ವಿವಿ ಕಾಲೇಜಿನಲ್ಲಿ ಮೇಧಾವಿ ವಿದ್ಯಾರ್ಥಿ ಸಮ್ಮಾನ್ ಮತ್ತು ಮೀರಾ ಜಯಂತಿ

Upayuktha
0



ಮಂಗಳೂರು: ಕಳೆದ ಆರು ವರ್ಷಗಳಿಂದ ಬ್ಯಾಂಕ್ ಆಫ್ ಬರೋಡಾ ಹೆಚ್ಚು ಅಂಕಗಳಿಸಿದ ಸ್ನಾತಕೋತ್ತರ ಹಿಂದಿ ವಿಭಾಗದ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿ ಸಮ್ಮಾನ್' ಬಹುಮಾನದೊಂದಿಗೆ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಶಿಕ್ಷಣದ ಉನ್ನತಿಗಾಗಿ ಸದಾ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು.



ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಿಂದಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗ, ಹಿಂದಿ ಸಂಘ, ಆಂತರಿಕ ಗುಣಮಟ್ಟ ಖಾತರಿಕೋಶ ಮತ್ತು ಬ್ಯಾಂಕ್ ಆಫ್ ಬರೋಡಾದ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ "ಮೇಧಾವಿ ವಿದ್ಯಾರ್ಥಿ ಸಮ್ಮಾನ್ ಮತ್ತು ಮೀರಾ ಜಯಂತಿ" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಬಂಧಕ ಎಡ್ರಿಕ್ ಡಿಸೋಜ ಮಾತನಾಡಿ, ಬ್ಯಾಂಕ್ ಆಫ್ ಬರೋಡಾ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಬರೋಡಾ ಬ್ರೋ ಎನ್ನುವ ಖಾತೆ ಅದರಲ್ಲಿ ವಿಶೇಷವಾಗಿದ್ದು, ಶೂನ್ಯ ದರದಲ್ಲಿ ವಿದ್ಯಾರ್ಥಿಗಳು ತಮ್ಮ ಖಾತೆ ತೆರೆಯಬಹುದು. ಶಿಕ್ಷಣದ ಉನ್ನತಿಗೆ ಯಾವುದೇ ರೀತಿಯ ಪ್ರೋತ್ಸಾಹ ನೀಡುವುದಕ್ಕೂ ಕೂಡ ಬ್ಯಾಂಕ್ ಆಫ್ ಬರೋಡಾ ಸಿದ್ಧವಿದೆ ಎಂದು ಹೇಳಿದರು. 



ಇದೇ ಸಂದರ್ಭದಲ್ಲಿ "ಮೀರಾಬಾಯಿಯ ಕೃಷ್ಣ ಭಕ್ತಿ" ಎನ್ನುವ ವಿಷಯದ ಕುರಿತು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವಿಚಾರ ಮಂಡನೆ ಮಾಡಿದರು. ಮೇಧಾವಿ ವಿದ್ಯಾರ್ಥಿ ಸನ್ಮಾನ ಬಹುಮಾನವನ್ನು ಹಿಂದಿ ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ಶ್ರೀಮತಿ ಮಧುಶ್ರೀ ಮತ್ತು ಶಾರುಖ್ ಪಡೆದುಕೊಂಡರು. 



ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ನಾಗರತ್ನ ಎನ್. ರಾವ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮ ಟಿ. ರೋಡನ್ನನವರ್, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳಾದ ಬಿ. ಎನ್. ಪುಷ್ಪಲತಾ, ಬಿ. ಸುಗುಣಾವತಿ, ಮಾಯಾ ಎಸ್. ಹಾಗೂ ಕಾಲೇಜಿನ ನಾನಾ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top