ಪುತ್ತೂರು: ಕಳೆದ ನವೆಂಬರ್ ತಿಂಗಳಿನಲ್ಲಿ ಕರ್ನಾಟಕ ಶಿಕ್ಷಣ ಮಂಡಳಿಯವರು ನಡೆಸಿದ 2023- 24ನೇ ಸಾಲಿನ ಡ್ರಾಯಿಂಗ್ ಸೀನಿಯರ್ ಗ್ರೇಡ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಿಂದ ಹಾಜರಾಗಿದ್ದ ಎಲ್ಲಾ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
8ನೇ ತರಗತಿಯ ವಿದ್ಯಾರ್ಥಿಗಳಾದ ಮಂದಿರಾ ಕಜೆ, ಎ. ನಿಹಾರಿಕ ಎಮ್.ಬೋಕಡೆ, ಸಹನಾ ಹರೀಶ್ ಪಣಂಬು, ಸಾನ್ವಿ.ಕೆ, ಶಿವ ಕೀರ್ತನ್. ಕೆ, ವೈಷ್ಣವಿ ಎಂ.ಆರ್, 9ನೇ ತರಗತಿ ವಿದ್ಯಾರ್ಥಿಗಳಾದ ಆದ್ಯ ಎಂ.ಎ, ಅಧಿತಿ ಯು.ಎನ್, ಹಿತಾಲಿ ಪ್ರಸನ್ನ ಶೆಟ್ಟಿ, ಸಾರಿಕಾ ಪೈ, 10ನೇ ತರಗತಿಯ ವಿದ್ಯಾರ್ಥಿಗಳಾದ ಯಶಸ್ವಿ ಸುರುಳಿ, ಅರುಂದತಿ ಎಲ್. ಆಚಾರ್ಯ, ಸಾತ್ವಿಕಾ ಜಿ. ಆರ್, ಸಿಂಚನಾ ಹರೀಶ್ ಪಣಂಬು, ತನ್ವಿ ವಿ, ಖುಷಿ ಪಿ.ಡಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಅಂತೆಯೇ 8ನೇ ತರಗತಿ ವಿದ್ಯಾರ್ಥಿಗಳಾದ ದಿಶಾ ಆರ್, ಹಿಮಾಂಶು ಎಲ್. ಶೆಟ್ಟಿ, ಸಾನ್ವಿ.ಆರ್ ಹಾಗೂ 9ನೇ ತರಗತಿ ವಿದ್ಯಾರ್ಥಿಗಳಾದ ಆದ್ಯಾ ಎಸ್. ರೈ, ಆಕರ್ಶ್ ಬಿ. ಶೆಟ್ಟಿ, ಅಕ್ಷಜ್ ರೈ ಪಿ, ಬಿ.ಆರ್.ಸೂರ್ಯ, ಗೌರೀಶ್ ಸಿ. ಶೆಟ್ಟಿ, ಶ್ರೀಹರಿ, ವರ್ಧಿನ್ ಡಿ.ರೈ, ಇವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಶಾಲೆಗೆ 100 ಶೇಕಡಾ ಫಲಿತಾಂಶ ಲಭಿಸಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. ಅಂಬಿಕಾ ವಿದಾಲಯ ಸಿಬಿಎಸ್‍ಇ ಸಂಸ್ಥೆಯ ಚಿತ್ರಕಲಾ ಶಿಕ್ಷಕ ದಿನೇಶ್ ವಿಶ್ವಕರ್ಮ ಮಾರ್ಗದರ್ಶನ ನೀಡಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ