ತ್ರೇತಾಯುಗದ ನಂತರ ಬರುವುದೇ ದ್ವಾಪರ ಯುಗ. ಇದು ವಿಷ್ಣುವಿನ ಏಳನೆಯ ಅವತಾರವಾದ ಕೃಷ್ಣನ ಕಾಲವಾಗಿದೆ. ಈ ಕಾಲದಲ್ಲಿಯೇ ಪ್ರಸಿದ್ಧಿ ಮಹಾಭಾರತ ಕುರುಕ್ಷೇತ್ರ ಯುದ್ಧ ನಡೆದಿದೆ. ಕರ್ಣನನ್ನು ಆ ಕಾಲದ ದುರಂತ ನಾಯಕ ಎಂದು ಕರೆಯಲಾಗಿದೆ. ಏಕೆಂದರೆ ಆತ ತನ್ನ ಹುಟ್ಟಿನಿಂದ ಸಾವಿನವರೆಗೆ ಕಷ್ಟ ಬಿಟ್ಟು ಬೇರೇನೂ ಕಂಡಿಲ್ಲ.
ಕುಂತಿ ಈಕೆಯ ಮೂಲ ಹೆಸರು ಪೃಥಾ. ವಸುದೇವನ ತಂಗಿ, ಕುಂತಿಭೋಜನ ಸಾಕು ಮಗಳು. ಒಮ್ಮೆ ದುರ್ವಾಸ ಋಷಿಗಳು ಕುಂತಿಭೋಜನ ಅರಮನೆಗೆ ಬಂದಾಗ ಅವರನ್ನು ಕುಂತಿ ತುಂಬಾ ಶ್ರದ್ಧೆಯಿಂದ ಉಪಚರಿಸುತ್ತಾಳೆ. ಈ ಕಾರಣದಿಂದ ದುರ್ವಾಸರು ಈಕೆಗೆ ಐದು ಮಕ್ಕಳನ್ನು ಪಡೆಯುವ ಮಂತ್ರವನ್ನು ಹೇಳಿಕೊಟ್ಟರು.
ಆದರೆ ಕುಂತಿ ತನ್ನ ಕುತೂಹಲದಿಂದ ಈ ವರವನ್ನು ಪರೀಕ್ಷೆ ಮಾಡಿದಳು (ಐದು ವರ ಹೀಗಿದೆ ಸೂರ್ಯ, ವಾಯು, ಯಮ, ಇಂದ್ರ ಅಶ್ವಿನಿ ದೇವತೆಗಳನ್ನು ನನೆದು ಮಂತ್ರವನ್ನು ಜಪಿಸಿದರೆ ಅವರ ಅಂಶ ಹೊಂದಿದ ಐದು ಮಕ್ಕಳನ್ನು ಪಡೆಯಬಹುದು)
ಕುಂತಿ ವಿವಾಹವಾಗದ ತರುಣಿಯಾಗಿದ್ದು ಕುತೂಹಲಕ್ಕಾಗಿ ಸೂರ್ಯದೇವರನ್ನು ನೆನೆದು ಮಂತ್ರವನ್ನು ಹೇಳಿದಳು, ಮಂತ್ರ ಮುಗಿಯುವಷ್ಟರಲ್ಲಿ ಸೂರ್ಯನ ಕಾಂತಿಯನ್ನು ಹೋಲುವ ಮಗು ಕುಂತಿಯ ಕೈಸೇರಿತು. ಕಿವಿಯಲ್ಲಿ ಕುಂಡಲವಿದ್ದ ಕಾರಣ ಈ ಮಗುವಿಗೆ ಕರ್ಣ ಎಂಬ ಹೆಸರು ಬಂತು.
ವಿವಾಹವಾಗದ ಕನ್ಯೆಯಾಗಿದ್ದ ಕುಂತಿ ಆ ಮಗುವನ್ನು ಗಂಗಾ ನದಿಯಲ್ಲಿ ತೇಲಿ ಬಿಟ್ಟಳು. ಆ ಮಗು ಅಧಿರಥ ಎಂಬ ಸಾರಥಿಗೆ ಸಿಕ್ಕಿತು. ಆ ಮಗುವನ್ನು ಆತ ತನ್ನ ಹೆಂಡತಿ ರಾಧಾಳ ಬಳಿಗೆ ಕರೆತಂದನು. ಆ ಮಗುವನ್ನು ಪ್ರೀತಿಯಿಂದ ಸಾಕಿ ಸಲಹಿದರು. ಹೀಗೆ ದಿನ ಕಳೆಯಿತು, ವಿಧಿಯ ಆಟದ ಮುಂದೆ ಯಾರ ಆಟವು ನಡೆಯದೆಂಬಂತೆ ಕುಂತಿ ಆಸ್ತಿನಾವತಿಗೆ ಕುಲವಧುವಾಗಿ ಬಂದಳು. ಮತ್ತೆ ತನ್ನ ಮಗನಾದ ಕರ್ಣನನ್ನು ನೋಡಿ ದುಃಖಿತಲಾದಳು.
ಮುಂದೆ ಕುಂತಿ ಮತ್ತು ಗಾಂಧಾರಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ದ್ರೋರ್ಣಾಚಾರ್ಯರ ಬಳಿ ಬಂದಾಗ, ಕರ್ಣನು ತನಗೂ ವಿದ್ಯಾಭ್ಯಾಸ ನೀಡಿ ಎಂದು ಕೇಳಿದಾಗ, ದೋರ್ಣರು ಯಾರು ನೀನು ಯಾವ ಜಾತಿಗೆ ಸೇರಿದವನು ಕ್ಷತ್ರಿಯನೋ ಎಂದು ಕೇಳಿದರು. ಕರ್ಣ ನಾನು ಕ್ಷತ್ರಿಯನಲ್ಲ ನಾನು ಸಾರಥಿ ಅಧಿರಥನ ಮಗನೆಂದು ಹೇಳಿದನು.
ದ್ರೋರ್ಣರು " ಸೂತ ಪುತ್ರನೇ" ನಾನು ಕ್ಷತ್ರಿಯರಿಗೆ ಮಾತ್ರ ಶಿಕ್ಷಣ ನೀಡುವುದು ಎಂದು ಹೇಳಿ ಹೀಯಾಳಿಸಿದರು.
ಕರ್ಣ ಮುಂದೆ ಪರಶುರಾಮನ ಬಳಿ ಬಿಲ್ಲು ವಿದ್ಯೆ ಕಲಿಯಲು ಬರುತ್ತಾನೆ. ಆದರೆ ಪರಶುರಾಮನ ಬಳಿ ಬ್ರಾಹ್ಮಣ ಎಂದು ಸುಳ್ಳು ಹೇಳಿ ವಿದ್ಯೆ ಪಡೆಯುತ್ತೇನೆ. ಪರಶುರಾಮರ ಹೆಸರು ತಿಳಿಯದವರು ಯಾರೂ ಇಲ್ಲ. ಇವರು ಭೀಷ್ಮರ ಗುರುವು ಆಗಿದ್ದರೇ. ಹೀಗೆ ಕರ್ಣನ ವಿದ್ಯಾಭ್ಯಾಸ ಮುಂದುವರೆಯಿತು.
ಒಂದು ದಿನ ಗುರು ಪರಶುರಾಮರು ಕರ್ಣನ ಕಾಲಲ್ಲಿ ಮಲಗಿದ್ದರು. ಆ ಸಂದರ್ಭದಲ್ಲಿ ಒಂದು ಕೀಟವು ಕರ್ಣನ ತೊಡೆಯನ್ನು ಕಚ್ಚಿ ರಕ್ತ ಹೀರತೊಡಗಿತು. ಸ್ವಲ್ಪ ಸಮಯದ ನಂತರ ಕರ್ಣನ ತೊಡೆಯ ರಕ್ತ ಗುರುಗಳ ಮೈಗೆ ಸೋಕಿ ಎಚ್ಚರಗೊಂಡರು. ಎದ್ದಾಗ ರಕ್ತ ಹರಿಯುವುದನ್ನು ಕಂಡು ಕರ್ಣನ ಬಳಿ ನೋಡಿದರು.
ಗುರುಗಳು ನೇರವಾಗಿ ಕರ್ಣನನ್ನು ಪ್ರಶ್ನಿಸಿದರು "ನೀನು ಕ್ಷತ್ರೀಯನೇ". "ನೀನು ಬ್ರಾಹ್ಮಣನಾಗಿರಲು ಸಾಧ್ಯನೇ ಇಲ್ಲ. ಒಬ್ಬ ಬ್ರಾಹ್ಮಣ ಇಷ್ಟು ಸಮಯ ನೋವನು ತಡೆದುಕೊಳ್ಳಲು ಸಾಧ್ಯವಿಲ್ಲ." ಕರ್ಣ ನಾನು ಕ್ಷತ್ರಿಯನೂ ಅಲ್ಲ ಬ್ರಾಹ್ಮಣನೂ ಅಲ್ಲ "ನಾನು ಒಬ್ಬ ಸೂತ ಪುತ್ರ" ಹಿಂದೆ ನಡೆದ ಘಟನೆಗಳನ್ನು ತಿಳಿಸಿದನು. ಕರ್ಣ ತನಗೆ ತಿಳಿದ ನಿಜ ತಿಳಿಸಿದ. (ತಾನು ಕ್ಷತ್ರಿಯನೆಂದು ಸ್ವತಃ ಕರ್ಣನಿಗೂ ತಿಳಿದಿರಲಿಲ್ಲ.) ಪರಶುರಾಮರು ಕರ್ಣ ಸುಳ್ಳು ಹೇಳಿದ ಎಂದು ತಿಳಿದುಕೊಂಡರು.
ಪರಶುರಾಮರ ಕೋಪ ಆಕಾಶ ಮುಟ್ಟಿತು.ಆ ಆವೇಶದಲ್ಲೇ ಕರ್ಣನಿಗೆ ಶಾಪಕೊಟ್ಟರು." ನಿನ್ನ ಅಗತ್ಯ ಕಾಲದಲ್ಲಿ ನೀನು ಕಲಿತ ವಿದ್ಯೆ ಮರೆತು ಹೋಗಲಿ" ಬ್ರಾಹ್ಮಣ ಶಾಪದಿಂದ ಕರ್ಣ ಪಾರಾಗಲು ಸಾಧ್ಯವಾಗಲಿಲ್ಲ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹೊರಗೆ ಹೊರಟ ಬಂದವನು ನೇರವಾಗಿ ಆಸ್ತಿನಾವತಿಗೆ ತಲುಪಿದ.
ಆಸ್ತಿನಾವತಿಯಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದ ಮಕ್ಕಳ ಪರೀಕ್ಷೆಗೆ ಸಕಲ ಸಿದ್ದತೆಯು ನಡೆದಿತ್ತು.ಆ ಪರೀಕ್ಷೆಯ ಪೂರ್ಣ ಜವಾಬ್ದಾರಿಯನ್ನು ಗುರು ದ್ರೋರ್ಣಚಾರ್ಯರು ವಹಿಸಿದ್ದರು.ಆದರೆ ಗುರುಗಳ ಮಗ ಅಶ್ವತ್ಥಾಮ ಮೋಸದ ಜಾಲವನ್ನು ತಂದೆಗೆ ತಿಳಿಸದೇ ನಡೆಸಿದ್ದ.
ಆರಂಭದಲ್ಲಿ ಎಲ್ಲಾ ರಾಜಕುಮಾರರು ತಮ್ಮ ಪ್ರವೇಶದ ಮೂಲಕ ತಮ್ಮ ಪರಾಕ್ರಮವನ್ನು ತೋರಿಸಿದರು. ನಂತರದಲ್ಲಿ ಎಲ್ಲಾ ರಾಜಕುಮಾರರು ತಾವು ಕಲಿತ ಶಸ್ತ್ರಾಸ್ತ್ರ ಪರಾಕ್ರಮವನ್ನು ತೋರಿಸಿದರು. ದ್ರೋಣರಿಗೆ ಪಾಂಡವರಲ್ಲಿ ಒಬ್ಬನಾದ ಅರ್ಜುನ ತುಂಬಾ ಪ್ರಿಯವಾದ ಶಿಷ್ಯನಾಗಿದ್ದ. ಹಾಗೇ ಬಿಲ್ಲು ವಿದ್ಯೆಯಲ್ಲಿ ಪರಿಣತಿ ಹೊಂದಿದ್ದನು.
ದ್ರೋಣರು ಕ್ರೀಡಾಂಗಣದಲ್ಲಿ ಒಂದು ಘೋಷಣೆ ಮಾಡಿದರು. ಆ ಘೋಷಣೆ ಹೀಗಿದೆ "ನನ್ನ ಶಿಷ್ಯ ಅರ್ಜುನನನ್ನು ಬಿಟ್ಟು ಈ ಪ್ರಪಂಚದಲ್ಲಿ ಯಾರೊಬ್ಬರೂ ಬಿಲ್ಲು ವಿದ್ಯೆಯಲ್ಲಿ ಪರಿಣತಿ ಹೊಂದಿರುವವರು ಇಲ್ಲ. ನನ್ನ ಶಿಷ್ಯನಂತೆ ಯಾರೂ ಇಲ್ಲ, ಅವನಿಗೆ ಪೈಪೋಟಿಯಾಗಿ ನಿಲ್ಲುವವರು ಯಾರೂ ಇಲ್ಲ".
ಆ ಕೂಡಲೇ ಒಂದು ಧ್ವನಿ ಕೇಳಿ ಬಂತು "ನಾನಿರುವೆ". ಈ ಮಾತನ್ನು ಸ್ವತಃ ಕರ್ಣನೇ ಹೇಳಿದ. ಆದರೆ ರಾಜಕುಮಾರರ ಪರಾಕ್ರಮವನ್ನು ನೋಡಲು ನೆರೆದಿಂದ ಆಸ್ತಿನಾವತಿಯ ಜನರು, ಕುಲಪುರೋಹಿತರು, ಹಿರಿಯರು ಆಶ್ಚರ್ಯಚಕಿತರಾದರು.
ಭೀಷ್ಮ ನೀನು ಯಾರು ಎಂದು ಕೇಳಿದಾಗ "ನಾನು ಸಾರಥಿ ಅಧಿರಥನ ಮಗನೆಂದು ಹೇಳಿದನು". ಭೀಷ್ಮರು ತುಂಬಾ ತಾಳ್ಮೆಯಿಂದ ಕರ್ಣನಿಗೆ ತಿಳಿ ಹೇಳ ಪ್ರಯತ್ನಿಸಿದರು. ನೋಡು ಕರ್ಣ ಇಲ್ಲಿ ಕ್ಷತ್ರಿಯರಿಗೆ ಮಾತ್ರ ಅವಕಾಶ ಎಂದು. ಆದರೆ ಕರ್ಣ ನಾನು ಕಲಿತ ವಿದ್ಯೆಗೆ ಬೆಲೆ ಇಲ್ಲವೇ. ನಾನು ಸ್ವತಃ ನಿಮ್ಮ ಗುರುಗಳಾದ ಪರಶುರಾಮರ ಶಿಷ್ಯ. ನನಗೂ ಒಂದು ಅವಕಾಶ ನೀಡಿ ಎಂದು ಕೇಳಿದನು.
"ಆ ಸಂದರ್ಭದಲ್ಲಿ ದುರ್ಯೋಧನ ತನ್ನ ಕಾರ್ಯ ಸಿದ್ಧಿಗೆ ಇವನು ಸೂತ್ರನಾಗಬಹುದು, ಇವನನ್ನು ಹೇಗಾದರು ನನ್ನ ಗೆಳೆಯನಾಗಿಸಬೇಕೆಂದು" ನೆರೆದಿದ್ದ ಸಭೆಯಲ್ಲಿ ದುರ್ಯೋಧನ ನಾನು ಕರ್ಣನನ್ನು ಅಂಗ ರಾಜ್ಯದ ರಾಜನಾಗಿ ನೇಮಿಸಿರುವೇ ಮತ್ತು ಈತ ನನ್ನ ಪ್ರಿಯ ಗೆಳೆಯಾ" ಈಗ ಇವನು ಪರೀಕ್ಷೆಯಲ್ಲಿ ಅವಕಾಶ ಪಡೆಯಬಹುದೇ ದೊಡ್ಡಪ್ಪ ಎಂದು ದುರ್ಯೋಧನ ಕೇಳಿದ.
ಭೀಷ್ಮರು ಮಾತನಾಡಲಿಲ್ಲ. ಅರ್ಜುನ ಮತ್ತು ಕರ್ಣನ ಮಧ್ಯೆ ಹಲವು ರೀತಿಯಲ್ಲಿ ಬಿಲ್ಲು ಬಾಣಗಳ ಪ್ರಯೋಗ ನಡೆಯಿತು. ಸಮಯ ಕಳೆದವು ಆದರೆ ಯಾರು ಯಾರಿಗಿಂತ ಹೆಚ್ಚು ಎಂದು ತಿಳಿಸಲು ಸಾಧ್ಯವಾಗಲಿಲ್ಲ ಇಬ್ಬರು ಯೋಧರ ಪರಾಕ್ರಮ ಆ ರೀತಿ ಇತ್ತು.
ಮುಂದೆ ದ್ರೌಪದಿ ಸ್ವಯಂವರದ ಸಂದರ್ಭದಲ್ಲಿ ಸಹ ಕರ್ಣನಿಗೆ ಸ್ವತಃ ದ್ರೌಪದಿಯೇ ಅವಮಾನ ಮಾಡಿದ್ದಳು. ಯಾವ ರೀತಿ ಎಂದರೆ ದ್ರೌಪದಿಯನ್ನು ವಿವಾಹವಾಗಲು ದುರ್ಯೋಧನ ಬಯಸಿದ್ದ ಆದರೆ ಸ್ವಯಂವರದಲ್ಲಿ ಮತ್ಸ್ಯದ ಕಣ್ಣು ಬೇಧಿಸುವ ಸವಾಲನ್ನು ನೀಡಲಾಗಿತು. ಆದರೆ ದುರ್ಯೋಧನನಿಗೆ ಗದಾಯುದ್ಧ ಬಿಟ್ಟು ಬೇರೆ ವಿದ್ಯೆ ತಿಳಿದಿರಲಿಲ್ಲ.
ಹಾಗಾಗಿ ಕರ್ಣನಲ್ಲಿ ಗೆದ್ದು ತರಲು ಹೇಳಿದನು. ಆದರೆ ದ್ರೌಪದಿ ಸವಾಲು ಭೇದಿಸುವ ಮೊದಲೇ ನಾನು ಸೂತ ಪುತ್ರನನ್ನು ವಿವಾಹವಾಗಲಾರೆ ಎಂದು ಹೇಳಿ ಹೀಯಾಳಿಸಿದಳು. ಈ ಹೀಯಾಳಿಕೆ ಒಂದು ರೀತಿ ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾಗಿದೆ.
ಹೀಗೆ ದ್ರೌಪದಿ ವಸ್ತ್ರಾಪಹರಣ ಪ್ರಸಂಗ ನಡೆಯಿತು, ವನವಾಸ ಅಜ್ಞಾತವಾಸ ಆಯಿತು. ನಂತರ ಪಾಂಡವರು ತಮ್ಮ ಪಾಲನ್ನು ಕೇಳಲೂ ಬಂದಾಗ ಸೂಜಿ ಮೊನೆಯಷ್ಟು ಜಾಗ ಕೊಡುವುದಿಲ್ಲ ಎಂಬ ದುರ್ಯೋಧನ ಮಾತು ಕುರುಕ್ಷೇತ್ರ ಯುದ್ಧಕ್ಕೆ ಮೂಲ ಕಾರಣವಾಗಿದೆ.
ಕುರುಕ್ಷೇತ್ರ ಯುದ್ಧವು ಹದಿನೆಂಟು ಪರ್ವ ಇದೆ ಅಂದ್ರೆ ಹದಿನೆಂಟು ದಿನ ಈ ಯುದ್ಧ ಕರ್ಣನ ಜೀವನದ ದಿಕ್ಕನ್ನೇ ಬದಲಿಸುತ್ತದೆ.
ಕರ್ಣನಿಗೆ ತಾನು ಯಾರು ಎಂದು ತಿಳಿಯಿತು, ಆದರೆ ದುರ್ಯೋಧನನ ಸಹಾಯವನ್ನು ಮರೆಯದ ಕರ್ಣ ದುರ್ಯೋಧನನ ಸ್ನೇಹಕ್ಕೆ ಕಟ್ಟುಬಿದ್ದ.
ಇನ್ನೊಂದು ಘಟನೆ ಕರ್ಣನನ್ನು ಚರಿತ್ರೆಯು ಪುಟದಲ್ಲಿ ಮೆರೆಸುವಂತೆ ಮಾಡಿತು. ಕರ್ಣನನ್ನು ದಾನ ಶೂರ ಎಂದು ಕರೆಯುತ್ತಾರೆ. ಕರ್ಣ ಯಾರು ಏನೇ ಹೇಳಲಿ ಸ್ವತಃ ತನ್ನ ಶತ್ರು ಕೇಳಿದ್ದನ್ನು ನೀಡುವ ಗುಣ ಉಲ್ಲವನು, ಇದನ್ನು ತಿಳಿದ ಇಂದ್ರ ತನ್ನ ಮಗ ಅರ್ಜುನನಿಗಾಗಿ ಮಾರುವೇಷ ಧರಿಸಿ ಬ್ರಾಹ್ಮಣ ರೂಪದಲ್ಲಿ ಕರ್ಣ ಸೂರ್ಯದೇವನಿಗೆ ಅರ್ಕ ಬಿಡುವ ಸಂದರ್ಭದಲ್ಲಿ ಎದುರಾಗಿ ದಾನ ಕೇಳಿದ ಆಗ ಕರ್ಣ "ಈಗ ನನ್ನ ಬಳಿ ಏನೂ ಇಲ್ಲ ಅರಮನೆಗೆ ಬಂದು ಪಡೆಯಿರಿ ಎಂದನು.
ಆಗ ಇಂದ್ರ ಹೊಳೆಯುವ ಕವಚ ಕರ್ಣ ಕುಂಡಲ ಇರುವಾಗ ಏನು ಇಲ್ಲ ಅಂತ ಹೇಳುವೆ ಎಂದ. ಕರ್ಣ ಈ ಸಂಚನ್ನು ತಿಳಿದಿದ್ದರೂ ಆ ಬ್ರಾಹ್ಮಣ ಕೇಳಿದ್ದನ್ನು ಕೊಟ್ಟು ದಾನ ಶೂರ ಕರ್ಣ ಎಂದು ಇತಿಹಾಸದ ಪುಟಗಳಲ್ಲಿ ಅಮರನಾದ.
ಮುಂದೆ ಕುರುಕ್ಷೇತ್ರ ಯುದ್ಧ ಈ ಯುದ್ಧದಲ್ಲಿ ಮೂರನೇ ಸೇನಾಧಿಪತಿ ಕರ್ಣ ಶಲ್ಯ ಇವನಿಗೆ ಸಾರಥಿಯಾಗಿದ್ದ.
ಯುದ್ಧ ಆರಂಭವಾಯಿತು ಸತತ ಮೂರು ದಿನಗಳ ಕಾಲ ನಡೆಯಿತು. ಶಲ್ಯ ಒಂದು ಶರತ್ತಿನ ಮೇಲೆ ಕರ್ಣನ ಸಾರಥಿಯಾಗಿದ್ದ. ಆ ಶರತ್ತು ಹೀಗಿದೆ (ನೀನು ನನ್ನ ಮಾತು ಕೇಳುವ ವರೆಗೆ ನಾನು ರಥದಲ್ಲಿ ಇರುತ್ತೇನೆ..)
ಕರ್ಣ ಮತ್ತು ಅರ್ಜುನನಿಗೆ ಯುದ್ಧ ನಡೆಯಿತು. ಕರ್ಣ ಸರ್ಪಾಸ್ತ್ರವನ್ನು ಪ್ರಯೋಗಿಸಲು ಮುಂದಾದನು. ಕರ್ಣ ಅರ್ಜುನನ ಕುತ್ತಿಗೆಗೆ ಗುರಿ ಇಟ್ಟ. ಆಗ ಶಲ್ಯ ಕುತ್ತಿಗೆಗೆ ಇಡಬೇಡ ಅರ್ಜುನನ ಸಾರಥಿ ಕೃಷ್ಣ ಅವನಿಗೆ ರಥವನ್ನು ಎಂಟು ಅಂಗುಲ (ಅಂದರೆ ಒಂಬತ್ತು ಕಾಲು ಇಂಚು)ದಷ್ಟು ಕುಸಿಯುವಂತೆ ಮಾಡಬಹುದು ಎಂದು ಹೇಳಿದನು.
ಹಾಗಾಗಿ ನೀನು ಅರ್ಜುನನ ಹೃದಯ ಭಾಗಕ್ಕೆ ಗುರಿಯಿಡು ಎಂದ ಆದರೆ ಕರ್ಣ ಅವನ ಮಾತು ಕೇಳಲಿಲ್ಲ. ಇದಕ್ಕೆ ಕಾರಣವಿದೆ ಕರ್ಣ ಕುಂತಿಯಲ್ಲಿ ಮಾತನಾಡಲು ಹೋದಾಗ ಕುಂತಿ ಅವನ ಕೈಯಿಂದ ಭಾಷೆ ತೆಗೆದುಕೊಂಡಳು. ಏನೆಂದರೆ ನೀನು ಒಮ್ಮೆ ಇಟ್ಟ ಗುರಿಯನ್ನು ಮತ್ತೆ ಬದಲಾಯಿಸಬಾರದು ಕರ್ಣ ಬಾಣ ಬಿಟ್ಟ ಬಾಣ ಅರ್ಜುನ ಕಿರೀಟವನ್ನು ಬೀಳಿಸಿತು.
ಶಲ್ಯ ರಥದಿಂದ ಇಳಿದ. ಸರ್ಪಾಸ್ತ್ರ ಮತ್ತೆ ಪ್ರಯೋಗ ಮಾಡು ಎಂದಾಗ ಕರ್ಣ ಒಪ್ಪಲಿಲ್ಲ ಇದಕ್ಕೂ ಕಾರಣವಿದೆ ಕುಂತಿ ಇನ್ನೊಂದು ಭಾಷೆ ತೆಗೆದುಕೊಂಡಿದ್ದಳು ಏನೆಂದರೆ ನೀನು ಒಮ್ಮೆ ಬಳಸಿದ ಬಾಣವನ್ನು ಮತ್ತೆ ಪ್ರಯೋಗಿಸಬಾರದೆಂದು. ಸಾರಥಿ ಇಲ್ಲದೆ ರಥದ ದಿಕ್ಕು ಬದಲಾಯಿತು. ರಥ ಭೂಮಿಯ ಮೇಲೆ ಕುಸಿಯಿತು. ಕಾರಣ ಭೂಮಿ ದೇವಿಯ ಶಾಪ.
ಕರ್ಣನ ಕೊನೆಗಾಲ ಹತ್ತಿರವಾಯಿತು. ಕರ್ಣ ರಥವನ್ನು ಮೇಲೆತ್ತಲು ಪ್ರಯತ್ನಿಸಿದ. ಅರ್ಜುನ ಬಳಿ ಮತ್ತೆ ಯುದ್ಧ ಮುಂದುವರಿಸುವ ಎಂದ. ಆದರೆ ಅರ್ಜುನ ಕೃಷ್ಣನ ಮಾತಿನಂತೆ ಒಲ್ಲದ ಮನಸ್ಸಿನಿಂದ ಬಾಣ ಬಿಟ್ಟ ದುರಂತ ನಾಯಕ ಮೌನನಾದ. ಭೂಮಿಯ ಋಣ ಮಗಿದರು, ಪುಸ್ತಕದ ಪುಟದಲ್ಲಿ ಅಮರನಾದ.
- ಹರ್ಷಿತಾ ವಿ.ಪಿ
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ
ನೆಹರು ನಗರ, ಪುತ್ತೂರು
9972591003
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ