ಏತಡ್ಕದಲ್ಲಿ ಕಟ್ಟದ ದಿನಾಚರಣೆ
ಏತಡ್ಕ: ಕೂಡಿ ಕಟ್ಟಿದರೆ ಕಟ್ಟ ಆಗದೆಂದಿಗೂ ನಷ್ಟ. ಸಮಾಜಕ್ಕೆ ಹೊಂದಿಕೊಂಡು, ಸಮಾಜದಲ್ಲಿರುವ ಜನರನ್ನು ಒಂದುಗೂಡಿಸಿಕೊಂಡು ಪ್ರಯತ್ನ ಮಾಡಿದಾಗ ಆ ಸಂಘಟನೆಗೆ ಬಲ ಇದೆ. ಅದೇ ರೀತಿ ಕಟ್ಟವನ್ನು ಕಟ್ಟುವಾಗ ಸದೃಢವಾಗಿ ಕಟ್ಟಬೇಕು ಎಂದು ಪ್ರಗತಿಪರ ಕೃಷಿಕರೂ, ಆರು ದಶಕಗಳಿಂದ ಪತ್ತಡ್ಕ ಕಟ್ಟದ ಮೇಲ್ವಿಚಾರಕ ಗಣಪತಿ ಭಟ್ ಪತ್ತಡ್ಕ ಅವರು ಹೇಳಿದರು.
ಅವರು ಕುಂಬಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಏತಡ್ಕ ಅವರ ಅಧ್ಯಕ್ಷತೆಯೊಂದಿಗೆ ಸಮಾಜಮಂದಿರ ಏತಡ್ಕದಲ್ಲಿ ನ.14 ಮಂಗಳವಾರ ಕಟ್ಟದ ದಿನಾಚರಣೆ ಕಾರ್ಯಕ್ರಮದಲ್ಲಿ ಆಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂಬಡಾಜೆ ಗ್ರಾಮ ಪಂಚಾಯತಿನ ನಾಲ್ಕನೇ ವಾರ್ಡು ಸದಸ್ಯ ಕೃಷ್ಣಶರ್ಮ ಜಿ, ಕಟ್ಟಗಳೇ ನದೀ ತೀರದ ಜನರ ಜೀವನಾಡಿ. ಇದರಿಂದಲೇ ಬರಗಾಲದಿಂದ ಮುಕ್ತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದ ಇನ್ನೋರ್ವ ಅಭ್ಯಾಗತ ಬೇರ್ಕಡವು ಕಟ್ಟದ ಮೇಲ್ವಿಚಾರಕ ಉದಯಶಂಕರ ಭಟ್ ಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ನದೀ ತೀರದಲ್ಲಿ ಕಟ್ಟಕಟ್ಟುವ ಜನರಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಒಗ್ಗಟ್ಟು ಇದ್ದಲ್ಲಿ ಮಾತ್ರವೇ ಸಾಂಪ್ರದಾಯಿಕ ಕಟ್ಟಗಳು ಯಶಸ್ವಿಯಾಗಲು ಸಾಧ್ಯ ಎಂದು ನುಡಿದರು.
ಡಾ ವೇಣುಗೋಪಾಲ್ ಕಳೆಯತ್ತೋಡಿ ಸ್ವಾಗತಿಸಿ, ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ. ಏತಡ್ಕ ಪ್ರಾರ್ಥಿಸಿ, ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ