'ಜ್ಞಾನ ದೀವಿಗೆ' ಕಂಪ್ಯೂಟರ್ ಕೊಠಡಿ ಹಸ್ತಾಂತರ

Upayuktha
0


ಬಂಟ್ವಾಳ: ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಏಮಾಜಿ ಕಿರಿಯ ಪ್ರಾಥಮಿಕ ಶಾಲೆಗೆ ದಿ. ಕೆ.ಎನ್. ಕೇಶವ ಆಳ್ವ ಕರಿಂಕ ಹೊಸಮನೆರವರ ಸ್ಮರಣಾರ್ಥ ಎ ಜೆ ಸಂಶೋಧನಾ ಕೇಂದ್ರ ಮಂಗಳೂರು ಇಲ್ಲಿನ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವರವರು  ಸುಮಾರು 6 ಲಕ್ಷ ವೆಚ್ಚದಲ್ಲಿ ನೂತನವಾಗಿ "ಜ್ಞಾನ ದೀವಿಗೆ" ಎನ್ನುವ ಕಂಪ್ಯೂಟರ್ ಕೊಠಡಿಯನ್ನು ಕೊಡುಗೆಯಾಗಿ ನೀಡಿದ್ದು, ಇದರ ಹಸ್ತಾಂತರ ಕಾರ್ಯಕ್ರಮವು ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ರವರ ಉಪಸ್ಥಿತಿಯಲ್ಲಿ ನೆರವೇರಿತು. ದಿವಂಗತ ಕೆ ಎಂ ಕೇಶವ ಆಳ್ವರವರ ಧರ್ಮಪತ್ನಿ ಶ್ರೀಮತಿ ಆಳ್ವರವರು ದೀಪ ಪ್ರಜ್ವಲಿಸುವ ಮೂಲಕ ಕೊಠಡಿಯನ್ನು ಉದ್ಘಾಟಿಸಿದರು.


ಆಧುನಿಕ ಶಿಕ್ಷಣದಿಂದ ಸರಕಾರಿ ಶಾಲೆ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಡಾ. ಅಶ್ವಿನ್ ಆಳ್ವರ ಈ ಕೊಡುಗೆ ನಿಜಕ್ಕೂ ಶ್ಲಾಘನೀಯ, ಅದು ಕೂಡ ಕೊಠಡಿಯ ಪೂರ್ಣ ವೆಚ್ಚವನ್ನು ಒಬ್ಬರೇ ಬರಿಸಿದ್ದು ತನ್ನ ಊರಿನ ಸರಕಾರಿ ಶಾಲೆಯ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಗ್ರಾಮದ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಈ ಸರಕಾರಿ ಶಾಲೆಗೆ ಕಳುಹಿಸಿ ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತೆ ಕರೆ ನೀಡಿ. ಶಾಲಾ ಪರವಾಗಿ ಶಾಸಕರು ಶ್ರೀಮತಿ ಶ್ರೀಮತಿ ಕೇಶವ ಆಳ್ವ, ಅನೂಪ್ ಆಳ್ವ, ಅನುಷಾ ಆಳ್ವರವರನ್ನು ಗೌರವಿಸಿದರು.


ಈ ಸಂದರ್ಭದಲ್ಲಿ ಶಾಲಾ  ಎಸ್ ಡಿ ಎಂ ಸಿ ಅಧ್ಯಕ್ಷ ಮಲ್ಲಿಕಾ ಗಣೇಶ್, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ ಹಾಗೂ ಸದಸ್ಯರು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು, ವಿದ್ಯಾ ಭಿಮಾನಿಗಳು ಉಪಸ್ಥಿತರಿದ್ದರು.


ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಸ್ವಾಗತಿಸಿ, ಸಹ ಶಿಕ್ಷಕ ಉದಯಚಂದ್ರ ವಂದಿಸಿ, ಗೌರವ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top