ರಾಷ್ಟ್ರೀಯ ಫಲಿತಾಂಶಕ್ಕಿಂತ ಸತತ ಅಧಿಕ ಫಲಿತಾಂಶ ದಾಖಲಿಸಿದ ಆಳ್ವಾಸ್ ಕಾಲೇಜು

Upayuktha
0

ಸಿ.. ಅಂತಿಮ ಪರೀಕ್ಷೆ: 14 ಆಳ್ವಾಸ್ ವಿದ್ಯಾರ್ಥಿಗಳು ಉತ್ತೀರ್ಣ


 





ಮೂಡುಬಿದಿರೆ: 2023ರ ನವೆಂಬರ್‍ನಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 14 ಹಿರಿಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 9 ವಿದ್ಯಾರ್ಥಿಗಳು ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ.




ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ನೌಫಲ್, ವಾಣಿಶ್ರೀ, ಧಾಮಿನಿ, ಮೇಘಾ ಆರ್. ಶೆಟ್ಟಿ, ತೇಜಸ್ ಆಚಾರ್ಯ, ಕ್ಲಾರಿಸನ್, ಪ್ರಸಾದ ಭಂಡೇಕರ್, ದರ್ಶನ್ ಜಿ.ಎಚ್, ರಾಷ್ಟ್ರಿತ್ ಜಿ.ಸಿ, ಅವಿನಾಶ್, ಅಂಕಿತಾ ಕಲ್ಲಪ್ಪ, ಸೂಕ್ಷ್ಮ ಎಸ್ ಆಚಾರ್ಯ, ವಿನಾಯಕ್, ಅಭಿಷೇಕ್ ಚೋಟಿ  ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. 



ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆ 2023:

2023 ನವೆಂಬರ್‍ನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್  ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 9.73 ಶೇಕಡಾ ಫಲಿತಾಂಶ ಬಂದಿದ್ದರೆ,  ಆಳ್ವಾಸ್ ಪದವಿ ಕಾಲೇಜು ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02ನಲ್ಲಿ ಶೇಕಡಾ 21.43 ಫಲಿತಾಂಶ ದಾಖಲಿಸಿದ್ದಾರೆ. 



ಗ್ರೂಪ್ 01 ವಿಭಾಗದಲ್ಲಿ ರಾಷ್ಟ್ರೀಯ ಫಲಿತಾಂಶ ಶೇಕಡಾ 16.78 ದಾಖಲಾಗಿದ್ದರೆ, ಆಳ್ವಾಸ್ ವಿದ್ಯಾರ್ಥಿಗಳು  ಶೇಕಡಾ 60 ಫಲಿತಾಂಶ ಪಡೆದಿದ್ದಾರೆ. ಗ್ರೂಪ್-02 ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಶೇಕಡಾ 19.18 ದಾಖಲಾಗಿದ್ದರೆ, ಆಳ್ವಾಸ್ ವಿದ್ಯಾರ್ಥಿಗಳು  ಶೇಕಡಾ 66.66 ಗಳಿಸಿದ್ದಾರೆ. 



ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಪ್ರಾಂಶುಪಾಲ ಡಾ.ಕುರಿಯನ್, ಪದವಿಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಹಾಗೂ ಸಿ.ಎ. ಸಂಯೋಜಕರಾದ ಅನಂತಶಯನ, ಅಪರ್ಣಾ ಕೆ., ಅಭಿನಂದಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top