ಫೆ.04: ಹಾಸನದಲ್ಲಿ ಬಿ.ಪುಟ್ಟಸ್ವಾಮಯ್ಯರವರ ಕುರುಕ್ಷೇತ್ರ-ಒಂದು ಅವಲೋಕನ ಉಪನ್ಯಾಸ

Upayuktha
0



ಹಾಸನ: ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 314ನೇ ತಿಂಗಳ ಸಾಹಿತ್ಯ ಕಾರ್ಯಕ್ರಮವು ಹೆಚ್.ಜಿ.ಗಂಗಾಧರ್, ನಟ. ಗಾಯಕರು, ಸಂಸ್ಥಾಪಕ ಅಧ್ಯಕ್ಷರು ಶ್ರೀ ಶಾರದ ಕಲಾಸಂಘ, ಹಾಸನ ಇವರ ಪ್ರಾಯೋಜಕತ್ವದಲ್ಲಿ ಹಾಸನಾಂಬ ಥಿಯಾಸಾಫಿಕಲ್ ಸೊಸೈಟಿ, ವಾಣಿವಿಲಾಸ ರಸ್ತೆ, ಪ್ರಾಚ್ಯವಸ್ತು ಸಂಗ್ರಹಾಲಯ ಕಟ್ಟಡ ಪಕ್ಕ ಇಲ್ಲಿ ಫೆ.4 ಭಾನುವಾರ ಸಂಜೆ 3.00 ಗಂಟೆಗೆ ಸಾಹಿತ್ಯ ಉಪನ್ಯಾಸ, ಕವಿಗೋಷ್ಠಿ, ರಂಗಗೀತೆ ಗಾಯನ ಏರ್ಪಡಿಸಲಾಗಿದೆ. 



ಪ್ರಸಿದ್ಧ ನಾಟಕಕಾರರರು ಬಿ.ಪುಟ್ಟಸ್ವಾಮಯ್ಯ ವಿರಚಿತ ಕುರುಕ್ಷೇತ್ರ ನಾಟಕ ಒಂದು ಅವಲೋಕನ ವಿಷಯವಾಗಿ ನಿವೃತ್ತ ಲೆಕ್ಕಪರಿಶೋಧನಾಧಿಕಾರಿಗಳು, ನಟರು ನಾಟಕಕಾರರು, ಡಾ. ಎಸ್.ಎಸ್.ಪುಟ್ಟೇಗೌಡರು. ಎಂ.ಎ., ಶಂಭುನಾಥಪುರ, ಮೈಸೂರು ಇವರಿಂದ ಉಪನ್ಯಾಸ, ಆಗಮಿತ ಕವಿಗಳಿಂದ ಕವಿಗೋಷ್ಠಿ, ರಂಗ ಕಲಾವಿದರಿಂದ ರಂಗಗೀತೆ ಗಾಯಕ ಗಾಯಕಿಯರಿಂದ ಬಾವಗೀತೆ ಜನಪದ ಗೀತೆಗಳ ಗಾಯನ ಸಮ್ಮಿಳಿತ ಕಾರ್ಯಕ್ರಮಕ್ಕೆ ಕವಿಗಳು, ಗಾಯಕರು, ಪೌರಾಣಿಕ ರಂಗನಟರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲು ಮನೆ ಮನೆ ಕವಿಗೋಷ್ಠಿ ಸಂಚಾಲಕರಾದ ಸಾಹಿತಿ ಗೊರೂರು ಅನಂತರಾಜು ಕೋರಿದ್ದಾರೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top