ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 3ನೇ ತಿಂಗಳ ಶ್ರಮದಾನ

Upayuktha
0


ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಮೂರನೇ ತಿಂಗಳ ಶ್ರಮದಾನ ಕಾರ್ಯಕ್ರಮ ಭಾನುವಾರ (ಡಿ.10) ಮಂಗಳೂರು ವಿಭಾಗದ ಅಧ್ಯಕ್ಷರಾದ ಸಿ ಎ ಗೌತಮ್ ನಾಯಕ್ ಜಂಟಿಯಾಗಿ ಹಸಿರು ನಿಶಾನೆ ತೋರಿ, ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಸಂದೀಪ್ ಗರೋಡಿ, ಡಾ. ಸತೀಶ್ ರಾವ್, ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್, ಉದ್ಯಮಿ ನಂದನ್ ಮಲ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ "ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಯಶಸ್ವೀ ಯಾತ್ರೆ ನಿಜಕ್ಕೂ ಶ್ಲಾಘನೀಯ. ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ಈ ಅತ್ಯುತ್ತಮ ಕಾರ್ಯವನ್ನು ಮುಂದುವರಿಸಿದ್ದಾರೆ. ರಾಮಕೃಷ್ಣ ಮಿಷನ್ ಕಾರ್ಯಗಳಿಗೆ ಮಂಗಳೂರು ಮಹಾನಗರ ಪಾಲಿಕೆಯ ಸಹಕಾರ ಎಂದೂ ಇರುತ್ತದೆ. ಸ್ವಚ್ಛ ಮಂಗಳೂರು ಅಭಿಯಾನ ಉತ್ತಮ ರೀತಿಯಲ್ಲಿ ಮುಂದುವರಿಯಲಿ ಈ ಮೂಲಕ ನಮ್ಮ ಮಂಗಳೂರು ಸ್ವಚ್ಚ ಸುಂದರ ನಗರವಾಗಿ ಮಾರ್ಪಾಡುಗೊಳ್ಳಲಿ." ಎಂದು ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕಪಡಿಸಿದರು. 


ಸಿಎ ಗೌತಮ್ ನಾಯಕ್ ಮಾತನಾಡಿ "ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಒಂದು ಅರ್ಥಪೂರ್ಣ ಕಾರ್ಯಕ್ರಮ. ಇದರಲ್ಲಿ ಭಾಗಿಯಾಗುತ್ತಿರುವುದಕ್ಕೆ ನಮಗೆ ಬಹಳ ಸಂತೋಷವಾಗುತ್ತಿದೆ. ಇಂತಹ ಸ್ವಚ್ಛತಾ ಶ್ರಮದನಕ್ಕೆ ಮಂಗಳೂರಿಗರು ಕೈಜೋಡಿಸಬೇಕು" ಎಂದರು.


ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ, "ನಮ್ಮ ನಗರವನ್ನು ಸ್ವಚ್ಛ ಸುಂದರವಾಗಿರಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಸ್ವಚ್ಛತೆ ಎಂದರೆ ಭೂಮಾತೆಯ ಪೂಜೆ. ಈ ಪವಿತ್ರ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಬೇಕು. ಈ ಮೂಲಕ ನಮ್ಮ ಮಂಗಳೂರನ್ನು ಸ್ವಚ್ಛ ಹಾಗೂ ಸುಂದರ ನಗರವಾಗಿ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಬೇಕು" ಎಂದು ಕರೆ ನೀಡಿದರು. 


ಗಣ್ಯರು ಸಾಂಕೇತಿಕವಾಗಿ ಪಂಪ್‌ವೆಲ್ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಯೇಶ್ ನಾಯರ್, ರಂಗನಾಥ್ ಹಾಗೂ ಹಿರಿಯ ಸ್ವಯಂಸೇವಕರಾದ ಕಮಲಾಕ್ಷ ಪೈ, ಉದಯ್ ಕೆ ಪಿ, ಸೀತಾರಾಮ ಗಟ್ಟಿ, ಸುಬ್ಬಯ್ಯ, ಶಿವರಾಂ, ಸುನಂದಾ ಶಿವರಾಂ, ಪ್ರಕಾಶ್ ನೇತೃತ್ವದಲ್ಲಿ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಫ್ಲೈ ಓವರ್ ನ ಕೆಳಭಾಗ ಹಾಗೂ ಡಿವೈಡರ್ ಗಳನ್ನು ಶುಚಿಗೊಳಿಸಿದರು. ಎ.ಎಂ. ವಾಟರ್ ಸಪ್ಲೈ ಮಾಲಕರಾದ ಅನುಜ್ ಚನಿಲ್ಲೋ ಅವರೊಂದಿಗೆ ಪ್ರಕಾಶ್ ಗರೋಡಿ, ತಾರಾನಾಥ್ ಆಳ್ವ ಹಾಗೂ ಬಾಲಕೃಷ್ಣ ಭಟ್ ಟ್ಯಾಂಕರ್ ಮೂಲಕ ನೀರು ಹಾಕಿ ಫ್ಲೈ ಓವರ್ ಗೋಡೆಗಳನ್ನು ಸ್ವಚ್ಛಗೊಳಿಸಿದರು.


ಅನಧಿಕೃತ ಬ್ಯಾನರ್‌ಗಳ ತೆರವು: 

ಯುವವಾಹಿನಿ ಕಂಕನಾಡಿ ಘಟಕದ ಸದಸ್ಯರಾದ ಲೋಕೇಶ್, ಮಮತಾ, ರಾಹುಲ್, ಪೃಥ್ವಿರಾಜ್, ಸುಮತಿ, ತಿಲಕ್ ರಾಜ್, ರೋಹಿತ್, ಧನುಷ್ ಹಾಗೂ ಸ್ವಯಂಸೇವಕರಾದ ಸೌರಜ್, ಅನಿರುಧ್ ನಾಯಕ್, ಡಾ. ಕೃಷ್ಣ ಶರಣ್, ರಾಜೇಶ್ ಬಿ.ಕೆ. ನೇತೃತ್ವದಲ್ಲಿ ಎ.ಜೆ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಸದಾನಂದ, ಮನೋಹರ್ ಹಾಗೂ ವಿದ್ಯಾರ್ಥಿಗಳು ಜೊತೆಗೂಡಿ 50ಕ್ಕೂ ಹೆಚ್ಚು ದೊಡ್ಡ ಗಾತ್ರದ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಿದರು. 

 

ಸರ್ವಶಕ್ತಿ ಮಹಿಳಾ ಮಂಡಳಿ ಸದಸ್ಯರಾದ ತೇಜಾಕ್ಷಿ ಮೋಹನ್, ಶಕುಂತಲಾ ಗಟ್ಟಿ, ಚಂದ್ರಿಕಾ ಹಾಗೂ ಸರ್ವಶಕ್ತಿ ಬಾಲ ಭಜನಾ ಕಲಿಕಾ ತಂಡದ ಮಕ್ಕಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಿದ್ದು ವಿಶೇಷವಾಗಿತ್ತು. ಹಿರಿಯ ಕಾರ್ಯಕರ್ತರಾದ ಉಮಾನಾಥ ಕೋಟೆಕಾರ್, ಸತ್ಯನಾರಾಯಣ ಕೆ. ವಿ, ದಿಲ್ ರಾಜ್ ಆಳ್ವ ಅಭಿಯಾನದಲ್ಲಿ ಭಾಗವಹಿಸಿದ್ದರು. ಎಂ.ಆರ್.ಪಿ.ಎಲ್. ಪ್ರಾಯೋಜಕತ್ವ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಸಹಕಾರದಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಯಿತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top