ಮಂಗಳೂರು: ತುಳುಕೂಟ(ರಿ) ಕುಡ್ಲದ ಬಂಗಾರ್ ಪರ್ಬ ಸರಣಿ ವೈಭವ- 10ರ ಪ್ರಯುಕ್ತ ಕಾಟಿಪಳ್ಳದ ಶ್ರೀ ನಾರಾಯಣ ಗುರು ಪ.ಪೂ. ಕಾಲೇಜಿನಲ್ಲಿ ಡಿಸೆಂಬರ್ 30ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪಾರಂಪರಿಕ ವಾದ್ಯಗಳ ವಾದನ ಸ್ಪರ್ಧೆ ಜರಗಲಿದೆ. ಶಾಲಾ/ಕಾಲೇಜಿನ ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಭಾಗವಹಿಸಬಹುದಾಗಿದೆ.
ಚರ್ಮ ವಾದ್ಯಗಳು:
ಡೋಲು, ಚೆಂಡೆ, ತೆಂಬೆರೆ, ದಡಿ, ನಗಾರಿ, ಉಡಿಕೆ, ಮದ್ದಳೆ, ತಬಲ, ಬ್ಯಾಂಡ್ ತಾಸೆ, ಚಿಟಿಕೆ, ಗುಮಟೆ,
ಹಾರ್ಮೋನಿಯಂ,
ಗಾಳಿ ವಾದ್ಯಗಳು:
ಬೋಂಕ. ಕೊಳಲು'/ ವಂಶಿ, ನಾಗಸ್ವರ, ಕೊಂಬು, ವಾಲಗ, ಕಹಳೆ, ಸ್ಯಾಕ್ಸೋಫೋನ್, ಪುಂಗಿ
ತಾಳವಾದ್ಯಗಳು: ಜಾಗಟೆ, ಸೂರ್ಯವಾದ್ಯ, ಶಂಖ, ಭಜನೆಯ ತಾಳ, ಟಮಕಿ.
ಇಲ್ಲಿ ಎಲೆಕ್ಟ್ರಾನಿಕ್ ಸಾಧನೆಗಳಿಗೆ ಅವಕಾಶವಿಲ್ಲ. ಒಂದು ವಿಭಾಗಕ್ಕೆ ಎರಡು ಸ್ಪರ್ಥಿಗಳು ಭಾಗವಹಿಸಬಹುದು. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಕೂಟದ ಪ್ರ.ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ (9481163531)ರನ್ನು ಸಂಪರ್ಕಿಸಬಹುದೆಂದು ಕೂಟದ ಅಧ್ಯಕ್ಷ ಮರೋಳಿ ದಾಮೋದರ ನಿಸರ್ಗ ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ