ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ಸಾಹಿತ್ಯ ಸಂಘ ಗೋವಿಂದ ದಾಸ ಕಾಲೇಜು, ಸುರತ್ಕಲ್ ಮತ್ತು ವಿದ್ಯಾ ಪ್ರಕಾಶನ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ರಘು ಇಡ್ಕಿದು ರವರ ಮೂವತ್ತನೇ ಕೃತಿ ಎನ್ನ ನಲಿಕೆ ತುಳು ಕವನ ಸಂಕಲನದ ಬಿಡುಗಡೆಯು ಗೋವಿಂದ ದಾಸ ಕಾಲೇಜಿನ ಸಭಾ ಭವನದಲ್ಲಿ ಡಿಸೆಂಬರ್ 30 ರಂದು ಅಪರಾಹ್ನ 2.00 ಗಂಟೆಗೆ ನಡೆಯಲಿದೆ.
ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಹಿರಿಯ ದೈವ ನರ್ತಕ ಲೋಕಯ್ಯ ಸೇರ, ಮಾಣಿ ಕೃತಿ ಬಿಡುಗಡೆ ನಡೆಸಲಿದ್ದಾರೆ. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷ್ಯೆ ಜ್ಯೋತಿ ಚೇಳ್ಯಾರು ಅವರ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ನಡೆಯಲಿದೆ. ಮಂಗಳೂರು ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜಿನ ಪ್ರಾಧ್ಯಾಪಕಿ ಮಣಿ ಮನಮೋಹನ್ ರೈ ಕೃತಿ ಕುರಿತು ಮಾತನಾಡಲಿದ್ದಾರೆ. ಪ್ರಕಾಶಕರಾದ ಕಲ್ಲೂರು ನಾಗೇಶ ಹಾಗೂ ಪತ್ರಕರ್ತ ರಾಜೇಶ್ ಶೆಟ್ಟಿ ದೋಟ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುನ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತುನ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಉಪಸ್ಥಿತರಿರುವರು.
ಡಾ. ಸುರೇಶ್ ನೆಗಳಗುಳಿ, ಡಾ. ಸಂತೋಷ ಆಳ್ವ, ಚೆನ್ನಪ್ಪ ಅಳಿಕೆ, ರೇಮಂಡ್ ಡಿಕುನಾ ತಾಕೊಡೆ, ಸುಲೋಚನ ಪಚ್ಚಿನಡ್ಕ, ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ, ಅಶೋಕ ಎನ್. ಕಡೇಶಿವಾಲಯ, ಉಮೇಶ್ ಶಿರಿಯ, ಜೀವಪರಿ, ಯಶವಂತ ಡಿ.ಎಸ್., ರೇಖಾ ಸುದೇಶ್ ರಾವ್, ಸೌಮ್ಯಾ ಆರ್. ಶೆಟ್ಟಿ, ಅನುರಾಧ ರಾಜೀವ್ ಸುರತ್ಕಲ್, ಭಾಸ್ಕರ್ ವರ್ಕಾಡಿ, ಎಸ್.ಕೆ.ಕುಂಪಲ, ಎಂ.ಎಸ್.ವೆಂಕಟೇಶ್ ಗಟ್ಟಿ, ಗೀತಾ ಲಕ್ಷ್ಮೀಶ್, ಸೌಮ್ಯಾ ಗೋಪಾಲ್, ರಶ್ಮಿ ಸನಿಲ್, ರಾಜೇಶ್ವರಿ ಎಚ್.ಬಜ್ಪೆ, ಹಿತೇಶ್ ಕುಮಾರ್ ಕವಿಗಳಾಗಿ ಭಾಗವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ