ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಬಾಡಗಂಡಿಯ ಶನಿವಾರ ಎಸ್.ಆರ್.ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧ ಉಪಚಾರ ಉಚಿತವಾಗಿ ವಿತರಣೆ ಕರ‍್ಯಕ್ರಮಕ್ಕೆ ನಿವೃತ್ತ ಕೃಷಿ ವಿಜ್ಞಾನಿ ಎಲ್.ಬಿ.ನಾಯಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಇಂದಿನ ದಿನಮಾನದ ಕಾಲಘಟದಲ್ಲಿ ಅನೇಕ ಜನಸಾಮಾನ್ಯರು ವಿವಿಧ ಬಗೆಯ ಕಾಯ್ಲೆಗೆ ಬಳುತ್ತಿದ್ದು. ಅರೋಗ್ಯವಂತ ಸಮಾಜ ನರ‍್ಮಾಣಕ್ಕೆ ಮಾಜಿ ಸಚಿವರಾದ ಎಸ್.ಆರ್.ಪಾಟೀಲರು ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಮೂಲಭೂತ ಸೌಲಭ್ಯವುಗಳು ಹಾಗೂ ೨ನೂರಕ್ಕೂ ಹೆಚ್ಚು ಅನುಭವಿ ಹಾಗೂ ನುರಿತ ವೈದ್ಯಕಿಯ ತಜ್ಞರು ಇರುವ ಬೃಹತ್ ಆಕಾರದ ಹೈಟೆಕ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿ ಸ್ವಾಥ್ಯ ಹಾಗೂ ಆರೋಗ್ಯವಂತ ಸಮಾಜ ನರ‍್ಮಾಣಕ್ಕೆ ಮುಂದಾಗಿದ್ದು ಅವರ ಕರ‍್ಯ ಶ್ಲಾಘೀನಿಯ ಎಂದು ನಿವೃತ್ತ ಕೃಷಿ ವಿಜ್ಞಾನಿ ಎಲ್.ಬಿ.ನಾಯಕ ಹೇಳಿದರು.
ಸಾ
ಮಾಜೀಕ ಕಳಕಳಿ ಸಾಮಾಜಿಕ ಚಿಂತನೆಯಲ್ಲಿ ತೊಡಗಿರುವ ಮಾಜಿ ಸಚಿವರಾದ ಎಸ್.ಆರ್.ಪಾಟೀಲರು ಉತ್ತರ ರ‍್ನಾಟಕದ ಭಾಗದ ಜನರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಅಂತರ ರಾಷ್ಟ್ರೀಯ ಮಟ್ಟದ ಶಿಕ್ಣಣ ಸಂಸ್ಥೆ ಜೊತೆಗೆ ಈ ಭಾಗದ ಜನರು ಆರೋಗ್ಯವಂತರಾಗಿ ಇರಬೇಕೆನ್ನುವ ಉದ್ದೇಶದಿಂದ ಬೃಹತ್ ಆಕಾರದ ಎಲ್ಲ ವ್ಯವಸ್ಥೆ ಸೌಲಭ್ಯವುಳ್ಳ ಸುರ‍್ಜಿತ ಆಸ್ಪತ್ರೆ ತೆರೆದು ಸುಮಾರು 2 ನೂರಕ್ಕೂ ಅಧಿಕ ಅನುಭವಿ ಹಾಗೂ ನುರಿತ ತಜ್ಣ ವೈದ್ಯಕೀಯ ಸೇವೆ ದೊರೆಯುತೆ ಮಾಡಿದ್ದಾರೆ. ಬೇರೆಬೇರೆ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳು ಇಲ್ಲಿ ಕೈಗೆಟುಕುವ ದರದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಇಂತಹ ಮಹತ್ವದ ಕರ‍್ಯಕ್ರಮ ಕೈಗೊಂಡ ಪ್ರಯುಕ್ತ ಜನರು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೆಚ್ಚು ಜನರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಮಾಜಿ ಸಚಿವರಾದ ಎಸ್.ಆರ್.ಪಾಟೀಲರು ತಮ್ಮ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಜನಪರವಾದ ಮತ್ತು ಶೋಷಿತ ಸಮುದಾಯ ಪರವಾಗಿ ಧ್ವನಿಯಾಗಿ ಅವರ ಧ್ವನಿ ಕೆಲಸ ಮಾಡಿ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮನೆ-ಮಠ ಹಾಗೂ ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಸ್ಥಿತರಾದ ಸಂತ್ರಸ್ತರ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸಕ್ಕರೆ ಕರ‍್ಖಾನೆ, ಸಹಕಾರಿ ಕ್ಷೇತ್ರದ ಬ್ಯಾಂಕಗಳನ್ನು ಸ್ಥಾಪನೆ ಮಾಡುವ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಭಗಿರಥ. ಇವರು ಕೊಡುಗೆ ಈ ನಾಡಿಗೆ ಅಪಾರವಾಗಿದೆ. ಈ ದಿಸೇಯಲ್ಲಿ ಎಸ್.ಅರ್.ಪಾಟೀಲರ ಸೇವೆ ಅಪಾರ. ಜೊತೆಗೆ ಈ ಸಂಸ್ಥೆಯಲ್ಲಿ ಕರ‍್ಯರ‍್ಶಿಯಾಗಿ ಕರ‍್ಯನರ‍್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಂ.ಎನ್.ಪಾಟೀಲರು ಕೊಡಾ ಆಸ್ಪತ್ತೆಯ ಶ್ರಯೋ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಯಡಹಳ್ಳಿ ಗ್ರಾಪಂ ಅಧ್ಯಕ್ಷ ಸದಾಶಿವ ನಂದಗಾವಿ, ಟಿಎಪಿಸಿಎಂಎಸ್ ಮಾಜಿ ಸದಸ್ಯ ದೊಡ್ಡಣ್ಣ ದೇಸಾಯಿ, ಮೋಹನ್ ದೇಸಾಯಿ, ಗೋವಿಂದಪ್ಪಗೌಡ ಪಾಟೀಲ, ಬಸವರಾಜ ಢವಳೇಶ್ವರ, ರಾಚಪ್ಪ ದೇಸಾಯಿ, ನಾರಾಯಣ ಕತ್ತಿ, ಡಾ, ಪರ‍್ಣಿಮಾ, ಡಾ, ಡಿ.ಆರ್.ನಾಯಕ, ಡಾ, ಭಾಗ್ಯಲಕ್ಷಇ ಬಸವಂತಪ್ಪ ನಾಯಕ, ಅವನಪ್ಪ ನಾಯಕ ಹಾಗೂ ಇನ್ನೂ ಅನೇಕರು ಇದ್ದರು.
ಅಮಲಝರಿ, ಕಿಶೋರಿ, ಯಡಹಳ್ಳಿ, ೩೫೦ ಜನರು ಆರೋಗ್ಯ ತಪಾಸಣೆ ಶಿಬಿರಲ್ಲಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ