ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜತೆ ಎಸ್‍ಬಿಐ ಲೈಫ್ ಒಪ್ಪಂದ

Upayuktha
0



ಮಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಜೀವ ವಿಮೆ ಕಂಪನಿಗಳಲ್ಲಿ ಒಂದಾಗಿರುವ ಎಸ್‍ಬಿಐ ಲೈಫ್ ಇನ್ಶೂರೆನ್ಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜೊತೆಗೆ ಧರ್ಮಸ್ಥಳದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ.




ಹಣಕಾಸು ಸೇರ್ಪಡೆ ಬೆಂಬಲಿಸಲು, ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಪಾಲುದಾರರ ಸಾಮಾಜಿಕ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸಲು, ಕರ್ನಾಟಕ ಮತ್ತು ಕೇರಳದಲ್ಲಿನ ಸಾಮಾಜಿಕ- ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಜೀವ ವಿಮೆ ಸೌಲಭ್ಯಗಳನ್ನು ಸುಲಭವಾಗಿ  ಒದಗಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಈ ಭಾಗದ ಗ್ರಾಮೀಣ ಕುಟುಂಬಗಳ ಹಣಕಾಸು ಸ್ಥಿರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಎಸ್‍ಬಿಐ ಲೈಫ್‍ನ ಬೆಂಗಳೂರು   ಪ್ರಾದೇಶಿಕ ನಿರ್ದೇಶಕ  ಅಶ್ವನಿ ಕುಮಾರ್ ಶುಕ್ಲಾ ಮತ್ತು ಎಸ್‍ಕೆಡಿಆರ್‍ಡಿಪಿ ಬಿ.ಸಿ ಟ್ರಸ್ಟ್‍ನ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಲ್.ಎಚ್. ಮಂಜುನಾಥ್ ಪ್ರಕಟಣೆಯಲ್ಲಿ ಹೇಳಿದ್ದಾರೆ.




ಭಾರತದಲ್ಲಿ 5 ದಶಲಕ್ಷಕ್ಕೂ ಹೆಚ್ಚು ದುರ್ಬಲ ಪಾಲುದಾರರ ಹಣಕಾಸು ಸೇರ್ಪಡೆ ಮತ್ತು ಸಾಮಾಜಿಕ ಅಭಿವೃದ್ಧಿ  ಬೆಂಬಲಿಸುವ ಅತ್ಯಂತ ದೊಡ್ಡ ಸಂಘಟಿತ ಕಾರ್ಯಕ್ರಮವನ್ನು ಎಸ್‍ಕೆಡಿಆರ್‍ಡಿಪಿ ಜಾರಿಗೆ ತಂದಿದ್ದು, ಈ ಭಾಗದ ಬಡವರು ಮತ್ತು ಅವಕಾಶ ವಂಚಿತರ ಯೋಗಕ್ಷೇಮ ಮತ್ತು ಸಾಮರಸ್ಯ ಹೆಚ್ಚಿಸುವ ಕಾರ್ಯಕ್ರಮಗಳನ್ನು  ಅನುಷ್ಠಾನಗೊಳಿಸುವ ಮೂಲಕ ಸಮಾಜವನ್ನು ಪರಿವರ್ತಿಸುವ ನಮ್ಮ ದೂರದೃಷ್ಟಿಗೆ ಸಂಬಂಧಿಸಿದ ನಮ್ಮ ಬದ್ಧತೆಯಲ್ಲಿ ನಾವು ಅಚಲವಾಗಿದ್ದೇವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.




ಎಸ್‍ಬಿಐ ಲೈಫ್‍ನ ವ್ಯವಸ್ಥಾಪಕ  ನಿರ್ದೇಶಕ ಮತ್ತು ಸಿಇಒ ಅಮಿತ್ ಜಿಂಗ್ರಾನ್,  ಎಸ್‍ಕೆಡಿಆರ್‍ಡಿಪಿ ಅಧ್ಯಕ್ಷ  ಡಾ. ಡಿ.ವೀರೇಂದ್ರ ಹೆಗ್ಗಡೆ,  ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ  ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ,   ಎಸ್‍ಡಿಎಂಇ ಸೊಸೈಟಿಯ ಯೋಜನಾ ನಿರ್ದೇಶಕ ಡಿ ಶ್ರೇಯಸ್ ಕುಮಾರ್,  ಎಸ್‍ಕೆಡಿಆರ್‍ಡಿಪಿ ಬಿ.ಸಿ ಟ್ರಸ್ಟ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top