ಶ್ರೀ ಮಾರಿಯಮ್ಮ ಲಕ್ಷ್ಮೀ ವೆಂಕಟ್ರಮಣ ಕ್ಷೇತ್ರ- ಗೋಳಿಯಡ್ಕ: ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ

Upayuktha
0




ಕಾಸರಗೋಡು: "ಅದ್ವೈತ ಭಾವದಲ್ಲಿ ಭಗವತ್ಸೇವೆ ಮಾಡಿದಾಗ ಫಲಪ್ರಾಪ್ತಿಯಾಗುತ್ತದೆ" ಎಂದು ಖ್ಯಾತ ಉದ್ಯಮಿ ವಸಂತ ಪೈ ಬದಿಯಡ್ಕ ಹೇಳಿದರು.



ಮುಳಿಯಾರಿನ ಗೋಳಿಯಡ್ಕ ಶ್ರೀ ವೆಂಕಟ್ರಮಣ ಆದಿಭೈರವ ಅಮ್ಮನವ‌ರ್ ಕ್ಷೇತ್ರ ನವೀಕರಣ ಪ್ರತಿಷ್ಠಾ ಮಹೋತ್ಸವವು ನಡೆಯಲಿದ್ದು ಸಮಾರಂಭವನ್ನು ಯಶಸ್ವಿಯಾಗಿ ಆಚರಿಸಲು ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ ಜ.07 ರಂದು ಶ್ರೀ ಕ್ಷೇತ್ರದಲ್ಲಿ ಜರಗಿತು. ಈ ಸಭೆಯಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ ವಸಂತ ಪೈಗಳು ಈ ಮಾತುಗಳನ್ನಾಡಿದರು.




ಸಭೆಯಲ್ಲಿ ವಾಮನ ಆಚಾರ್ಯ ಅಧ್ಯಕ್ಷಸ್ಥಾನ ವಹಿಸಿ ಕಾರ್ಯಕ್ರಮದ ಸಮಗ್ರ ಮಾಹಿತಿಗಳನ್ನಿತ್ತರು. ಅಬ್ಬಾಸ್ ಕೊಲ್ಚಪ್ಪೆ, ಮನ್ಸೂರ್, ಮಣಿಕಂಠನ್ ಒಂಬೆಯಿಲ್, ಕರುಣಾಕರನ್ ಮಾಸ್ಟರ್, ಕುಂಞಂಬು ನಂಬಿಯಾರ್, ಶಶಿ ಅಮ್ಮಂಗೋಡು, ಮೋಹನ ಅಮ್ಮಂಗೋಡು, ಪ್ರಭಾಕರ ನಾಯರ್, ರಮೇಶ ಮೊದಲಪ್ಪಾರ, ಸದಾಶಿವ ಭಟ್, ಶರೀಫ್ ಕೊಡವಂಜಿ, ಮಧು ಕೋಡಿ, ಬಾಬು ಪರವನಡ್ಕ, ಕೃಷ್ಣ ನೆಕ್ರಾಜೆ, ಅರ್ಜುನ್ ತಾಯಲಂಗಾಡಿ ಇವರು ಶುಭಾಶಂಸನೆಯಿತ್ತರು.




ಸಭೆಯಲ್ಲಿ ವಿವಿಧ ಸಮಿತಿಗಳನ್ನು ರೂಪೀಕರಿಸಲಾಯಿತು.ಶ್ರೀಮದೆಡನೀರು ಮಠಾಧೀಶ ಪರಮಪೂಜ್ಯ ಶ್ರೀ  ಸಚ್ಚಿದಾನಂದಭಾರತೀ ಶ್ರೀಪಾದಂಗಳವರು ಪ್ರಧಾನ ಪೋಷಕರು, ಬ್ರಹ್ಮಶ್ರೀ ರವೀಶ್ ತಂತ್ರಿ ಕುಂಟಾರು, ವಿಷ್ಣು ಭಟ್ ಐಲಕುಂಜೆ, ಅಪ್ಪುಟ್ಟ ಗೋಳಿಯಡ್ಕ ಇವರನ್ನು ಪೋಷಕರು ಮತ್ತು ಗೌರವಾಧ್ಯಕ್ಷರಾಗಿ  ವಸಂತಪೈ ಬದಿಯಡ್ಕ, ಅಧ್ಯಕ್ಷರಾಗಿ ನವೀನ ಭಟ್ ಕುಂಜಿರ್ಕಾನ, ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಗೋಳಿಯಡ್ಕ ಇವರನ್ನೊಳಗೊಂಡ ಪ್ರಧಾನ ಸಮಿತಿ, ಮತ್ತು ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಸಮಿತಿಗಳ ಕಾರ್ಯವಿಧಾನಗಳ ಬಗ್ಗೆ ಗೋವಿಂದ ಬಳ್ಳಮೂಲೆ ಮಾಹಿತಿಗಳನ್ನಿತ್ತರು. ಕಾರ್ಯದರ್ಶಿ ರಾಧಾಕೃಷ್ಣ ಗೋಳಿಯಡ್ಕ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ರಾಘವ ಪೆರಾಜೆ ಧನ್ಯವಾದವಿತ್ತರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top