ಕೃಷಿಗೆ  ಉತ್ತೇಜನ ನೀಡಬೇಕು ಹಾಗೂ ಹೊಸ ಆವಿಷ್ಕಾರಗಳ ಕಡೆಗೆ ಯುವಜನತೆ ಒತ್ತು ನೀಡಬೇಕು ಎಂದರು.



ಕಾರ್ಯಕ್ರಮದಲ್ಲಿ ಸೋಶಿಯಲ್ ಬ್ಯುಸಿನೆಸ್ ಅಕಾಡೆಮಿಯ ಸಂಯೋಜಕರಾದ ಡಾ.ಕೆ.ವಿ. ಪ್ರಭಾಕರ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ  ರಮೇಶ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕರಾದ ಪ್ರಕಾಶ್ ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಕುಮಾರಿ ದೃಷ್ಟೀ ಬಾಳಿಗ ಕಾರ್ಯಕ್ರಮ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top