ಫೆ.1ರಿಂದ ನಾರಾಯಣೀಯಂನಲ್ಲಿ ವೇದ ನಾದ ಯೋಗ ತರಂಗಿಣಿ

Upayuktha
0



ಬದಿಯಡ್ಕ: ನಾರಂಪಾಡಿ ಸಮೀಪದ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯಲ್ಲಿ ವೀಣಾವಾದಿನಿ ಸಂಗೀತ ವೇದಿಕ್ ತಾಂತ್ರಿಕ ವಿದ್ಯಾಪೀಠದ 25ನೇ ವರ್ಷಾಚರಣೆಯ ಅಂಗವಾಗಿ ಫೆ.1ರಿಂದ ನಾಲ್ಕು ದಿನಗಳ ಕಾಲ ವೇದನಾದ ಯೋಗ ತರಂಗಿಣಿ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ. 



ಫೆ.1ರಂದು ಬೆಳಗ್ಗೆ 1 ಗಂಟೆಗೆ ಚಕ್ರಾಬ್ಜ ಪೂಜೆಯು ಬ್ರಹ್ಮಶ್ರಿಗಳಾದ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದರಿ ಮತ್ತು ಬಾಲಕೃಷ್ಣ ಭಟ್ ನೇತೃತ್ವದಲ್ಲಿ ನಡೆಯಲಿದೆ. ಫೆ.2ರಂದು ಬೆಳಗ್ಗೆ 9.30ಕ್ಕೆ ಭದ್ರದೀಪಂ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಕೊಂಡೇವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಮುಲ್ಲಪಳ್ಳಿ ಕೃಷ್ಣನ್ ನಂಬೂದರಿ, ಬಳ್ಳಪದವು ರಾಧಾಕೃಷ್ಣ ಭಟ್, ಯೋಗ ಶಿಕ್ಷಕ ಪ್ರವೀಣ್ ಕುಮಾರ್ ಭಾಗವಹಿಸುವರು. ಸಂಜೆ 7.30ರಿಂದ ಶ್ರೀಚಕ್ರ ನವಾವರಣ ಪೂಜೆ ನಡೆಯಲಿದೆ. ಸಂಜೆ 6.30ರಿಂದ ಯೋಗೀಶ ಶರ್ಮ ಬಳ್ಳಪದವು ಅವರಿಂದ ನಾದಮಾಧುರಿ ನಡೆಯಲಿದೆ. 



ಫೆ.3ರಂದು ಬೆಳಗ್ಗೆ 9ರಿಂದ ಹೊಸಹಳ್ಳಿ ಕೆ. ವೆಂಕಟ್ರಾಮ್, ಹೊಸಹಳ್ಳಿ ಕೆ. ಸುಬ್ಬರಾವ್ ಹಾಗೂ ಹೊಸಹಳ್ಳಿ ವಿ. ರಾಘವನ್ ಅವರಿಂದ ದ್ವಂದ್ವ ಪಿಟೀಲು ನಡೆಯಲಿದೆ. ನಿಕ್ಷಿತ್ ಪುತ್ತೂರು (ಮೃದಂಗ), ಮಾಂಜೂರು  ಉಣ್ಣಿಕೃಷ್ಣನ್ (ಘಟಂ) ಸಹಕರಿಸುವರು. ಬೆಳಗ್ಗೆ 11ರಿಂದ ರಿಕಿಶಾ ಬೆಂಗಳೂರು, ವಿಷ್ಣು ಶರ್ಮ ಪಂಜರಿಕೆ, ರಮ್ಯಾ ಮಾಧವನ್ ಕೈತಪ್ರಂ, ಪಲ್ಲವಿ ರಾವ್ ಸುರತ್ಕಲ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 4ರಿಂದ ಗುರು ಪೂಜೆ ನಡೆಯಲಿದೆ. ಸಂಜೆ 5ರಿಂದ ಹರಿಪ್ರಸಾದ ಸುಬ್ರಹ್ಮಣ್ಯನ್ ಅವರಿಂದ ಕೊಳಲುವಾದನ ನಡೆಯಲಿದೆ.   ವಿಜು ಎಸ್ ಆನಂದ (ಪಿಟೀಲು), ವೈಕಂ ಪ್ರಸಾದ್(ಮೃದಂಗ), ಮಂಜೂರು ಉಣ್ಣಿಕೃಷ್ಣನ್ (ಘಟಂ), ಪಯ್ಯನ್ನೂರು ಗೋವಿಂದ ಪ್ರಸಾದ್ (ಮೋರ್ಸಿಂಗ್) ಸಹಕರಿಸುವರು. ಸಂಜೆ 7ರಿಂದ ವಿನಿತಾ ನೆಡುಂಗಡಿ ಅವರಿಂದ ಮೋಹಿನಿಯಾಟ್ಟಂ ಜರುಗಲಿದೆ. ಹಿಮ್ಮೇಳದಲ್ಲಿ ಕೊಟಕ್ಕಲ್ ಮಧು (ಗಾಯನ), ಸುರೇಶ್ ಅಂಬಾಡಿ(ಪಿಟೀಲು), ಕತ್ತಿಕುಲಂಗರ ಕಣ್ಣನ್ (ಕೊಳಲು), ಕತ್ತಿಕುಲಂಗರ ಉಣ್ಣಿಕೃಷ್ಣನ್ (ಮೃದಂಗ) ಭಾಗವಹಿಸುವರು. 



ಫೆ.4ರಂದು ಬೆಳಗ್ಗೆ 6.15ಕ್ಕೆ ಯೋಗ ಶಿಕ್ಷಕ ಪ್ರವೀಣ್ ಕುಮಾರ ಅವರಿಂದ ಹತ ಯೋಗ, ಬೆಳಗ್ಗೆ 9ರಿಂದ ಪಂಚರತ್ನ ಕೃತಿಯ ಆಲಾಪನೆ ನಡೆಯಲಿದೆ. ಅಪರಾಹ್ನ 3ರಿಂದ ವಾಗ್ಗೇಯಕಾರ ಡಾ. ಎಂ ಬಾಲಮುರಳೀಕೃಷ್ಣ ಸಂಸ್ಮರಣೆ ನಡೆಯಲಿದೆ. ಸಂಜೆ 4ರಿಂದ ವೀಣಾವಾದಿನಿ ಪುರಸ್ಕಾರ ಪ್ರದಾನ ನಡೆಯಲಿದೆ. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕಾಸರಗೋಡಿನ ಶಾಸಕ ಎನ್ ಎ ನೆಲ್ಲಿಕ್ಕುನ್ನು ಮುಖ್ಯ ಅತಿಥಿಯಾಗಿರುವರು. ಬೆಂಗಳೂರಿನ ರೇವತಿ ಕಾಮತ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಎಣ್ಮಕಜೆ ಸುಧೀರ್ ಕುಮಾರ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಮೃದಂಗ ವಿದ್ವಾನ್ ಚೇರ್ತಲ ಜಿ ಕೃಷ್ಣ ಕುಮಾರ ಅವರಿಗೆ 2024ರ ಸಾಲಿನ ವೀಣಾವಾದಿನಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಂಜೆ 5.30ರಿಂದ ಎಂ ಕೆ ಶಂಕರನ್ ನಂಬೂದರಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಲಿದೆ. ಹಿಮ್ಮೇಳದಲ್ಲಿ ಮಂಜೂರು ರಂಜಿತ್(ಪಿಟೀಲು), ಚೇರ್ತಲ ಜಿ ಕೃಷ್ಣ ಕುಮಾರ (ಮೃದಂಗ), ಉಡುಪಿ ಶ್ರೀಧರ (ಘಟಂ), ಪಯ್ಯನ್ನೂರು ಗೋವಿಂದ ಶರ್ಮ (ಮೋರ್ಸಿಂಗ್) ಸಹಕರಿಸಲಿದ್ದಾರೆ ಎಂದು ವೀಣಾವಾದಿನಿ ಸಂಗೀತ ವಿದ್ಯಾಪೀಠದ ಮುಖ್ಯಸ್ಥ ಯೋಗೀಶ ಶರ್ಮ ಬಳ್ಳಪದವು ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top