ಭಟ್ಕಳ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರಪ್ರಥಮ ಬಾರಿಗೆ ಶ್ರೀಕ್ಷೇತ್ರ ಬೆಳಕೆಯ ಶ್ರೀದುರ್ಗಾಪರಮೇಶ್ವರಿ ದೇವಾಲಯಕ್ಕೆ ಡಿ. 28ರಂದು ಗುರುವಾರ ಚಿತ್ತೈಸಲಿದ್ದು, ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ವಿವಿಧ ಧಾರ್ಮಿಕ ಹಾಗೂ ಸಭಾಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶ್ರೀಮಠದ ಸ್ವರ್ಣಪಾದುಕೆಗಳಿಗೆ ಭಿಕ್ಷಾಸೇವೆ ನಡೆಯಲಿದ್ದು, ಮಧ್ಯಾಹ್ನ ಧರ್ಮಸಭೆ ಹಾಗೂ ಪೂಜ್ಯ ಶ್ರೀಗಳವರ ಆಶೀರ್ವಚನ ಕಾರ್ಯಕ್ರಮ ಇರಲಿದೆ. ಆನಂತರದಲ್ಲಿ ಶ್ರೀನಿವಾಸ ಪ್ರಭು ಮತ್ತು ಪ್ರಸಾದ್ ಭಟ್ಕಳ ತಂಡದವರಿಂದ ಶರಸೇತುಬಂಧ ಯಕ್ಷಗಾನ ತಾಳಮದ್ದಳೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಮಂಜುನಾಥ ಬಿಲ್ಲವ ಎಂಬುವವರು ದೇವಾಲಯ ಸಹಿತವಾದ ಸುಮಾರು ಒಂದು ಎಕರೆ ಜಾಗವನ್ನು ಹವ್ಯಕ ಮಹಾಸಭೆಗೆ ಸೇವಾರೂಪದಲ್ಲಿ ಸಮರ್ಪಿಸಿದ್ದು, ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಹವ್ಯಕ ಮಹಾಸಭೆಗೆ ಈ ಜಾಗವನ್ನು ಸಮರ್ಪಿಸಿದ್ದಾರೆ.
ಹೊನ್ನಾವರ ಹವ್ಯಕ ಮಂಡಲ, ಭಟ್ಕಳ- ಭವತಾರಿಣಿ ಹಾಗೂ ಮರವಂತೆ ಹವ್ಯಕ ವಲಯಗಳ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆಸ್ತಿಕ ಭಕ್ತ ಮಹಾಜನರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹವ್ಯಕ ಮಹಾಸಭೆಯು ಆಹ್ವಾನಿಸುತ್ತಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ