ಶ್ರೀರಾಮ ಕಥಾ ಲೇಖನ ಅಭಿಯಾನ-25: ನಿತ್ಯ ಜೀವನದಲ್ಲಿ ರಾಮಾಯಣದ ಉಪಯೋಗ

Upayuktha
0




-ರೇಖಾ ಮುತಾಲಿಕ್

ರಾಮಾಯಣ 

ರಾಮಾಯಣ ವಾಲ್ಮೀಕಿ ಬರೆದ ಸುಂದರ ಗ್ರಂಥ, ಇದು ಶ್ರೀ ರಾಮನ ಕತೆಯನ್ನು ಹೇಳುತ್ತದೆ.. ರಾಮ ಎಂಬವನು ದಶರಥ ರಾಜನ ಪುತ್ರ.ಪ್ರಜೆಗಳಿಗೆ ಅತ್ಯಂತ ಉತ್ತಮ ಆಡಳಿತ ನೀಡಿ ಅತ್ಯಂತ ಶ್ರೇಷ್ಠ ರಾಜನೆಂದು ಹೆಸರು ಪಡೆದವನು.

ನಮ್ಮ ನಿತ್ಯ ಜೀವನದಲ್ಲಿ ರಾಮಾಯಣದಲ್ಲಿ ಬರುವ ಅನೇಕ ಶಬ್ದಗಳನ್ನು ಮತ್ತು ಗೂಡಾರ್ಥಗಳನ್ನು ನಾವು ನಮಗೆ ಅರಿವಿಲ್ಲದೆಯೇ ನುಡಿಗಟ್ಟಿನಂತೆ ಪ್ರಯೋಗಿಸುತ್ತೇವೆ. ಇಂಥ ಶಬ್ದಗಳ ಬಳಕೆ ಮತ್ತು ಅವುಗಳ ವಿಸ್ತೃತ ಅರ್ಥ ತಿಳಿಯಲು ಪ್ರಯತ್ನಿಸೋಣ.


1. ರಾಮರಾಜ್ಯ

ರಾಮರಾಜ್ಯ ಎಂದರೆ ಸುಖ ಸಮೃದ್ಧಿ ಹೊಂದಿದ ರಾಜ್ಯ ಎಂಬ ಅರ್ಥವಿದೆ. ರಾಮ ರಾಜ್ಯದಲ್ಲಿ ಎಲ್ಲೆಲ್ಲೂ ನ್ಯಾಯ, ಸತ್ಯ,ರಾಜನ ದಯಾಪರತೆ ತುಂಬಿತ್ತು.ಕೊಲೆ,ಸುಲಿಗೆ, ದರೋಡೆ, ಸುಳ್ಳು ಹೇಳುವುದು ಯಾವುದೂ ಅಲ್ಲಿರಲಿಲ್ಲ.. ಸತ್ಯ ಎಂಬುದು ನಿಜ ಎಂಬುದಕ್ಕೆ ಅನ್ವರ್ಥನಾಮದಂತಿತ್ತು.ಇಂಥ ಉತೃಷ್ಟ ಆಡಳಿತ ಇತ್ತು ಶ್ರೀರಾಮನ ಕಾಲದಲ್ಲಿ.ಭಾರತ ದೇಶದಲ್ಲಿ ಇಂಥ ಆಡಳಿತ ಬರಲೆಂದು ಎಲ್ಲರೂ ಆಶಿಸುತ್ತಾರೆ. ಇದಕ್ಕಾಗಿ ಅನೇಕ ಪ್ರಯತ್ನ ನಡೆದಿವೆ ಯಶಸ್ವಿಯೂ ಆಗುತ್ತಿವೆ.


2.ಮರ್ಯಾದಾ ಪುರುಷೋತ್ತಮ

ಶ್ರೀ ರಾಮನ ವ್ಯಕ್ತಿತ್ವ ಹೇಗಿತ್ತು ಎಂದರೆ ಮಾತಿನಲ್ಲಿ ನೈಪುಣ್ಯತೆ ಇತ್ತು .ಗುರು ಹಿರಿಯರನ್ನು ವಿನಯ ಮತ್ತು ಗೌರವದಿಂದ, ತಮ್ಮಂದಿರನ್ನು ಪ್ರೀತಿಯಿಂದ, ಪತ್ನಿಯನ್ನು ಪ್ರೇಮದಿಂದ, ಚಿಕ್ಕವರನ್ನು ವಾತ್ಸಲ್ಯದಿಂದ, ಪ್ರಜೆಗಳನ್ನು ಸ್ನೇಹದಿಂದ ಮಾತಾಡಿಸುತ್ತಿದ್ದ. ಇಂಥ ನಡವಳಿಕೆಯೇ ಅವನನ್ನು ಮರ್ಯಾದಾ ಪುರುಷೋತ್ತಮನೆಂದು ಕರೆಯಿಸಿಕೊಳ್ಳುವಂತೆ ಮಾಡಿತು.ನಮ್ಮ ದೈನಂದಿನ ಜೀವನದಲ್ಲಿ ಇಂಥ ನಡವಳಿಕೆ ಇರುವ ವ್ಯಕ್ತಿಯನ್ನು ಕಂಡರೆ, ನಾವು, "ಶ್ರೀ ರಾಮ" ಇದ್ದಂತೆ ಇದ್ದಾನೆ ಅಂತೇವೆ.


3. ಸೀತೆ ಅಗ್ನಿಪರೀಕ್ಷೆ

ಸೀತೆ ಜನಕರಾಜನ ಪುತ್ರಿ, ಜಗದೇಕ ಸುಂದರಿ,,ಶ್ರೀ ರಾಮನ ಪತ್ನಿ. ಅದೆಷ್ಟು ತೊಂದರೆಗಳು ಅವಳ ಜೀವನದಲ್ಲಿ ಎದುರಾದವು, ಮದುವೆಯಾದ ಕೆಲವೇ ತಿಂಗಳ ನಂತರ ವನವಾಸ, ಆಮೇಲೆ ಅಗ್ನಿಪರೀಕ್ಷೆ, ರಾವಣನನ್ನು ಸಂಹಾರ ಮಾಡಿದ ನಂತರ ರಾಮ ಸೀತೆಯನ್ನು ತರಲು ಲಕ್ಷ್ಮಣ ನನ್ನು ಕಳಿಸುತ್ತಾನೆ. ಸೀತೆಯನ್ನು ಹಾಗೆಯೇ ಪತ್ನಿಯಾಗಿ ಸ್ವೀಕಾರ ಮಾಡದೇ ಅಗ್ನಿಪರೀಕ್ಷೆ ಏರ್ಪಡಿಸುತ್ತಾನೆ.ಸೀತೆ ಪರಿಶುದ್ಧಳು ಎಂದು ಜಗಕೆ ತೋರಿಸಲು. ಅವಳನ್ನು ಅಗ್ನಿದೇವ ಸ್ವಲ್ಪವೂ ಹಾನಿ ಮಾಡದೇ ತಂದು ಒಪ್ಪಿಸುತ್ತಾನೆ. ಪುನಃ ಅಯೋಧ್ಯೆಗೆ ಮರಳಿದರೂ ಆಮೇಲೆ ಗರ್ಭಿಣಿ ಸೀತೆ ಮತ್ತೆ ಕಾಡಿನಲ್ಲಿ ಶ್ರೀ ವಾಲ್ಮೀಕಿ ಋಷಿಗಳ ಆಶ್ರಯದಲ್ಲಿ ಬದುಕು ಸವೆಸುತ್ತಾಳೆ. ಸೀತೆಗೆ ಹಲವು ಬಾರಿ ಕಠಿಣ ಪರೀಕ್ಷೆಗಳು ಎದುರಾಗುತ್ತವೆ.ಎಷ್ಟೇ ಕಷ್ಟ ಬಂದರೂ, ಧರಿಣಿದೇವಿಯ ಪುತ್ರಿ ಧರಿಣಿದೇವಿಯಂತೆ ಸಹಿಸಿದಳುಯಾರಾದರೂ ನಿಜ ಜೀವನದಲ್ಲಿ ಸರಣಿಯಂತೆ ಕಷ್ಟ ಅನುಭವಿಸಿದರೆ ಬಹಳ ಕಷ್ಟಪಟ್ಟರೆ ಎಂಥ ಅಗ್ನಿ ಪರೀಕ್ಷೆ ರೀ,, ಅದು ಹ್ಯಾಗೆ ಸಹಿಸಿಕೊಂಡ್ರಿ ಎನ್ನುತ್ತಾರೆ.ಯಾವುದೇ ಸ್ತ್ರೀ ಬಹಳ ಸಹನಶಕ್ತಿ ಹೊಂದಿದ್ದರೆ ಅವಳನ್ನು ಸೀತಾ ಇದ್ದಂಗೆ ಇದ್ದಾಳೆ, ಎಷ್ಟೊಂದು ಸಹನಶೀಲ ಮನಸ್ಸು ಅಬ್ಬಾ ಅಂತೇವೆ.


4.ಶೂರ್ಪನಖಿ

ಇದು ರಾಮನ ಕಥಾನಕದಲ್ಲಿನ ಮುಖ್ಯ ಪಾತ್ರ., ಶೂರ್ಪನಖಿ ಪರ್ಣಕುಟಿಯಲ್ಲಿದ್ದ ರಾಮ ಲಕ್ಷ್ಮಣರನ್ನು ಮೋಹಿಸಿ ಮದುವೆಯಾಗಲು ಪ್ರಯತ್ನಿಸಿ ಸೋತಳು.ಶೂರ್ಪನಖಿ ಅವಮಾನ ಸಹಿಸದೇ ರಾವಣ ಸೀತೆಯನ್ನು ಅಪಹರಣ ಮಾಡಲು ಕುಮ್ಮಕ್ಕು ನೀಡಿದಳು.ಕೋಪಗೊಂಡ ರಾವಣ, ಯುಕ್ತಿಯಿಂದ ಪರ್ಣಕುಟೀರಕ್ಕೆ ತೆರಳಿ ಹೊಸ ವೇಷ ಧರಿಸಿ, ಸೀತಾಪಹರಣ ಮಾಡಿದ.ಜೀವನದಲ್ಲೂ ಇಂಥ ಅನೇಕ ಶೂರ್ಪನಖಿಯರು ಸುಖಿ ಸಂಸಾರ ಕಂಡು ಹೊಟ್ಟೇಕಿಚ್ಚಲಿ ಬೇರೆಯವರ ಸಂಸಾರದಲ್ಲಿ ಹುಳಿ ಹಿಂಡಲು ಬರುತ್ತಾರೆ. ಎಚ್ಚರ ವಹಿಸಬೇಕು.


5. ಮಾಯಾಮೃಗ

ಚಿನ್ನದ ಜಿಂಕೆ ನಿಜ ಜೀವನದಲ್ಲಿ ಇರುವುದಿಲ್ಲ ಎಂದು ತಿಳಿದಿದ್ದರೂ ಒಂದು ಕ್ಷಣ ಅದರ ವ್ಯಾಮೋಹಕ್ಕೆ ಒಳಗಾಗಿ ಆ ಜಿಂಕೆ ತರಲು ಹಠ ಹಿಡಿಯುತ್ತಾಳೆ ಸೀತೆ.ಮಾಯಾಮೃಗ ಬೆನ್ನಟ್ಟಿದ ರಾಮ, ಮಾಯಾಮೃಗ ವೇಷಧಾರಿ ರಾವಣನ ನಂಬಿಗಸ್ತ ಮಾರೀಚನನ್ನು ಕೊಲ್ಲುತ್ತಾನೆ. ನಮ್ಮ ಜೀವನದಲ್ಲೂ ಇಂಥ ಮಾಯೆ ಹುಟ್ಟಿಸುವ ಅನೇಕ ಮಾಯಮೃಗಗಳಿವೆ. ಸಂಸಾರಿಕ ವ್ಯಾಮೋಹ ಹೆಚ್ಚಿಸುವ ಅನೇಕ ವಸ್ತುಗಳು, Tv, ಅಂತರ್ಜಾಲ, ಮಾಯಾಮೃಗದಂತಿವೆ ಅವುಗಳ ಮಾಯೆಗೆ ಬಲಿಬೀಳದೆ ಜೀವನವನ್ನು ಸತ್ಪಥದಲ್ಲಿ ನಡೆಸಿ ಸಾರ್ಥಕ ಮಾಡಿಕೊಳ್ಳಬೇಕು.


6.ಸುಗ್ರೀವಾಜ್ಞೆ

ಇದೊಂದು ವಿಶಿಷ್ಟ, ಮಹತ್ವದ ಶಬ್ದವಾಗಿದ್ದು,ಬರೀರಾಮಾಯಣದಲ್ಲಷ್ಟೇ ಉಪಯೋಗದಲ್ಲಿರದೆ, ಇಂದಿನ ರಾಜಕೀಯಕ್ಕೂ ಬಳಸಲ್ಪಡುತ್ತದೆ.ಯಾವುದೇ ಕಾರ್ಯಕ್ಕೆ ಚಾಲನೆ ನೀಡಿ ಅದರಂತೆ ಸರ್ವರೂ ಸಹಕರಿಸಿ ಆಜ್ಞೆಯನ್ನು ಪಾಲಿಸುವುದನ್ನೇ ಸುಗ್ರೀವಾಜ್ಞೆ ಎನ್ನುತ್ತಾರೆ. ಸುಗ್ರೀವ ಸೀತೆಯನ್ನು ಹುಡುಕುವಂತೆ ತನ್ನ ಎಲ್ಲ ಸೈನಿಕರಿಗೆ ಕಟ್ಟಪ್ಪಣೆ ಮಾಡುತ್ತಾನೆ. ನಾಲ್ಕು ದಿಕ್ಕುಗಳಿಗೆ ನಾಲ್ಕು ತಂಡಗಳನ್ನು ರಚಿಸಿ, ಒಂದು ತಿಂಗಳೊಳಗಾಗಿ ಸೀತೆಯ ಸುಳಿವು ಕಂಡುಹಿಡಿಯಲೇಬೇಕೆಂದು ಆಜ್ಞೆ ಮಾಡುತ್ತಾನೆ. ಕಂಡು ಹಿಡಿಯದಿದ್ದರೆ ಕಠಿಣ ಶಿಕ್ಷೆಗೆ ಗುರಿಪಡಿಸುವುದಾಗಿ ಹೇಳುತ್ತಾನೆ. ಈ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿ ವಾನರ ಸೈನ್ಯ ಸೀತೆ ಇರುವ ಜಾಗವನ್ನು ಕಂಡುಹಿಡಿದು ತಿಳಿಸುತ್ತಾರೆ.

ಇಂದಿನ ಕಾಲದಲ್ಲಿ ರಾಜಕೀಯದಲ್ಲೂ ಇದನ್ನು ಬಳಸುತ್ತಾರೆ. ಕೆಲವೊಮ್ಮೆ ಕೆಲ ವಿಷಯಗಳಲ್ಲಿ ತ್ವರಿತವಾಗಿ ನಿರ್ಧಾರ ಮಾಡುವ ಸಂದರ್ಭದಲ್ಲಿ ಸರ್ಕಾರ ಸದನದ ಮೇಲ್ಮನೆ, ಕೆಳಮನೆಯ ಸದಸ್ಯರ ಅನುಮೋದನೆ ಪಡೆಯದೇ, ನೇರವಾಗಿ ರಾಜ್ಯಪಾಲ, ಅಥವಾ ರಾಷ್ಟ್ರಪತಿಗಳ ಸಹಿ ಪಡೆದು ಕಾನೂನನ್ನು ಜಾರಿಗೆ ತರುತ್ತಾರೆ. ಇದನ್ನೇ ಸುಗ್ರೀವಾಜ್ಞೆ ಎನ್ನುತ್ತಾರೆ.


7. ಪಿತೃವಾಕ್ಯ ಪರಿಪಾಲನೆ

ಇಂದಿನ ದಿನಗಳಲ್ಲಿ ಈ ಶಬ್ದದ ಬಳಕೆ ಕಠಿಣವೇ ಸರಿ. ರಾಮಾಯಣದಲ್ಲಿ ತಂದೆ ತನ್ನ ಮಲತಾಯಿ ಕೈಕೇಯಿಗಾಗಿ ಕೊಟ್ಟ ವಚನ ಪರಿಪಾಲನೆ ಮಾಡುವುದಕ್ಕಾಗಿ ರಾಮ ಸಮಸ್ತ ರಾಜವೈಭೋಗ ತೊರೆದು, 14 ವರ್ಷ ವನವಾಸ ಮುಗಿಸಿ ತನ್ನ ರಾಜ್ಯಕ್ಕೆ ಮರಳುತ್ತಾನೆ ಇಂದಿನ ದಿನಗಳಲ್ಲಿ, ಸಾವಿರಕೊಬ್ಬರು, ಲಕ್ಷಕ್ಕೊಬ್ಬರು ಇರಬಹುದು.


8.ಕುಂಭಕರ್ಣ

ರಾಮಾಯಣದಲ್ಲಿ ಮತ್ತೊಂದು ಪಾತ್ರವಿದು. ರಾವಣನ ತಮ್ಮ ಕುಂಭಕರ್ಣ ಯಾವಾಗಲೂ ಸಖತ್ ಊಟ ಮಾಡಿ ಯಾವಾಗಲೂ ನಿದ್ದೆ ಮಾಡುವ ರಾಕ್ಷಸ.ಬ್ರಹ್ಮದೇವರ ಬಳಿ ಒಳ್ಳೆಯ ವರ ಕೇಳೋಕೆ ಹೋಗಿ ಏನೋ ಅವಾಂತರ ಮಾಡ್ಕೊಂಡು . ಎಡವಟ್ಟು ಮಾಡ್ಕೋತಾನೆ ನಿಜ ಜೀವನದಲ್ಲಿ ನಾವು ನೋಡುವ ಹಾಸ್ಯವಿದು. ಯಾರಾದರೂ, ಅತಿಯಾಗಿ ಮಲಗಿದರೆ, "ಏನ್ ಕುಂಭಕರ್ಣನ ಹಾಗೇ ನಿದ್ರೆ ಮಾಡ್ತಿಯಪ್ಪ" ಎಂದು ತಮಾಷೆಗೆ ಹೇಳುತ್ತಾರೆ. ಅತಿಯಾಗಿ ತಿಂದರೂ ಕುಂಭ ಕರ್ಣನ ಹೊಟ್ಟೆಯೋ ನಿನ್ನದು ಎಂದು ಹಾಸ್ಯ ಮಾಡುತ್ತಾರೆ.


9.ಕಪಿಚೇಷ್ಟೆ

ಅಶೋಕವನದಲ್ಲಿ ಸೀತೆನ ಭೇಟಿಯಾದ ಹನುಮಂತಗೆ ತುಂಬಾ ಹಸಿವು, ಅಶೋಕ ವನದಲ್ಲಿರೋ ಅನೇಕ ಹಣ್ಣಿನ ಗಿಡಗಳನ್ನು ನೋಡಿ ಹಸಿವು ಹೆಚ್ಛೇ ಆಗುತ್ತೆ..ಆಗ ಶುರುವಾಗುತ್ತೆ ಕಪಿಚೇಷ್ಟೆ.. ಅತ್ತಿಂದಿತ್ತ ಕುಣಿದು ಜಿಗಿದು ಬಂದ ಸೈನಿಕರ ಕೈಗೆ ಸಿಗದೇ ಬಹಳ ಕಪಿಚೇಷ್ಟೆ ಮಾಡ್ತಾನೆ.ಆಮೇಲೆ ಬ್ರಹ್ಮಾಸ್ತ್ರಕ್ಕೆ ಶರಣಾಗಿ, ಬಂಧಿಯಾಗುತ್ತಾನೆ.

ನಾವೂ ಮಕ್ಕಳು ಮಾಡುವತುಂಟಾಟ ನೋಡಿ ಏನೋ ಅದು ಕಪಿಚೇಷ್ಟೆ, ಸುಮ್ನಿರೋಕಾಗಲ್ವ,, ಒಳ್ಳೇ ಮಂಗನ ತರ ಆಡ್ತೀಯ,, ಬಾಲ ಒಂದು ಕಡಿಮೆ ನಿನಗೆ ಅನ್ನುತ್ತಾ ತಮಾಷೆ ಮಾಡ್ತೇವೆ.


10.ಹನುಮಂತನ ಬಾಲ

ರಾವಣನ ಸಭೆಯಲ್ಲಿ ಹನುಮಂತ ರಾಮರಾಮದೂತನಾಗಿ. ರಾಮನ ಸಂದೇಶ ತಿಳಿಸುತ್ತಾನೆ ಹನುಮಂತ, ಕೋಪದಿಂದ ಅವನನ್ನು ಬಂಧಿಸಲು ಆಜ್ಞೆ ಮಾಡುತ್ತಾನೆ ರಾವಣ . ಅದು ತಪ್ಪು ಎಂದು ವಿಭೀಷಣ ಹೇಳಿದ್ದರಿಂದ, ಕೋತಿಗೆ ಬಾಲವೆಂದರೆ ಅತ್ಯಂತ ಪ್ರೀತಿ, ಬಾಲಕ್ಕೆ ಬೆಂಕಿ ಹಚ್ಚಲು ಆಜ್ಞೆ ಮಾಡುತ್ತಾನೆ.

ಆಗ ಹನುಮಂತನ ಬಾಲಕ್ಕೆ ಬಟ್ಟೆ ಸುತ್ತಲು ಹೋದರೆ, ಬಾಲ ಉದ್ದಕ್ಕೆ ಬೆಳೆಯುತ್ತಲೇ ಹೋಗುತ್ತದೆ. ಊರೊಳಗಿನ ಬಟ್ಟೆ ತಂದು ಸುತ್ತಿದರೂ ಬಾಲಕ್ಕೆ ಸಾಕಾಗುವುದಿಲ್ಲ. ಹೇಗೋ ಕಷ್ಟಪಟ್ಟು ಬೆಂಕಿ ಹಚ್ಚುತ್ತಾ ನಗುತ್ತಾರೆ. ಅದೇ ಬೆಂಕಿ ಇಡೀ ಲಂಕೇಯನ್ನೇ ದಹಿಸುತ್ತದೆ. ನಾವೂ ಕೂಡ ಎಲ್ಲೋ ಹೋದಾಗ ಕ್ಯೂ ಬೆಳೀತಾ ಹೋದರೆ, ಏನಪ್ಪಾ ಇದು ಹನುಮಂತನ ಬಾಲ ಬೆಳೆದ ಹಾಗೇ ಬೆಳೀತಾ ಇದೆಯಲ್ಲಾ! ಎನ್ನುತ್ತೇವೆ.


11.ರಾತ್ರಿಯೆಲ್ಲಾ ರಾಮಾಯಣ ಕೇಳಿ...

ಇದೊಂದು ಮಾತನ್ನು ಪದೇ ಪದೇ ನಿಜ ಜೀವನದಲ್ಲಿ ಆಡೋದನ್ನು ಕೇಳ್ತೇವೆ.. ಯಾರಾದ್ರೂ ಗಮನ ಕೊಡದೇ ನಾವು ಹೇಳುವ ಮಾತುಗಳನ್ನು ಕೇಳಿಸಿಕೊಂಡು, ನೀವೇನು ಹೇಳಿದ್ರಿ ಕೇಳಲೇ ಇಲ್ಲಾ ಅಂದಾಗ, ಸರಿ ಸರಿ,, ಅದೇನೋ, ಅಂತಾರಲ್ಲ, ರಾತ್ರಿಯೆಲ್ಲಾ ರಾಮಾಯಣ ಕೇಳಿ ರಾಮನಿಗೆ ಸೀತೆ ಏನಾಗಬೇಕು ಅಂದ್ರಂತೆ ಅಂತ ತಮಾಷೆ ಮಾಡ್ತೀವಿ.


12 ರಾಮ ನಾಮ

ಜೈ ಶ್ರೀ ರಾಮ್ ಎನ್ನುತ್ತಾ ಕಪಿಗಳು ಬಂಡೆಗಳನ್ನು ಎತ್ತಿ ಎಸೆದಾಗ ಅವು ನೀರಲ್ಲಿ ತೇಲುತ್ತವೆ. ರಾಮ ನಾಮದ ಮಹಿಮೆ ಅಂಥಾದ್ದು.ಅದೇ ಕಲ್ಲನ್ನು ಶ್ರೀ ರಾಮನು ಎತ್ತಿ ಎಸೆದರೆ ತೇಲೋದಿಲ್ಲ, ಯಾಕೆಂದ್ರೆ "ಜೈ ಶ್ರೀ ರಾಮ್" ಅಂದಿರೋಲ್ಲ ಇಂದಿಗೂ ಭಾರತದ ಜನರು ಅದೇ ಗೌರವ ಆದರದಿಂದ, ಭಕ್ತಿ, ಶ್ರದ್ದೆಯಿಂದ ಶ್ರೀ ರಾಮನನ್ನು ಪೂಜಿಸುತ್ತಾರೆ.



ಲೇಖಕರ ಸಂಕ್ಷಿಪ್ತ ಪರಿಚಯ:
ರೇಖಾ. ಮುತಾಲಿಕ್ ( ನಾಡಗೌಡ )ಬಾಗಲಕೋಟ ನಿವಾಸಿ.ಹವ್ಯಾಸಿ ಬರಹಗಾರ್ತಿ. B. Com ಪದವೀಧರೆ..ಕವಿಯಿತ್ರಿ, ಕತೆ, ಕವನ, ಚುಟುಕು,ದೇವರ ಹಾಡುಗಳು, ಧಾರ್ಮಿಕ ಲೇಖನಗಳು, ಸಾಂದರ್ಭಿಕ ಲೇಖನಗಳು, ಸಾಮಾಜಿಕ ಮತ್ತು ವೈಚಾರಿಕ ಲೇಖನಗಳು, ಇಂಗ್ಲೀಷ್ ಮತ್ತು ಹಿಂದಿ ಕವಿತೆಗಳು, ಲೇಖನಗಳನ್ನು ಇದಲ್ಲದೇ ರಾಮಾಯಣ, ಮಹಾಭಾರತ, ಪೂರ್ತಿ ಕಥೆಗಳನ್ನು ಧಾರಾವಾಹಿ ರೂಪದಲ್ಲಿ, fb ಬರೆದಿದ್ದಾರೆ. ಕವನಗಳು ಅಂದ್ರೆ ಪಂಚಪ್ರಾಣ, ಹೀಗೇ ಸಹಿತ್ಯಾಭಿರುಚಿಯ ಜೊತೆಗೆಚಿತ್ರಕಲೆ, ಹೊಲಿಗೆ, ಕಸೂತಿ, ಗಾಯನ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ.

Rekha Mutalik, c/o, Shri. S. G. Kannur 123B/16/2, P number -55, Sangameshwar nilaya, 4th cross, Vidyagiri, Bagalkot,



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top