ಸುಮಾರು ಇಪ್ಪತ್ತು ವರುಷಗಳ ಹಿಂದೆ ಉದಯವಾಣಿಯಲ್ಲೊಂದು ಮೀಸಲಾತಿಯ ಪರಿಷ್ಕರಣೆಯ ಕುರಿತಾಗಿ ಒಂದು ಕಿರು ಲೇಖನ ಬರೆದಿದ್ದೆ. ಅದೇನೆಂದರೆ "ಮೀಸಲಾತಿ ಬೇಕು ಸರಿ ಆದರೆ ಮೀಸಲಾತಿ ಪಡೆದು ಉತ್ತಮ ಉದ್ಯೋಗ ಸ್ಥಾನಮಾನದಲ್ಲಿ ಇರುವವರ ಮಕ್ಕಳಿಗೂ ತಾವು ಅನುಭವಿಸಿದ ಮೀಸಲಾತಿಯನ್ನು ಕೊಡುವುದು ಅಥವಾ ತೆಗೆದುಕೊಳ್ಳುವುದು ಯಾವ ನ್ಯಾಯ ?ಕನಿಷ್ಠ ಪಕ್ಷ ಈ ಮೀಸಲಾತಿ ಅವರು ಬಿಟ್ಟು ಕೊಡುವುದರಿಂದಾಗಿ ಅವರದ್ದೇ ಜಾತಿ ಪಂಗಡದಲ್ಲಿ ಇರುವ ಕಡು ಬಡವರಿಗೆ ಅದರ ಫಲಸಿಕ್ಕಿ ಅವರು ಕೂಡಾ ನಮ್ಮ ಹಾಗೇ ಬದುಕುವ ಅವಕಾಶ ಮಾಡಿಕೊಡಬಹುದಲ್ಲಾ? ಈಗ ಪರಿಸ್ಥಿತಿ ಹೇಗಾಗಿದೆ ಅಂದರೆ ಮೀಸಲಾತಿ ತಿಂದವರೆ ಮೀಸಲಾತಿ ತಿನ್ನುತ್ತಿದ್ದಾರೆ ಬಿಟ್ಟರೆ ನಿಜವಾಗಿ ಯಾರಿಗೆ ದಕ್ಕ ಬೇಕೊ ಅವರಿಗೆ ದಕ್ಕುತ್ತಿಲ್ಲ.
ಸಂವಿಧಾನ ರೂಪಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಗೂ ಇದೇ ಅಭಿಪ್ರಾಯವಿದ್ದ ಕಾರಣ ಮೊದಲ ಹಂತದಲ್ಲಿ ಕೇವಲ ಹತ್ತು ವರುಷಗಳಿಗೆ ಮಾತ್ರ ಮೀಸಲಾತಿಗೆ ಗಡು ಹಾಕಿದ್ದರು. ಈ ಮೀಸಲಾತಿ ಸವಲತ್ತು ಎಲ್ಲರಿಗೂ ಸಿಗಬಹುದು ಅನ್ನುವ ನಿರೀಕ್ಷೆ ಅವರಲ್ಲಿತ್ತು. ಆದರೆ ಪರಿಸ್ಥಿತಿ ಏನಾಗಿದೆ ಕೇಳಿದರೆ ಇನ್ನೂ ನೂರಲ್ಲ ಸಾವಿರ ವರುಷಗಳಾದರು ಮೀಸಲಾತಿ ಯಾರಿಗೆ ಸಿಗಬೇಕು ಅವರಿಗೆ ಸಿಗುವುದಿಲ್ಲ. ಬಡ ಜಾತಿ ವಗ೯ದ ಹೆಸರಿನಲ್ಲಿ ದಲಿತ ಜಾತಿ ವಗ೯ದವರು ಅನುಭವಿಸುವ ಸ್ಥಿತಿ ನಮ್ಮದಾಗಿದೆ. ಈ ಕುರಿತಾಗಿ ಯಾವುದೇ ಸರ್ಕಾರ ಮಾತನಾಡುವ ಇಚ್ಛಾ ಶಕ್ತಿಯನ್ನು ತೇೂರಲು ಸಾಧ್ಯನೇ ಇಲ್ಲ. ಕಾರಣ ಓಟ್ ಬ್ಯಾಂಕ್ ರಾಜಕೀಯ. ಮೀಸಲಾತಿ ಹೆಚ್ಚಿಸಿಯಾರೇ ಹೊರತು ಈ ವಿಷಯದಲ್ಲಿ ಸುಧಾರಣೆ ತರಲು ಸಿದ್ಧರಿರುವ ಪಕ್ಷವಾಗಲಿ ವ್ಯಕ್ತಿಗಳಾಗಲಿ ನಾವಂತು ಸದ್ಯಕ್ಕೆ ಕಾಣಲು ಸಾಧ್ಯವಿಲ್ಲ. ಮೀಸಲಾತಿ ಪರಿಸ್ಥಿತಿ ಮುಂದೆ ಏನಾಗಬಹುದು ಕೇಳಿದರೆ ತನ್ನಿಂದ ತಾನೇ ನಶಿಸಿ ಹೇೂಗಬಹುದೇ ವಿನಾ:ಮನುಷ್ಯ ಜಾತಿಯಿಂದ ಇದಕ್ಕೆ ಇತಿಶ್ರೀ ಹಾಡಲು ಖಂಡಿತವಾಗಿಯೂ ಸಾಧ್ಯವಿಲ್ಲ.
ಈ ಮೀಸಲಾತಿ ಕುರಿತಾಗಿ ಮತ್ತೆ ನನಗೆ ನೆನಪಾಗಲು ಮುಖ್ಯ ಕಾರಣ ನಿನ್ನೆ ಸುಪ್ರೀಂ ಕೇೂಟ್ ೯ನಲ್ಲಿ ಇದೇ ವಿಚಾರ ಮತ್ತೆ ಪ್ರಸ್ತಾಪವಾಗಿ "ಮೀಸಲಾತಿ ಲಾಭ ಪಡೆದು ಉನ್ನತ ಉದ್ಯೋಗ ಪಡೆದ ಐ.ಎ.ಎಸ್/ಐ.ಪಿ.ಎಸ್..ಅಧಿಕಾರಿಗಳು ಉನ್ನತ ಸ್ಥಾನದಲ್ಲಿ ಇರುವ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಮಾಡಬೇಕು ಎನ್ನುವ ಅಭಿಪ್ರಾಯ ಸುಪ್ರೀಂ ಕೇೂಟ೯ನ ಪೀಠದಲ್ಲಿ ಚಚೆ೯ಗೆ ಬಂದಿದೆ. ಇದೊಂದು ಮೀಸಲಾತಿ ಮೇಲೆ ನ್ಯಾಯಾಂಗ ಚೆಲ್ಲಿದ ಹೊಸ ಬೆಳಕು ಅನ್ನುವುದು ನನ್ನ ಸ್ವಷ್ಟ ಅಭಿಪ್ರಾಯ. ಆದರೆ ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಅನ್ನುವುದು ನಮ್ಮ ಮುಂದಿರುವ ಯಕ್ಷ..ಪ್ರಶ್ನೆ ?
-ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ