ಮೌಖಿಕ ಪ್ರಕಾರವೇ ಭಾರತದ ಅಸ್ಮಿತೆಯ ಜೀವಾಳ: ಪ್ರಕಾಶ ಬೆಳವಾಡಿ

Upayuktha
0



ಧರ್ಮಸ್ಥಳ: ರಂಗಭೂಮಿಯಲ್ಲಿ ಪ್ರತಿ ಕ್ಷಣ ತಿದ್ದುವಿಕೆಯನ್ನು ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರುವುದರಿಂದ ಇನ್ನೂ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ ಎಂದು ಉಪನ್ಯಾಸಕರಾದ ಪ್ರಕಾಶ ಬೆಳವಾಡಿ ಅಭಿಪ್ರಾಯಪಟ್ಟರು.




ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಮಂಗಳವಾರ ನಡೆದ 91 ನೇ ಸಾಹಿತ್ಯ ಸಮ್ಮೇಳನದ ಉಪನ್ಯಾಸಕರಾಗಿ ಅವರು ಮಾತನಾಡಿದರು. ರಂಗಭೂಮಿಯು ಅನುಭವದಿಂದ ಕಟ್ಟಲ್ಪಟ್ಟಿದ್ದು, ಸದಾ ಹೊಸತನಕ್ಕೆ ತೆರೆದುಕೊಂಡಿರುತ್ತದೆ. ರಂಗಭೂಮಿಯಲ್ಲಿ ಪ್ರತಿ ಕ್ಷಣವೂ ಹೊಸದನ್ನು ಅಳವಡಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ರಂಗಭೂಮಿಯಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಲು ಇದು ಸಕಾಲ ಎಂದರು.




ಆರ್ಟಿಫಿಶಿಯಲ್ ಇಂಟೆಲಿಜೆಸ್ಸ್ ಮನುಷ್ಯನ ಬದುಕಿನಲ್ಲಿ ಹಾಸುಹೊಕ್ಕಾಗುತ್ತದೆ. ಅತಿಯಾದ ಯಾಂತ್ರಿಕರಣವು ಮನುಷ್ಯನ ಅವಶ್ಯಕತೆಯನ್ನು ಉದ್ಯೋಗವನ್ನೂ ಇಲ್ಲವಾಗಿಸುತ್ತಿವೆ. ಮನುಷ್ಯನೇ ಸೃಷ್ಟಿಸಿದ ಯಂತ್ರದ ಕೈಯಲ್ಲಿ ಮನುಷ್ಯನೇ ಕೈಗೊಂಬೆಯಾಗುತ್ತಿರುವುದು ದುರಾದೃಷ್ಟವೇ ಸರಿ ಎಂದು ಕಳವಳ ವ್ಯಕ್ತಪಡಿಸಿದರು.




ಆರ್ಟಿಫಿಶಿಯಲ್ ಇಂಟೆಲಿಜೆಸ್ಸ್ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಮೌಕಿಕ ಕಲೆಯನ್ನು ಉಳಿಸಿಕೊಳ್ಳುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ. ಎಷ್ಟೋ ವರ್ಷದಿಂದ ಕಾಪಾಡಿಕೊಂಡ ಬಂದ ಮೌಕಿಕ ಪರಂಪರೆಯನ್ನು ಭಾರತೀಯರು ಕಾಯ್ದುಕೊಂಡು ಬಂದಿದ್ದಾರೆ. ಇದನ್ನು ಉಳಿಸಿಕೊಂಡರೆ ಮಾತ್ರ ಯುವಕರನ್ನು ಭಾರತೀಯರಾಗಿ ಉಳಿಸಿಕೊಳ್ಳಲು ಸಾಧ್ಯ ಎಂದರು.




ಸಾಹಿತ್ಯ ಸಮ್ಮೇಳನವನ್ನು ರಾಮಕೃಷ್ಣ ಬಿ.ಎನ್ ಉದ್ಘಾಟಿಸಿದರು. ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ  ಅವರು ಸ್ವಾಗತಿಸಿದರು. ಉಪನ್ಯಾಸಕರಾದ ಡಾ.ಶ್ರೀಪಾದ ಶೆಟ್ಟಿ, ಪ್ರಕಾಶ ಬೆಳವಾಡಿ, ಡಾ. ಅಜ್ಜಕ್ಕಳ ಗಿರೀಶ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ದಿವಾಕರ ಕೊಕ್ಕಡ ಮತ್ತು ಡಾ.ರಾಜಶೇಖರ ಹಳೆಮನೆ ನಿರೂಪಿಸಿ, ಕೇಶವ ಗೌಡ ಪಿ ವಂದಿಸಿದರು.



- ಸುಚೇತಾ ಹೆಗಡೆ

ದ್ವಿತೀಯ ಎಂ.ಎ. 

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ 

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top