ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಸಂಚಾರ ಆರಂಭ

Upayuktha
0

ಡಿ. 30ರಿಂದ ನಿಯಮಿತ ಸಂಚಾರ ಶುರು


ಮಂಗಳೂರು: ಕರಾವಳಿಯ ಜನತೆ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೋಮವಾರ ಸಂಜೆ ಚೆನ್ನೈನಿಂದ ಹೊರಟು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸಿದೆ. ಇದು ಮಂಗಳೂರು-ಮಡಗಾಂವ್ ಮಾರ್ಗದಲ್ಲಿ ಇಂದಿನಿಂದ (ಡಿ.26) ಪ್ರಾಯೋಗಿಕ ಸಂಚಾರ ಆರಂಭಿಸುತ್ತಿದೆ.


ಮಂಗಳೂರಿಗೆ ಆಗಮಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ. ವೇದವ್ಯಾಸ ಕಾಮತ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಸ್ವಾಗತಿಸಿದರು.


ಇಂದು ಬೆಳಗ್ಗೆ 8:30ಕ್ಕೆ ಸೆಂಟ್ರಲ್‌ ನಿಲ್ದಾಣದಿಂದ ಹೊರಟ ರೈಲು ಮಧ್ಯಾಹ್ನ 1:15ರ ವೇಳೆಗೆ ಮಡಗಾಂವ್ ತಲುಪಲಿದೆ. ಅಲ್ಲಿಂದ ಮರಳಿ 1:45ಕ್ಕೆ ಹೊರಡುವ ರೈಲು ಸಂಜೆ 6:30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.


ಈ ನೂತನ ರೈಲು ಚೆನ್ನೈನಿಂದ ಹೊರಟು ಮಂಗಳೂರಿಗೆ ತಲುಪಿದೆ. ದಕ್ಷಿಣ ರೈಲ್ವೆಯು ಡಿ.30ರಂದು ಮಂಗಳೂರು ಸೆಂಟ್ರಲ್- ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಸೇವೆ ಆರಂಭಿಸಲು ಸಜ್ಜಾಗಿದೆ.


ಈ ರೈಲಿನ ಸೇವೆ ಸಹಿತ ಒಟ್ಟು 6 ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳು ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣದ ಎರಡು ಹೆಚ್ಚುವರಿ ಪ್ಲಾಟ್‌ಫಾರ್ಮ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Advt Slider:
To Top