ಪಿ. ಶ್ರೀಧರ್ ಆಚಾರ್ಯ ಇವರಿಗೆ ಪಿ.ಹೆಚ್.ಡಿ. ಪದವಿ

Upayuktha
0


ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ಸ್ ಅಂಡ್ ಇನ್ಫಾರ್ಮಶನ್ ಸೈನ್ಸ್ ನಲ್ಲಿ ಎಚ್.ಒ.ಡಿ. ಆಗಿ ಸೇವೆ ಸಲ್ಲಿಸುತ್ತಿರುವ  ಪಿ. ಶ್ರೀಧರ್ ಆಚಾರ್ಯ ಇವರು ಸಿದ್ಧಪಡಿಸಿದ "ಸೌರಶಕ್ತಿಯ ಅತ್ಯುತ್ತಮ ಬಳಕೆಗಾಗಿ ಎಲೆಕ್ಟ್ರಾನಿಕ್ ಚಾರ್ಜ್ ಕಂಟ್ರೋಲರ್ ವಿನ್ಯಾಸ ಮತ್ತು ಅಧ್ಯಯನ" ಎಂಬ ಮಹಾ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿ.ಹೆಚ್.ಡಿ.) ಪದವಿಯನ್ನು ನೀಡಿ ಗೌರವಿಸಿರುತ್ತದೆ. ಶ್ರೀಯುತರು ಡಾ. ಪಿ. ಶ್ರೀರಮಣ ಐತಾಳ್ ಇವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಸಿದ್ಧಪಡಿಸಿರುತ್ತಾರೆ. ಇವರು ಉಡುಪಿಯ ಪಿ. ಶ್ರೀಪತಿ ಆಚಾರ್ ಮತ್ತು ಯಶೋಧ ದಂಪತಿ ಪುತ್ರ.


ಇವರ ಪತ್ನಿ ಶೋಭಾ ಪಿ. ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top