ಡಿ.17: ಪಿಟೀಲು ವಾದ್ಯ ವೈಭವ

Upayuktha
0



ಬೆಂಗಳೂರು : ಗಾನಕಲಾಭೂಷಣ, ಕಲಾಜ್ಯೋತಿ ಪ್ರಶಸ್ತಿ ವಿಜೇತರೂ ಹಿರಿಯ ಪಿಟೀಲು ವಾದಕರೂ ಆದ ಶ್ರೀ ಎಸ್. ಶೇಷಗಿರಿರಾವ್ ಅವರ 80ನೇ ಹುಟ್ಟುಹಬ್ಬ ಹಾಗೂ ಅಂತಾರಾಷ್ಟ್ರೀಯ ಪಿಟೀಲು ದಿನ (ಡಿ.13) ಈ ಜಂಟಿ ಸಮಾರಂಭಗಳ ಪ್ರಯುಕ್ತ ಡಿಸೆಂಬರ್ 17, ಭಾನುವಾರ ಸಂಜೆ 4-00 ಗಂಟೆಗೆ ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿರುವ ಆದರ್ಶ ಭವನ (ಎಂ.ಇ.ಎಸ್. ಕಾಲೇಜಿನ ಎದುರು)ದಲ್ಲಿ ಶ್ರೀ ಎಸ್. ಶಶಿಧರ್ ಅವರ ಶಿಷ್ಯರುಗಳೂ ಹಾಗೂ ಯುವ ಕಲಾವಿದರುಗಳೂ ಆದ ಲಾಸ್ಯ ಎಸ್. ಶ್ರೀವತ್ಸ, ಲಿಖಿತ್ ಎಸ್. ಶ್ರೀವತ್ಸ, ಎ. ಬಚ್ಚೇಗೌಡ, ಶರಣ್ ಕೌಸ್ತವ್, ಬಿ.ಜೆ. ಪ್ರಜ್ವಲ್ ಹಾಗೂ ಜಯಶ್ರೀ ಇವರುಗಳಿಂದ ಪಿಟೀಲು ವಾದನ ಏರ್ಪಡಿಸಲಾಗಿದೆ. 




ಸಹ-ವಾದ್ಯದಲ್ಲಿ ವಿ|| ಲಕ್ಷ್ಮಿನಾರಾಯಣ (ಮೃದಂಗ), ವಿ|| ಎನ್.ಎಸ್. ಕೃಷ್ಣಪ್ರಸಾದ್ (ಘಟಂ) ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ಶೇಷಗಿರಿರಾವ್ ಮತ್ತು ಶ್ರೀಮತಿ ಎನ್.ವಿ. ಕಮಲಮ್ಮ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದ ರೂವಾರಿ ಶ್ರೀ ಎಸ್. ಶಶಿಧರ್ ತಿಳಿಸಿದ್ದಾರೆ. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top