ಉಡುಪಿ: ರೂ. 22 ಕೋಟಿ ವಿಮಾ ಕ್ಲೇಮ್ ವಿತರಣೆ

Upayuktha
0

ಉಡುಪಿ: ಭಾರತದ ಪ್ರಮುಖ ಸ್ವತಂತ್ರ ಆರೋಗ್ಯ ವಿಮಾ ಕಂಪನಿಯಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್ ಕಳೆದ 18 ತಿಂಗಳ ಅವಧಿಯಲ್ಲಿ ಅಂದರೆ 2022ರ ಏಪ್ರಿಲ್‍ನಿಂದ 23ರ ಸೆಪ್ಟೆಂಬರ್ ನಡುವೆ ಉಡುಪಿಯಲ್ಲಿ ರೂ.22 ಕೋಟಿ ಮೌಲ್ಯದ ಕ್ಲೇಮ್‍ಗಳನ್ನು ಇತ್ಯರ್ಥಪಡಿಸಿರುವುದಾಗಿ ಪ್ರಕಟಿಸಿದೆ.



ಕಂಪನಿಯು 21 ಕೋಟಿ ರೂಪಾಯಿಗಳನ್ನು ನೆಟ್‍ವರ್ಕ್ ಆಸ್ಪತ್ರೆಗಳಿಗೆ ನೀಡಿದ್ದು, ನೆಟ್‍ವರ್ಕ್‍ನಲ್ಲಿ ಇಲ್ಲದ ಆಸ್ಪತ್ರೆಗಳಿಗೆ ಕ್ಲೇಮ್‍ಗಳಿಗಾಗಿ ಒಂದು ಕೋಟಿ ರೂಪಾಯಿಯನ್ನು ವಿತರಿಸಿದೆ. ನಗದು ರಹಿತ ಸೌಲಭ್ಯದಡಿ ರೂ.20 ಕೋಟಿ ಮತ್ತು ಮರುಪಾವತಿ ಸೌಲಭ್ಯದಡಿ ರೂ.2 ಕೋಟಿ ಪಾವತಿಸಿದೆ.



ಗ್ರಾಹಕರಿಗೆ ತನ್ನ ಬದ್ಧತೆಯ ಭಾಗವಾಗಿ, ಕಂಪನಿಯು ಎಲ್ಲ ನಗದು ರಹಿತ ಕ್ಲೇಮ್‍ಗಳನ್ನು 2 ಗಂಟೆಗಳ ಒಳಗೆ ಇತ್ಯರ್ಥಪಡಿಸಿದೆ. ಅಂತೆಯೇ ಕ್ಲೇಮ್ ಸಲ್ಲಿಕೆಯಾದ 7 ದಿನಗಳಲ್ಲಿ ಮರುಪಾವತಿ ಕ್ಲೈಮ್‍ಗಳ ಪಾವತಿಗಳನ್ನು ಕೂಡಾ ಮಾಡಿದೆ. ಉಡುಪಿಯಲ್ಲಿ ಹೆಚ್ಚಿನ ಕ್ಲೈಮ್‍ಗಳು ಶಸ್ತ್ರಚಿಕಿತ್ಸಾ ಚಿಕಿತ್ಸೆಗಳಿಗೆ ಸಂಬಂಧಿಸಿದ್ದು, ಒಟ್ಟು ರೂ.12 ಕೋಟಿ ಮೊತ್ತವನ್ನು ಪಾವತಿಸಲಾಗಿದೆ. ಇತರ ಕ್ಲೇಮ್‍ಗಳ ಮೌಲ್ಯ 10 ಕೋಟಿ ರೂಪಾಯಿ ಆಗಿದೆ ಎಂದು ಮುಖ್ಯ ಕ್ಲೈಮ್ಸ್ ಅಧಿಕಾರಿ ಶ್ರೀ ಸನತ್ ಕುಮಾರ್ ಕೆ ಪ್ರಕಟಣೆಯಲ್ಲಿ ಹೇಳಿದ್ದಾರೆ.



ಇಷ್ಟಾಗಿಯೂ ಕ್ಲೈಮ್‍ಗಳನ್ನು ಅಧ್ಯಯನ, ಮತ್ತು ವಿಶ್ಲೇಷಣೆಯಲ್ಲಿ ಸವಾಲುಗಳಿದ್ದು, ವಿಮಾ ರಕ್ಷಣೆ, ಅದರ ಪ್ರಯೋಜನಗಳು ಮತ್ತು ಪಾಲಿಸಿ ನಿಯಮಗಳ ಬಗ್ಗೆ ತಿಳುವಳಿಕೆಯ ಕೊರತೆ ನೀಗಿಸಲು ದೇಶಾದ್ಯಂತ ಹೆಚ್ಚಿನ ಆರೋಗ್ಯ ವಿಮಾ ಪಾಲಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಹಕರು 24 X 7 ಟೆಲಿಮೆಡಿಸಿನ್ ಸೌಲಭ್ಯವನ್ನೂ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top