ಮತ್ತೊಬ್ಬ ಗಜೇಂದ್ರ- ಮಹಾಶಾಂತನೆಂಬ ಮುನಿಯ ಕಥೆ

Upayuktha
0


ದೊಂದು ದಟ್ಟಕಾಡು. ತಪಸ್ಸಿಗೆ ಪ್ರಶಸ್ತವಾದ ಜಾಗ. ಅಲ್ಲಿ ಒಬ್ಬ ಸಾಧು. ಮಹಾಶಾಂತನೆಂದು ಹೆಸರು. ಅವನಿಗೆ ದೈವ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಹಂಬಲ. ಆ ಕಾಡಿನಲ್ಲಿ ತಪಸ್ಸಿಗೆ ಕೂತ. ಕಠಿಣ ತಪಸ್ಸು ಮಾಡತೊಡಗಿದ.


ಸ್ವರ್ಗದ ದೇವೇಂದ್ರನಿಗೆ ಯಾರೇ ತಪಸ್ಸು ಮಾಡಿದರೂ, ಇರುಸುಮುರುಸು. ಅವರ ತಪಸ್ಸಿನಿಂದ ತನ್ನ ಇಂದ್ರ ಪದವಿಗೆಲ್ಲಿ ಸಂಚಕಾರ ಬರುವುದೋ ಎಂಬ ಭಯ.


ಸರಿ, ಮುನಿಯ ತಪಸ್ಸಿಗೆ ಭಂಗ ತರಲು ನೂರಾರು ಹುನ್ನಾರ. ಸುಡುಸುಡು ಬಿಸಿಲು. ಜೋರಾಗಿ ಬೀಸುವ ಗಾಳಿ. ಧೋ ಎಂದು ಸುರಿವ ಮಳೆ. ಸಾಧು ಕದಲಿಲ್ಲ. ರಂಭೆ, ತಿಲೋತ್ತಮ, ಊರ್ವಶಿಯರೂ ಬಂದರು. ಸಾಧುವಿನ ತಪಸ್ಸು ನಡೆದೇಯಿತ್ತು. ಕೊನೆಯ ಅಸ್ತ್ರವಾಗಿ ಇಂದ್ರನೆ ಬಂದ. ಆದೂ ಆನೆಯ ರೂಪದಲ್ಲಿ. ಬಂದು ಸಾಧುವನ್ನು ಬಹಳವಾಗಿ ತೊಂದರೆ ಮಾಡಿದ. ಏನೇನೆಲ್ಲ ನಿಂದನೆ ಮಾಡಿದ. ರೊಚ್ಚಿಗೇಳುವಂತೆ ಮಾತನಾಡಿದ.


ಸಾಧು ಕಣ್ಣು ಬಿಟ್ಟ. ನೋಡಿದರೆ, ಆನೆ ರೂಪದಲ್ಲಿ ಇಂದ್ರ. ರೋಷಗೊಂಡ ಸಾಧುವೂ ಆನೆ ರೂಪ ಹೊಂದಿದ. ಈಗ ಸಮಬಲರ ಹೋರಾಟ. ಗುದ್ದಾಡಿ ಕೊಂಡರು ಬಹಳ ಕಾಲ. ದೂರಸಾಗಿದರು. ಒಮ್ಮೆಲೆ, ಇಂದ್ರ ಮಾಯವಾಗಿಬಿಟ್ಟ. ಆಗ ಸಾಧುವಿಗೆ ಇಂದ್ರನ ಮೋಸ ತಿಳಿಯಿತು.


ಆ ವರೆಗೆ ಮಾಡಿದ ತಪಸ್ಸೆಲ್ಲ ವ್ಯರ್ಥವಾಗಿತ್ತು. ತಪಸ್ಸಿನ ಫಲ ಕೈಕೊಟ್ಟಿತ್ತು. ಆನೆಯ ರೂಪದಿಂದ ಮತ್ತೆ ಮನುಷ್ಯನಾಗಲು ಅವನಿಗೆ ಸಾಧ್ಯವಾಗಲಿಲ್ಲ. ಅಲ್ಲೇ ರೋಧಿಸುತ್ತಾ ಇರುವಾಗ, ನಾರದರು ಬರುತ್ತಾರೆ. ಕಾರಣ ತಿಳಿದು, ಅಷ್ಟಭುಜ ನಾರಾಯಣನನ್ನು ಒಂದು ಲಕ್ಷ ಕಮಲದ ಹೂವಿನಿಂದ ಪೂಜಿಸಲು ಹೇಳುತ್ತಾರೆ. ಹಾಗೆ ಮಾಡಿದಲ್ಲಿ, ಮತ್ತೆ ಮಾನವ ರೂಪ ಹೊಂದಬಹುದೂ ಎಂದು ಹೇಳುತ್ತಾರೆ.


ಮುನಿಯು, ಮಾನವ ರೂಪ ಮೋಕ್ಷ ಸಾಧನೆಗೆ ಅವಶ್ಯಕ ಎಂದು, ತಿಳಿದು ಮಾನವ ರೂಪ ಪಡೆಯಲು ಪ್ರಯತ್ನ ಮಾಡುತ್ತಾನೆ. ಅಲ್ಲೊಂದು ವಿಶಾಲವಾದ ಕೆರೆ. ಅದರ ತುಂಬಾ ಅರಳಿನಿಂತ ಕಮಲದ ಹೂವುಗಳು. ಅ ಒಂದು ಕಮಲದ ಹೂವು ಸಾವಿರ ಕಮಲದ ಹೂವುಗಳಿಗೆ ಸಮವೆಂದು ಅಲ್ಲಿಯ ಜನರ ನಂಬಿಕೆ.


ಸರಿ. ನಮ್ಮ ಆನೆ, ಕಮಲದ ಹೂವಿಗಾಗಿ ನೀರಿಗೆ ಇಳಿಯುತ್ತದ. ಸೊಂಡಿಲಿನಿಂದ ಕಮಲದ ಹೂವು ತೆಗೆದು, ದೇವರಿಗೆ ಇನ್ನೇನು ಅರ್ಪಿಸ ಬೇಕು ಎನುವಲ್ಲಿ ಒಂದು, ಮೊಸಳೆ ಕಾಲು ಹಿಡಿಯುತ್ತದೆ. ನೋವಿನಿಂದ ಆನೆ ಘೀಳಿಡುತ್ತದೆ. ನಾರಾಯಣ ಕಾಪಾಡು ಎಂದು ಮೊರೆಯಿಡುತ್ತದೆ. ಆಗ ನಾರಾಯಣ ಅಷ್ಟಭುಜನಾಗಿ ಆನೆಯ ರಕ್ಷಣೆಗೆ ಧಾವಿಸುತ್ತಾನೆ.


ಹೆಸರೇ ವಿವರಿಸುವಂತೆ, ಇಲ್ಲಿ ಭಗವಂತ ಎಂಟು ಹಸ್ತಗಳೊಂದಿಗೆ ಕಾಣುತ್ತಾನೆ ("ಅಷ್ಟ" ಎಂದರೆ ಎಂಟು, "ಭುಜ" ಎಂದರೆ ಕೈಗಳು).  ನಾಲ್ಕು ತೋಳುಗಳು, ಬಲಭಾಗದಲ್ಲಿ ವಿಷ್ಣುವು ಸುದರ್ಶನ ಚಕ್ರ (ದಿ ಸೆಲೆಸ್ಟಿಯಲ್ ಡಿಸ್ಕಸ್), ಖಡ್ಗ, ಕಮಲದ ಹೂವು ಮತ್ತು ಬಾಣವನ್ನು ಹಿಡಿದಿರುತ್ತಾನೆ.


ಎಡಭಾಗದಲ್ಲಿ ನಾಲ್ಕು ತೋಳುಗಳು ಆಕಾಶದ ಶಂಖ, ಬಿಲ್ಲು, ಗುರಾಣಿ ಮತ್ತು ಗದೆಯನ್ನು ಹಿಡಿದಿರುತ್ತಾನೆ. ಇಷ್ಟೊಂದು ಆಯುಧಗಳ ಸಮೇತ ಬಂದವನನ್ನು ಕಂಡು ಮೊಸಳೆ ಭಯದಿಂದ ಆನೆಯನ್ನು ಬಿಟ್ಟುಬಿಡುತ್ತದೆ. ನಾರಾಯಣನ ಕೃಪೆಯಿಂದ, ಆನೆಗೆ ಮೊದಲಿನ ರೂಪವು ಬರುತ್ತದೆ. ಮಹಾಶಾಂತ ಮುನಿಯು ಮತ್ತೆ ತಪಸ್ಸ ಮಾಡಲು, ಸಾಧನೆಗೈಯಲು ಕೂರುತ್ತಾನೆ.


ಅಂಗರಕ್ಷಕರು ಬಲಾಢ್ಯರಾಗಿರಬೇಕು. ಅವರನ್ನು ನೋಡಿದರೇ ಎದೆ ಝಲ್ಲೆನ್ನಬೇಕು. ಅವರನ್ನು ನೋಡಿಯೇ ಶತ್ರುಗಳು ಭಯದಿಂದ ಪಲಾಯನ ಗೈಯಬೇಕು. ಇದೂ ಒಂದು ಅಂಗರಕ್ಷಕರ physical requirement ತಾನೇ. ಕಾದಾಟವಿಲ್ಲದೇ ಕದನ ಗೆಲ್ಲುವ ಕಲೆ ಎಂದರೆ ಇದೇ ಇರಬೇಕು.


- ಮೀನಾಕ್ಷಿ ಮನೋಹರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top