ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ: ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

Upayuktha
0


ಮಂಗಳೂರು: ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದಲ್ಲಿ ಗುರುವಾರ (ನ.16) ಬ್ರಹ್ಮಕಲಶೋತ್ಸವ ಸಮಿತಿಯ ಸಭೆ ನಡೆಯಿತು. ಸಮಿತಿಯ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಬ್ರಹ್ಮ ಕಲಶೋತ್ಸವದ ರೂಪ ರೇಖೆ, ಕಾರ್ಯಕ್ರಮದ ಯಶಸ್ವಿಯ ಬಗ್ಗೆ ಸಮಗ್ರ ಮಾಹಿತಿಯನ್ನು ವಿವರವಾಗಿ ನೀಡಿದರು.


ಕ್ಷೇತ್ರದ ತಂತ್ರಿಗಳಾದ ವಾಮಂಜೂರು ಅನಂತ ಉಪಾಧ್ಯಾಯರು ಬ್ರಹ್ಮ ಕಲಶೋತ್ಸವವದ ವೈದಿಕ ವಿಧಿ, ವಿಧಾನಗಳ ಬಗ್ಗೆ ಹಾಗೂ ಕ್ಷೇತ್ರದ ಧರ್ಮದರ್ಶಿ ಶ್ರೀ ದೇವು ಮುಲ್ಯಣ್ಣನವರು ಜೀರ್ಣೋದ್ಧಾರ ಕೆಲಸ ಕಾರ್ಯಗಳು ನಿಗದಿತ ಸಮಯದೊಳಗೆ ಮಾಡಿ ಮುಗಿಸಲು ಎಲ್ಲರ ಸಹಕಾರವನ್ನು ಕೋರಿದರು.



ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲಿಯಾನ್, ಸದಾನಂದ ಬಂಗೇರ, ನಮ್ಮ ಕುಡ್ಲದ ಲೀಲಾಕ್ಷ ಬಿ ಕರ್ಕೆರ, ರಂಗನಟ ಪ್ರದೀಪ್ ಆಳ್ವ ಕದ್ರಿ, ಭಗವಾನ್ ದಾಸ್ ತೊಕೊಟ್ಟು ಬ್ರಹ್ಮ ಕಲಶೋತ್ಸವದ ಯಶಸ್ವಿಗೆ ತಮ್ಮ ಪೂರ್ಣ ಸಹಕಾರದ ಬಗ್ಗೆ ತಿಳಿಸಿದರು. ಜೀರ್ಣೋದ್ಧಾರ ಅಧ್ಯಕ್ಷರಾದ ರಮೇಶ್ ಮೆಂಡನ್, ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಕುತ್ತಾರ್, ಹೊರೆ ಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ರಾಮದಾಸ್ ಸೋಮೇಶ್ವರ ಎಲ್ಲರ ಸಹಕಾರವನ್ನು ಕೋರಿದರು.



ವೇದಿಕೆಯಲ್ಲಿ ಕ್ಷೇತ್ರದ ಗುರಿಕಾರರು, ಮಾಜಿ ಆಡಳಿತ ಮುಕ್ತೇಸರರಾದ ಯು ಎಸ್ ಪ್ರಕಾಶ್, ಉಳ್ಳಾಲ ಅಯ್ಯಪ್ಪ ಮಂದಿರದ ಗೋಪಾಲ ಗೋಳಿಯಡಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಯರಾಮ್ ಚೆಂಬು ಗುಡ್ಡೆ, ದೇವಕಿ ಉಳ್ಳಾಲ್, ಸೂರ್ಯ ಭಟ್, ಪುರುಷೋತ್ತಮಗಟ್ಟಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಾಜೇಶ್ ಉಳಿಯ, ಉಳ್ಳಾಲ ಗಾಣಿಗ ಸಂಘದ ಅಧ್ಯಕ್ಷರಾದ ಎಚ್‌. ಪ್ರಕಾಶ್, ಕ್ಷೇತ್ರದ ಗುರಿಕಾರರು, ಪರಿಸರದ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಮಂಡಳಿಗಳ ಸದಸ್ಯರು, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


ಪ್ರಧಾನ ಕಾರ್ಯದರ್ಶಿ ರವಿಶಂಕರ್ ಸೋಮೇಶ್ವರ ಸ್ವಾಗತಿಸಿದರು, ಸುಂದರ  ಉಳಿಯ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top