ಮೂಡುಬಿದಿರೆ: ತುಳುಕೂಟದ ಮಾಸಿಕ ಸಭೆ - ನಾಗಾರಾಧನೆಯ ಬಗ್ಗೆ ಉಪನ್ಯಾಸ

Upayuktha
0


 

ಮೂಡುಬಿದಿರೆ: ನಾಗಲೋಕ ಎನ್ನುವುದು ಭೂಮಿಯ ಗರ್ಭವಾಗಿದ್ದು ಅದರಿಂದ ಉಂಟಾಗುವ ತೊಂದರೆಗಳಿಗೆ ವಾಹಕವಾಗಿ ಸರ್ಪವನ್ನು ಕಾಣುತ್ತೇವೆ. ನಾಗ ಎಂದರೆ ಸರ್ಪ ಎನ್ನುವ ಹೆಸರಿರುವುದಾದರೂ ನಾಗಾರಾಧನೆಯಲ್ಲಿ ಬರುವ ನಾಗ ಎಂದರೆ ಸರ್ಪವಲ್ಲ. ನಾಗರ ಹಾವು ತೊಂದರೆಗಳನ್ನು ಮನಗಾಣಿಸುವ ಮಾಧ್ಯಮವಾಗಿ ಮಾತ್ರ ಮುಖ್ಯವಾಗುವುದರಿಂದಲೇ ಅದು ಆರಾಧನೆಗೆ ಯೋಗ್ಯವಾಗಿದೆ ಎಂಬುದಾಗಿ ಜೋತಿಷ್ಯ, ವಾಸ್ತುಶಾಸ್ತ್ರದಲ್ಲಿ ತಜ್ಞರಾಗಿರುವ ಪೊಳಲಿಯ ರಾಜಶೇಖರ ರಾವ್ ಎನ್. ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. 




ಜನವರಿ 6ರಂದು ಕನ್ನಡ ಭವನದ ತುಳುಕೂಟದ ಕಛೇರಿಯಲ್ಲಿ ನಡೆದ ತುಳುಕೂಟ (ರಿ.) ಮೂಡುಬಿದಿರೆ ಇದರ ಮಾಸಿಕ ಸಭೆಯಲ್ಲಿ ಅವರು ‘ನಾಗಾರಾಧನೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಾಗಾರಾಧನೆಯ ನಂಬಿಕೆ ಬೆಳೆದು ಬಂದ ಹಿನ್ನೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿದ ಅವರು ನಂತರ ಸಂವಾದದಲ್ಲಿ ಪಾಲ್ಗೊಂಡು ಸದಸ್ಯರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನೂ ನೀಡಿದರು.




ತುಳುಕೂಟದ ಅಧ್ಯಕ್ಷರಾದ  ಧನಕೀರ್ತಿ ಬಲಿಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಾಪಕಾಧ್ಯಕ್ಷರಾದ ಚಂದ್ರಹಾಸ ದೇವಾಡಿಗರು ಸ್ವಾಗತಿಸಿ. ಕಾರ್ಯದರ್ಶಿಗಳಾದ ವೇಣುಗೋಪಾಲ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



-ಸದಾನಂದ ನಾರಾವಿ

ದೂರವಾಣಿ :9008978366




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    


Post a Comment

0 Comments
Post a Comment (0)
To Top