ಮಾನವೀಯತೆಯಿಲ್ಲವೇ ಮನುಜ? ಮೂಕಪ್ರಾಣಿಗಳ ಕೊಂದು ನೀನು ಬದುಕುವೆಯಾ?

Upayuktha
0

ಸಾಂದರ್ಭಿಕ ಚಿತ್ರ (ಕೃಪೆ: Scroll.in)


ರಸ್ತೆಯೆಂದರೆ ಕೇಳಬೇಕಾ, ಎಷ್ಟು ವಾಹನಗಳು, ಎಷ್ಟೊಂದು ಸವಾರರು. ನಾ ಮುಂದು, ತಾ ಮುಂದು ಎಂದೂ ಮುನ್ನುಗುವರು. ಅವಸರವೇ ಅಪಘಾತಕ್ಕೆ ಕಾರಣಯೆಂಬ ಮಾತಿದೆ, ಆದರೆ ಜನರು ಅವಸರವಾಗಿ ವಾಹನ ಚಲಿಸುವುದನ್ನು ಬಿಡುವುದಿಲ್ಲ. ರಸ್ತೆ ದಾಟುವಾಗ ಮೈ ಮೇಲೆ ವಾಹನ ಚಲಿಸುತ್ತಾರೋ ಎಂಬ ಭಯದಲ್ಲೇ ರಸ್ತೆ ದಾಟಬೇಕು. ರಸ್ತೆ ಅಂದ ಮೇಲೆ ಮನುಷ್ಯರು ಮಾತ್ರ ಇರೋದಿಲ್ಲ, ಮೂಕ ಪ್ರಾಣಿಗಳು ಇರುತ್ತಾವೆ. ಈ ಕಾಲದಲ್ಲಿ ಮನುಷ್ಯರನ್ನು ಕೊಲ್ಲಲು ಹಿಂದೆ -ಮುಂದೆ ನೋಡದ ಜನ, ಮೂಕ ಪ್ರಾಣಿಗಳು ವಾಹನದ ಅಡ್ಡಕ್ಕೆ ಬಂದರೆ ಅದನ್ನು ಕೊಂದು ಅವಸರವಾಗಿ ಹೋಗುತ್ತಾರೆ.


ಮೂಕ ಪ್ರಾಣಿಗಳು ಅಲ್ಲವೇ ಮಾತು ಬರಲ್ಲ, ಸತ್ತರೆ ನಮಗೇನುಯೆಂದು ಒಟ್ಟಾರೆ ವಾಹನ ಚಲಿಸುವರು. ನಾಯಿ, ಬೆಕ್ಕು, ದನ ಹಾಗೂ ಇತರ ಮೂಕ ಪ್ರಾಣಿಗಳಿಗೂ ಕುಟುಂಬವಿರುತ್ತೆ, ನಿಮಗೆಷ್ಟೂ ಅವಸರವಿರುತ್ತೋ ಅಷ್ಟೇ ಅವಸರ ಅವುಗಳಿಗೆ ಇರುತ್ತೆ, ಮಾತು ಬರೋಲ್ಲ ಎಂದ ತಕ್ಷಣ ಕೊಲ್ಲುವಷ್ಟು ಕ್ರೂರತನವಿರಬಾರದು. ಮೂಕ ಪ್ರಾಣಿಗಳಿಗೆ ನಿಯತ್ತು ಮನುಷ್ಯನಿಗಿಂತ ಜಾಸ್ತಿಯೇ ಇರುತ್ತೆ. ಈ ಕಲಿಯುಗದಲ್ಲಿ ಮನುಷ್ಯರನ್ನು ಕೊಲ್ಲಲು ಹಿಂದೆ ಮುಂದೆ ನೋಡದ ಜನ, ಮೂಕ ಪ್ರಾಣಿಗಳನ್ನು ಕೊಲ್ಲುವುದರಲ್ಲಿ ವಿಪರ್ಯಾಸವಿಲ್ಲ.


ಕುಡಿದು ವಾಹನ ಚಾಲನೆ ಮಾಡುವುದು ಅಪರಾಧವೆಂದು ತಿಳಿದ ಜನ ಕುಡಿದು ವಾಹನ ಚಲಿಸಿ ಆಕಾಶದಲ್ಲಿ ತೇಲಾಡುವ ಹಾಗೇ ಯಾರೂ ವಾಹನಕ್ಕೆ ಅಡ್ಡ ಬಂದರೂ ತಿಳಿಯದು. ಮಾನವೀಯತೆ ತೋರಿ ಮೂಕ ಪ್ರಾಣಿಗಳನ್ನು ಉಳಿಸಿ, ಆದರೆ ದಯವಿಟ್ಟು ಅವಸರವಾಗಿ ಹೋಗಿ ಮುಗ್ಧ ಜೀವಿಗಳನ್ನು ಕೊಲ್ಲಬೇಡಿ.


"ಮೂಕ ಪ್ರಾಣಿಗಳ ಕಾಳಜಿಗೆ ಬೆಲೆ ಕಟ್ಟಲಾಗುವುದಿಲ್ಲ, 

ಮನುಷ್ಯನ ಕ್ರೂರತೆಗೆ ಇತಿ ಮಿತಿಯೇ ಇಲ್ಲ"


- ಸುಚಿರಾ ಪ್ರಕಾಶ್ ಶೆಟ್ಟಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top