ಮಂಗಳೂರು: ಕರ್ನಾಟಕದ ಹೆಬ್ಬಾಗಿಲು, ಪ್ರಮುಖ ಬಂದರು ನಗರವಾಗಿರುವ ಮಂಗಳೂರು ರಾಜ್ಯದ ಎರಡನೇ ಅತಿದೊಡ್ಡ ವ್ಯಾಪಾರ ತಾಣವಾಗಿ ಹೊರಹೊಮ್ಮಿದ್ದು, ಇದರ ಬೆಳವಣಿಗೆಗೆ ಜಸ್ಟ್ ಡಯಲ್ ಬಹುದೊಡ್ಡ ಕೊಡುಗೆ ನೀಡಿದೆ.
ಈ ಭಾಗದ ಉದ್ಯಮಗಳಿಗೆ ಹೆಚ್ಚಿನ ಜನರನ್ನು ತಲುಪಲು ಸಹಾಯ ಮಾಡುವ ಮೂಲಕ ತಮ್ಮ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತಿದೆ. ಜಸ್ಟ್‍ಡಯಲ್ ಡಿಜಿಟಲ್ ಬೆಳವಣಿಗೆಯನ್ನು ಸಾಧ್ಯವಾಗಿಸುತ್ತಿದೆ ಮತ್ತು ಸ್ಥಳೀಯ ವ್ಯವಹಾರಗಳಿಗೆ ದೃಢವಾದ ಡಿಜಿಟಲ್ ಮಾರ್ಕೆಟಿಂಗ್ ಪರಿಹಾರಗಳನ್ನು ಒದಗಿಸುತ್ತಿದೆ ಎಂದು ಕಾರ್ ಡೆಕೋರ್‍ನ ಮಾಲೀಕರಾದ ಮುಖೇಶ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ವಿಶಿಷ್ಟ ಗುರುತನ್ನು ಸ್ಥಾಪಿಸುವಲ್ಲಿ ಮತ್ತು ಬೆಂಗಳೂರಿನಾದ್ಯಂತ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಜಸ್ಟ್‍ಡಯಲ್ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಹೆವನ್ ರೋಸ್ ಯುನಿಸೆಕ್ಸ್ ಪ್ರೊಫೆಷನಲ್ ಸಲೂನ್‍ನ ವ್ಯವಸ್ಥಾಪಕ ನಿರ್ದೇಶಕ ಮುಸ್ತಫಾ ಹೇಳಿದ್ದಾರೆ. ಸನ್‍ಶೈನ್ ಸೋಲಾರ್ ಸೊಲ್ಯೂಷನ್ಸ್ ನ ವಿಶ್ವನಾಥ್ ಕೂಡಾ ತಮ್ಮ ಕಂಪನಿಯ ಆನ್‍ಲೈನ್ ಉಪಸ್ಥಿತಿಯನ್ನು ಹೆಚ್ಚಿಸುವಲ್ಲಿ ಮತ್ತು ಕಳೆದ ಐದು ವರ್ಷಗಳಿಂದ ಬೆಳವಣಿಗೆ ಸಾಧಿಸುವಲ್ಲಿ ಜಸ್ಟ್ ಡಯಲ್‍ನ ಡಿಜಿಟಲ್ ಬೆಂಬಲವನ್ನು ಶ್ಲಾಘಿಸಿದ್ದಾರೆ.
ಮಂಗಳೂರಿನಲ್ಲಿ ಎಂಎಸ್‍ಎಂಇಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ವ್ಯಾಪಾರ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಉದ್ಯಮಗಳಿಗೆ ದೃಢವಾದ ಡಿಜಿಟಲ್ ಉಪಸ್ಥಿತಿಯನ್ನು ಸಾಧಿಸುವಲ್ಲಿ ಜಸ್ಟ್ ಡಯಲ್ ದೃಢವಾದ ಪಾಲುದಾರನಾಗಿ ಉಳಿದಿದೆ, ಡಿಜಿಟಲ್ ಯಶಸ್ಸು ಮತ್ತು ನಿರಂತರ ಬೆಳವಣಿಗೆಯತ್ತ ಅವರನ್ನು ಮುನ್ನಡೆಸುತ್ತಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ