ರಾಷ್ಟ್ರಮಟ್ಟದ ಮರೈನ್ ಪೊಲೀಸ್ ಫೌಂಡೇಶನ್ ಕೋರ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ರಾಜ್ಯದ ಸುಜ್ಞಾನ ಗೋಪಾಲ್ ನಾಯ್ಕ್

Upayuktha
0



ಕುಮಟಾ: ರಾಷ್ಟ್ರಮಟ್ಟದ ಮರೈನ್ ಪೊಲೀಸ್ ಫೌಂಡೇಶನ್ ಕೋರ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಕರ್ನಾಟಕದ ಪೊಲೀಸ್. ಇದು ಹೆಮ್ಮೆಯ ವಿಷಯವಾಗಿದೆ. 13ನೇ ಮರೈನ್ ಪೊಲೀಸ್ ಫೌಂಡೇಶನ್ ಕೋರ್ಸ್ ನಲ್ಲಿ   ಸುಜ್ಞಾನ ಗೋಪಾಲ್ ನಾಯ್ಕ್ ಕುಮಟಾ ಕೋನಳ್ಳಿ ರವರು ಎಲ್ಲ ವಿಭಾಗಗಳಲ್ಲೂ ಸಹ ಉನ್ನತ ಮಟ್ಟದ ಪ್ರದರ್ಶನವನ್ನು ನೀಡಿ ಕರ್ನಾಟಕ ಪೊಲೀಸ್ ವಿಭಾಗಕ್ಕೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ತಂದುಕೊಟ್ಟಿದ್ದಾರೆ.


ಈ ಕೋರ್ಸ್ ಕೇಂದ್ರ ಗ್ರಹ ಇಲಾಖೆ ಅಡಿಯಲ್ಲಿ ನೇರವಾಗಿ ಇರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ಗುಜರಾತ್ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ ಗುಜರಾತ್‌ನ ಸಹಯೋಗದಲ್ಲಿ ದಿನಾಂಕ 06/11/2023ರಿಂದ ದಿನಾಂಕ 13/01/2024 ರವರೆಗೆ ನಡೆದಿರುತ್ತದೆ. ಇಲ್ಲಿ ನ್ಯಾವಿಗೇಶನ್, ಡ್ರಗ್ಸ್ ಅಂಡ್ ಎಕ್ಸ್ಪ್ಲೋಸಿವ್, ಮೆರಿನ್ ಕಮ್ಯುನಿಕೇಶನ್, ಮ್ಯಾರಿಟೈಮ್ ಲಾ ಇತರೆ ವಿಷಯಗಳಲ್ಲಿ ತಮ್ಮ ಅತ್ಯದ್ಭುತ ಪ್ರದರ್ಶನವನ್ನು ನೀಡಿ ಕರ್ನಾಟಕ ರಾಜ್ಯಕ್ಕೆ ಹಾಗೂ ಕರ್ನಾಟಕ ಪೊಲೀಸ್ ಗೆ ಹೆಮ್ಮೆಯನ್ನು ತಂದಿದ್ದಾರೆ. 


ಅವರ ಕ್ರಿಯಾಶೀಲ ವ್ಯಕ್ತಿತ್ವ ಕಠಿಣ ಪರಿಶ್ರಮ ಸಮರ್ಪಣಾ ಮನೋಭಾವನೆ ಮುಂದಾಳತ್ವ ಗುಣಗಳು ಶ್ಲಾಘನೀಯವಾಗಿದೆ. ಇದು ಕರ್ನಾಟಕ ಪೊಲೀಸ್ ಹೊಂದಿರುವ ವೃತ್ತಿ ಪರತೆಯ ಉನ್ನತ ಗುಣಮಟ್ಟವನ್ನು ಸೂಚಿಸುತ್ತದೆ. ಸುಜ್ಞಾನ ಗೋಪಾಲ್ ನಾಯ್ಕ್ ರವರ ಯಶಸ್ವಿ ಸೇವೆ ಹಾಗೂ ಸ್ಪೂರ್ತಿದಾಯಕತ್ವವು  ಅವರ ಸಹೋದ್ಯೋಗಿಗೆ ಸಹಕಾರಿಯಾಗಲಿದೆ. ಪ್ರತಿಯೊಬ್ಬರ ಸಾಮರ್ಥ್ಯದ ನಿರ್ಮಾಣಕ್ಕಾಗಿ ಕರ್ನಾಟಕ ಪೊಲೀಸರ ಬದ್ಧತೆಯನ್ನು ಹಾಗೂ ಗುಣಮಟ್ಟವನ್ನು ಎತ್ತಿ ಹಿಡಿಯುವಲ್ಲಿ ಪೊಲೀಸ್ ಇಲಾಖೆ  ಸದಾ ಮುಂದೆ ಇರುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top