ಜ.13-14: ಗೋವಿಂದ ದಾಸ ಕಾಲೇಜಿನಲ್ಲಿ ಬುಡಕಟ್ಟು ಯುವ ಬರಹಗಾರರ ಕಮ್ಮಟ

Upayuktha
0



ಸುರತ್ಕಲ್ : ಸಮಗ್ರ ಗ್ರಾಮೀಣ ಆಶ್ರಮ, ಪೆರ್ನಾಲು, ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ), ಕರ್ನಾಟಕ-ಕೇರಳ, ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಮತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್‍ಗಳ ಸಂಯುಕ್ತ ಆಶ್ರಯದಲ್ಲಿ ಬುಡಕಟ್ಟು ಯುವ ಬರಹಗಾರರ ಕಮ್ಮಟವು ಜನವರಿ 13 ಮತ್ತು 14 ರಂದು ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ಮಂದಿರದಲ್ಲಿ ನಡೆಯಲಿದೆ.




ಪೂರ್ವಾಹ್ನ 9.30 ಕ್ಕೆ ಸಿಂಬಿಯೋಸಿಸ್ ಅಂತರಾಷ್ಟ್ರೀಯ ಡೀಮ್ಡ್ ಕಾನೂನು ವಿಶ್ವವಿದ್ಯಾನಿಲಯ ಪುಣೆಯ ನಿರ್ದೇಶಕರಾದ ಡಾ. ಶಶಿಕಲಾ ಗುರುಪುರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ.ಕೃಷ್ಣಮೂರ್ತಿ ಯವರು ಅಧ್ಯಕ್ಷತೆ ವಹಿಸಲಿದ್ದಾರೆ. 




ಹಿಂದೂ ವಿದ್ಯಾದಾಯಿನಿ ಸಂಘ (ರಿ), ಸುರತ್ಕಲ್‍ನ ಕಾರ್ಯದರ್ಶಿ ಶ್ರೀರಂಗ ಹೆಚ್., ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳದ ಅಧ್ಯಕ್ಷೆ ಸುಶೀಲ ನಾಡ ಮತ್ತು ನಮ್ಮ ನ್ಯಾಯ ಕೂಟ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳದ ಅಧ್ಯಕ್ಷ ಬಾಲರಾಜ್ ಕೋಡಿಕಲ್, ಸಮಗ್ರ ಗ್ರಾಮೀಣ ಆಶ್ರಮ, ಪೆರ್ನಾಲು, ಉಡುಪಿ ಜಿಲ್ಲೆಯ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಆಕ್ಷನ್ ಏಡ್ ಸಂಸ್ಥೆ, ಬೆಂಗಳೂರಿನ ವಲಯ ಮೇಲ್ವಿಚಾಕರಾದ ನಂದಿನಿ ಕೆ., ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಕಾಸರಗೋಡು ಇದರ ಅಧ್ಯಕ್ಷೆ ಡಾ. ಜ್ಯೋತಿ ಚೇಳಾೈರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಗುಂಡ್ಮಿ ಶಿಬಿರದ ನಿರ್ದೇಶಕರಾಗಿದ್ದಾರೆ.





ಯುವ ಬರಹಗಾರರ ಕಮ್ಮಟದ ಗೋಷ್ಠಿಯಲ್ಲಿ ಬರಹಗಳಲ್ಲಿ ಮಹಿಳಾ ಸಂವೇದನೆ ಮತ್ತು ಲಿಂಗಸೂಕ್ಷ್ಮತೆ ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಶಶಿಕಲಾ ಗುರುಪುರ, ನಿರ್ದೇಶಕರು, ಸಿಂಬಿಯೋಸಿಸ್ ಅಂತರಾಷ್ಟ್ರೀಯ ಡೀಮ್ಡ್ ಕಾನೂನು ವಿಶ್ವವಿದ್ಯಾನಿಲಯ, ಪುಣೆ ಭಾಗವಹಿಸಲಿದ್ದಾರೆ.  ಕಥಾ ಕಮ್ಮಟ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಮಹಾಲಿಂಗ ಕೆ., ಮುಖ್ಯಸ್ಥರು, ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಪಾಲ್ಗೊಳ್ಳಲಿದ್ದಾರೆ. ನಾಟಕ ಕಮ್ಮಟವನ್ನು ಅವಿನಾಶ್ ಎಸ್.ಮತ್ತು ವಿನೋದ್ ನಡೆಸಿಕೊಡಲಿದ್ದಾರೆ. 





ಜ.14 ರಂದು ನಡೆಯುವ ನಾನು ಮತ್ತು ಬರಹ ಗೋಷ್ಠಿಯಲ್ಲಿ ಅಬ್ದುಲ್ ರಶೀದ್, ಕಥೆಗಾರರು ಮತ್ತು ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ, ಮೈಸೂರು, ಕಾವ್ಯ ಕಮ್ಮಟ ಗೋಷ್ಠಿಯಲ್ಲಿ ಡಾ. ಜ್ಯೋತಿ ಚೇಳಾೈರು, ಅಧ್ಯಕ್ಷರು, ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ), ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಪತ್ರಿಕೋದ್ಯಮ ಮತ್ತು ಬರಹ ಗೋಷ್ಠಿಯಲ್ಲಿ ಪತ್ರಕರ್ತರಾದ ಶಂಶುದ್ದೀನ್ ಮಂಗಳೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಶಿಬಿರಾರ್ಥಿಗಳಿಂದ ಅನುಭವ ಹಂಚಿಕೆಯ ಮೂಲಕ ಕಾರ್ಯಕ್ರಮವು ಸಮಾರೋಪಗೊಳ್ಳಲಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top