ಆಳ್ವಾಸ್‍ಗೆ ಸಮಗ್ರ ತಂಡ ಪ್ರಶಸ್ತಿ, 12ನೇ ಬಾರಿ ಪಟ್ಟ
ಮೂಡುಬಿದಿರೆ: ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜು ಹಾಗೂ ಮಂಗಳೂರು ವಿಶ್ವ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ.ವಿ ಅಂತರ್ ಕಾಲೇಜು ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್‍ನಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು.
ಆಳ್ವಾಸ್ ಕಾಲೇಜಿನ ಕಿಶಾನ್ ಶೆಟ್ಟಿ ಮಿಸ್ಟರ್. ಯೂನಿವರ್ಸಿಟಿ ಪಟ್ಟವನ್ನು ಪಡೆದುಕೊಂಡರು. ಎಂಟು ವಿವಿಧ ದೇಹತೂಕ ವಿಭಾಗಗಳಲ್ಲಿ ಜರುಗಿದ ಈ ಸ್ಪರ್ಧಾ ಕೂಟದಲ್ಲಿ, ಆಳ್ವಾಸ್ ಕಾಲೇಜು ಒಟ್ಟು 3 ಚಿನ್ನ 3 ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಪಡೆದುಕೊಂಡಿದೆ.
10 ಕೆ.ಜಿ ದೇಹ ತೂಕ ವಿಭಾಗದಲ್ಲಿ ಧನಂಜಯ, 90 ಕೆ.ಜಿಯಲ್ಲಿ ಕಿಶನ್ ಶೆಟ್ಟಿ, 90+ ಕೆ.ಜಿಯಲ್ಲಿ ಕಿಶೋರ್ ಕುಮಾರ್ ಚಿನ್ನದ ಪದಕ ಪಡೆದುಕೊಂಡರೆ, 75 ಕೆ.ಜಿಯಲ್ಲಿ ಅರುಣ್.ಟಿ, 85 ಕೆ.ಜಿಯಲ್ಲಿ ಸುಲೈಮಾನ್, 90 ಕೆ.ಜಿಯಲ್ಲಿ ದರ್ಶನ್ ಬೆಳ್ಳಿಯ ಪದಕ ಪಡೆದರೆ, 65 ಕೆ.ಜಿ ವಿಭಾಗದಲ್ಲಿ ಗುಡ್ಡಪ್ಪ ಕಂಚಿನ ಪದಕವನ್ನು ಪಡೆದುಕೊಂಡರು. ಕಳೆದ 12 ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರು ಡಾ. ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ