ತಿಮ್ಮಾಪುರ: ಇಂದು ಜನಪದ ಕಲೆ ಅವಸಾನದ ಅಂಚಿನಲಿದ್ದು ಅವುಗಳ ಉಳಿವಿಗಾಗಿ ಮಹಿಳೆಯರು ಶ್ರಮಿಸಬೇಕಾಗಿದೆ ಎಂದು ಉಪನ್ಯಾಸಕಿ ಗಿರಿಜಾ ತಾವಂಶಿ ಹೇಳಿದರು.
ಹುನಗುಂದ ತಾಲೂಕಿನ ಶೂಲೇಭಾವಿ ಶಾಂಭವಿ ಜನಪದ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇಂದು ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಪರಂಪರೆ, ಆಚರಣೆ ಮರೆಯಾಗುತ್ತಿವೆ ಇವುಗಳನ್ನು ಉಳಿಸುವ, ಪೋಷಿಸುವ ಗುರುತರ ಜವಾಬ್ದಾರಿ ಇಂದಿನ ಮಹಿಳೆಯರ ಮೇಲಿದೆ ಎಂದರು.
ಮುಖ್ಯ ಅತಿಥಿಯಾಗಿ ಹುನಗುಂದ ತಾಲೂಕು ಕ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಮಾತನಾಡಿ ಜನಪದ ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದೆ, ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ, ಗುರುತಿಸುವ ಕಾರ್ಯ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಲಾವಿದರಿಗೆ ಅವಕಾಶ ಒದಗಿಸುವ, ಗೌರವಿಸುವ ಕಾರ್ಯದಲ್ಲಿ ಸದಾ ಕ್ರಿಯಾಶೀಲವಾಗಿರಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಾಜ ಸೇವಕ ಕೃಷ್ಣಾ ರಾಮದುರ್ಗ ಅಧ್ಯಕ್ಷತೆ ವಹಿಸಿ ಕಲೆ ಕಲಾವಿದರು ಈ ನಾಡಿನ ಆಸ್ತಿ ಅವರಿಗೆ ಗೌರವಿಸುವ, ಪ್ರೋತಾಹಿಸುವ ಕಾರ್ಯವಾಗಬೇಕು, ಕಲಾವಿದರು ಸತತ ಅಭ್ಯಾಸದ ಮೂಲಕ ತಮ್ಮ ಕಲೆಯಲ್ಲಿ ನೈಪುಣ್ಯತೆ ಸಾಧಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯೆ ಜ್ಯೋತಿ ಪೂಜಾರಿ, ನರೇಂದ್ರ ಮಿಣಜಗಿ, ಬಸವರಾಜ ಧುತ್ತರಗಿ, ವಿನಾಯಕ ಧೂಪದ, ಮಲ್ಲಿಕಾರ್ಜುನ ಕಮತಗಿ, ಶಾಂತವ್ವ ಧುತ್ತರಗಿ, ಪ್ರೇಮಾ ಬಲಕುಂದಿ, ನಾರಾಯಣ ಲಾಯದಗುಂದಿ, ಹನಮಂತಪ್ಪ ರಾಮದುರ್ಗ ಸೇರಿದಂತೆ ಅನೇಕ ಮಹಿಳಾ ಕಲಾವಿದರು ಭಾಗಿಯಾಗಿದ್ದರು.
ಬಸವರಾಜ ಗಣಿ ಸ್ವಾಗತಿಸಿದರು. ಶಿಕ್ಷಕ ಸುಭಾಸ ಕಣಗಿ ನಿರೂಪಿಸಿ, ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ