ತುಳುಕೂಟ (ರಿ) ಕುಡ್ಲ ಬಂಗಾರ್ ಪರ್ಬೊ ಸರಣಿ ವೈಭವೊ -09
ಮಂಗಳೂರು: ತುಳುಕೂಟದ ಬಂಗಾರ್ ಪರ್ಬ ಸರಣಿ ವೈಭವದ 9ನೇ ಕಾರ್ಯಕ್ರಮವನ್ನು ನ.18ರಂದು ಶನಿವಾರದಂದು ಅಪರಾಹ್ನ 1:30 ಗಂಟೆಗೆ ಸುರತ್ಕಲ್‌ನ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ತುಳುವೆರೆ ತುಡರ ಪರ್ಬೊ ಎಂಬ ಶಿರೋನಾಮೆಯೊಂದಿಗೆ ಆಯೋಜಿಸಲಾಗಿದೆ.
ಹೆಸರಾಂತ ಉದ್ಯಮಿ, ಅಗರಿ ಎಂಟರ್ ಪ್ರೈಸಸ್ ನ ಮಾಲಕ ಅಗರಿ ರಾಘವೇಂದ್ರರಾವ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ ಭಾಸ್ಕರ ಸಾಲ್ಯಾನ್, ಜನರಲ್ ಮ್ಯಾನೇಜರ್. ಸನ್ನಿಧೀಸ್ ಹೋಟೆಲ್ಸ್ (ಪ್ರೈ) ಲಿ ವಿದ್ಯಾದಾಯಿನೀ ಪ್ರೌಢ ಶಾಲೆಯ ಸಂಚಾಲಕರು, ನಿವೃತ್ತ ಶಿಕ್ಷಕರೂ ಆದ ಸುಧಾಕರ ರಾವ್, ಪೇಜಾವರ, ವಿದ್ಯಾದಾಯಿನೀ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಕೆ.ಬಾಲಚಂದ್ರರು ಭಾಗವಹಿಸಲಿದ್ದಾರೆ.
ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೆಂಕಟ್ರಮಣ ಭಟ್ ತುಳುವೆರೆ ತುಡರ ಪರ್ಬ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತೋನ್ಸೆ ಪುಷ್ಕಳ ಕುಮಾರ್ ರವರಿಂದ ತುಳು ಭಾವಗೀತೆ, ವರ್ಕಾಡಿ ರವಿ ಅಲೆವೂರಾಯ ಬಳಗದಿಂದ ಬಲಿ- ವಾಮನ ರೂಪಕ ನಡೆಯಲಿದೆ ಎಂದು ತುಳು ಕೂಟದ ಅಧ್ಯಕ್ಷ ಮರೋಳಿ ಬಿ ದಾಮೋದರ ನಿಸರ್ಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ