ಮಂಗಳೂರು: ಭಾಷೆ ಅತಿ ದೊಡ್ಡ ಸಂಪತ್ತು. ಭಾಷೆ ಸಾಮರಸ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು. ಯಾವ ಭಾಷೆಯೂ ಶ್ರೇಷ್ಠವಲ್ಲ; ಕನಿಷ್ಠವೂ ಅಲ್ಲ ಎಂದು ಹಿರಿಯ ಲೇಖಕಿ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಪೀಠ, ಬ್ಯಾರಿ ಪೀಠ, ಕೊಡವ ಅಧ್ಯಯನ ಪೀಠ, ಶ್ರೀ ಧರ್ಮಸ್ಥಳ ಮಂಜುನಾಥ ತುಳು ಪೀಠ, ಕನ್ನಡ, ಸಂಸ್ಕøತ, ಹಿಂದಿ ಹಾಗೂ ತುಳು ಸಂಘಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಸುಬ್ರಮಣ್ಯ ಭಾರತೀ ಜನ್ಮ ದಿನಾಚರಣೆ ಪ್ರಯುಕ್ತ ಭಾರತೀಯ ಭಾಷೆ ದಿವಸದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾಷೆ ಎಂದಿಗೂ ದೀಪವಿದ್ದಂತೆ. ಭಾಷೆ ಇಲ್ಲದಿದ್ದರೆ ಕತ್ತಲೆಯಲ್ಲೇ ಬದುಕು ನಡೆಸಬೇಕಾಗುತ್ತದೆ. ಭಾಷೆ ಮೂಲಕ ಭಾವನೆ ಹಂಚಿಕೊಂಡು ಸಂಬಂಧ ಬೆಸೆಯುವಲ್ಲಿ ಪ್ರಾಮುಖ್ಯತೆ ಪಡೆದಿದೆ. ಹಿತ್ತಲ ಗಿಡ ಮದ್ದಲ್ಲ ಎಂಬ ಗಾಧೆಯಂತೆ ಭಾಷೆಯ ಮಹತ್ವ ಮಾತೃ ಭಾಷೆಯಿಂದ ದೂರ ಇದ್ದಾಗ ಮಾತ್ರವೇ ತಿಳಿಯುತ್ತದೆ. ಭಾಷೆ ಮಾಧ್ಯಮ ಮಾತ್ರ ಅಲ್ಲ; ಹೃದಯಗಳನ್ನು ಬೆಸೆಯುವ ಕೊಂಡಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್, ವಿದ್ಯಾರ್ಥಿ ಜೀವನದಲ್ಲೇ ಎಷ್ಟು ಭಾಷೆಯನ್ನು ಕಲಿಯಲು ಸಾಮಥ್ರ್ಯವಿದೆಯೋ ಅಷ್ಟೂ ಭಾಷೆಯನ್ನು ಕಲಿಯುವುದಕ್ಕೆ ಪ್ರಯತ್ನಿಸಬೇಕು. ಇದು ಮುಂದಿನ ಬದುಕಿಗೆ ದಾರಿದೀಪವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಸಂಯೋಜಕಿ ಡಾ. ನಾಗರತ್ನ ಎನ್. ರಾವ್, ಕೊಂಕಣಿ ಪೀಠದ ಸಂಯೋಜಕ ಪ್ರೊ. ಜಯವಂತ ನಾಯಕ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಟಿ. ಆರ್., ಶ್ರೀ ಧರ್ಮಸ್ಥಳ ಮಂಜುನಾಥ ತುಳು ಪೀಠದ ಸಂಯೋಜಕ ಡಾ. ಮಾಧವ, ಕೊಡವ ಅಧ್ಯಯನ ಪೀಠದ ಸಂಯೋಜಕಿ ಡಾ. ಮೀನಾಕ್ಷಿ ಎಂ. ಎಂ. ಸೇರಿದಂತೆ ವಿವಿಧ ವಿಭಾಗಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ