ಕಲಿಕಾ ಫಲ ಆಧರಿತ ತರಗತಿ ಪ್ರಕ್ರಿಯೆಯು ಮಕ್ಕಳ ಕಲಿಕೆಗೆ ಪೂರಕ: ಹೆಚ್.ಕೆ. ಪುಷ್ಪಲತಾ

Upayuktha
0


ಹಾಸನ: ವಿವಿಧ ಶೈಕ್ಷಣಿಕ ಸಮೀಕ್ಷೆಗಳು, ಅಧ್ಯಯನಗಳು ನೀಡಿದ ವರದಿಗಳ ಆಧಾರದ ಮೇಲೆ ಮುಂದಿನ  ಕಲಿಕಾ ಫಲ ಆಧರಿತ ತರಗತಿ ಪ್ರಕ್ರಿಯೆಯ ಕ್ರಿಯಾ ಯೋಜನೆ ರೂಪುಗೊಳ್ಳಬೇಕು. ಇದರ ಆಧಾರದ ಮೇಲೆ ಶಾಲೆಗಳಲ್ಲಿ ಮಕ್ಕಳ ಕಲಿಕಾ ಪ್ರಗತಿಗೆ ಪೂರಕ ವಾತಾವರಣವನ್ನು ಶಿಕ್ಷಕರು ನಿರ್ಮಾಣ ಮಾಡಿಕೊಳ್ಳುವಂತೆ ಅನುಷ್ಟಾನಾಧಿಕಾರಿಗಳು ಸೂಕ್ತ ಸಲಹೆ ಸೂಚನೆ ಮಾರ್ಗದರ್ಶನ ನೀಡಬೇಕು ಎಂದು ಹಾಸನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಆದ ಹೆಚ್. ಕೆ. ಪುಷ್ಪಲತಾ ಹೇಳಿದರು. 


ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಇಲ್ಲಿ ಹಾಸನ ಮತ್ತು ಆಲೂರು ತಾಲ್ಲೂಕುಗಳ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಮಕ್ಕಳು ನಿರ್ದಿಷ್ಟ ಕಲಿಕಾ ಸಾಮರ್ಥ್ಯದ ಆಧಾರಿತ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಕಲಿಕಾ ಫಲಗಳನ್ನು ಸಾಧಿಸಬೇಕು. ಕಲಿಕೆ ನಿರಂತರವಾಗಿದ್ದು ಮಕ್ಕಳಿಗೆ ಅನುಕೂಲಿಸುವ ಶಿಕ್ಷಕರು ತಮ್ಮ ಸಹಕಾರದೊಂದಿಗೆ ಸ್ವಕಲಿಕೆಗೆ ಆದ್ಯತೆ ನೀಡಬೇಕು. ಮಗು ತರಗತಿಯಲ್ಲಿ ಪಡೆದ ಶಿಕ್ಷಣವನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಎಲ್ಲಾ ಸಮೀಕ್ಷಾ ವರದಿಗಳ ಪ್ರಕ್ರಿಯೆ ಸಾರ್ಥಕವಾಗುತ್ತದೆ ಎಂದು ಹೇಳಿದರು. 


ತರಬೇತಿಯ ಸಂಚಾಲಕರು ಮತ್ತು ಡಯಟ್ ನ ಉಪನ್ಯಾಸಕರಾದ ಶಾರದಾ ಕೆ. ರವರು ಮಾತನಾಡಿ ಮಕ್ಕಳ ಕಲಿಕೆಯಲ್ಲಿ ಕಲಿಕಾ ಫಲಗಳು ಮಹತ್ವದ ಸ್ಥಾನ ಪಡೆದಿವೆ. ಅವುಗಳನ್ನು ಸಾಧಿಸುವಲ್ಲಿ ಅಧ್ಯಯನಗಳು ಮತ್ತು ಸಮೀಕ್ಷಾ ವರದಿಗಳು ಬಹಳ ಮುಖ್ಯ ವಾಗುತ್ತವೆ ಹಾಗೂ ನಾವಿನ್ಯಯುತ ಕಲಿಕಾ ಚಟುವಟಿಕೆಗಳೊಂದಿಗೆ ಶಿಕ್ಷಕರು ಮಕ್ಕಳಿಗೆ ಅನುಕೂಲಿಸಿ ಕಲಿಸಬೇಕು. ಈ ನಿಟ್ಟಿನಲ್ಲಿ ಅನುಷ್ಠಾನಾಧಿಕಾರಿಗಳ ಪಾತ್ರ ಬಹಳಷ್ಟಿದೆ   ಎಂದರು. 


ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಗರದ ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ. ಎನ್. ಚಿದಾನಂದ ರವರು ಆ್ಯನ್ಯುಯಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್ ಮತ್ತು ರಾಷ್ಟೀಯ ಸಾಧನಾ ಸಮೀಕ್ಷೆಯ ವರದಿಗಳನ್ನು ಪ್ರಸ್ತುತ ಪಡಿಸಿದರು. ಮಕ್ಕಳು ಯಾವ ಯಾವ ಕಲಿಕಾ ಸಾಮರ್ಥ್ಯಗಳಲ್ಲಿ ಶೇಕಡಾವಾರು ಫಲಿತಾಂಶ ಸಾಧಿಸಿದ್ದಾರೆ. ಶೇಕಡಾ ನೂರರಷ್ಟು ಸಾಧನೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ವಿವರಿಸಿದರು. ಶಿಕ್ಷಣ ಸಂಯೋಜಕ ರಾದ ಪ್ರಸನ್ನ ರವರು ತಮ್ಮ ತರಗತಿಯಲ್ಲಿ ಫೌಂಡೇಷನಲ್ ಲರ್ನಿಂಗ್ ಸ್ಟಡಿ ಕುರಿತು ಮಾಹಿತಿ ನೀಡಿದರು.


ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರಾಜರಾವ್ ರವರು ಸಿಎಸ್ಎಎಸ್ ಪರೀಕ್ಷೆಯಲ್ಲಿ ಮಕ್ಕಳು ಸಾಧಿಸಿರುವ ಪ್ರಗತಿಯ ವರದಿಯನ್ನು ಪ್ರಸ್ತುತ ಪಡಿಸಿದರು. ಹಾಸನ ಮತ್ತು ಆಲೂರು ತಾಲ್ಲೂಕುಗಳು ಸಿ ಆರ್ ಪಿ ಮತ್ತು ಬಿ.ಆರ್.ಪಿ ಯವರು ಶಿಬಿರಾರ್ಥಿಗಳಾಗಿ ಹಾಜರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top