ನ 26: ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಮಂಗಳಾದೇವಿಯ ದಶಮಾನೋತ್ಸವ ಸಂಭ್ರಮ

Upayuktha
0



ಮಂಗಳೂರು: ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ, ಮಂಗಳಾದೇವಿ, ಇದರ ದಶಮಾನೋತ್ಸವ ಸಮಾರಂಭ ಶ್ರೀ ಮಂಗಳಾದೇವಿ ದೇವಸ್ಥಾನದ ಅಂಗಣದೊಳಗೆ ನವೆಂಬರ್ 26ರಂದು ಜರಗಲಿದ್ದು ಆ ಪ್ರಯುಕ್ತ "ತ್ರಿಜನ್ಮ ಮೋಕ್ಷ " ಕನ್ನಡ ಯಕ್ಷಗಾನ ಬಯಲಾಟ ನಡೆಯಲಿದೆ. 



ಯಕ್ಷಗಾನ ಬಯಲಾಟದ ಪೂರ್ವಭಾವಿಯಾಗಿ ಬೆಳಗ್ಗೆ 9 ರಿಂದ 10.30 ರವರೆಗೆ ಷಣ್ಮುಖಪ್ರಿಯ ಭಜನಾ ತಂಡ, ಪಡೀಲ್ ಇವರಿಂದ ಭಜನಾ ಕಾರ್ಯಕ್ರಮವಿದೆ. 



ಘಂಟೆ 10.30 ಕ್ಕೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಗಿ 11.30 ರಿಂದ ಖ್ಯಾತ ಭಾಗವತರಾದ ದಯಾನಂದ್ ಕೋಡಿಕಲ್ ಮತ್ತು ಇವರ ಶಿಷ್ಯ ವೃಂದದವರಿಂದ ಯಕ್ಷಗಾನರ್ಚನೆ, ಮಧ್ಯಾಹ್ನ 2.00 ರಿಂದ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ "ನರಕಾಸುರ ಮೋಕ್ಷ ". ಸಾಯಂಕಾಲ 6.00 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಅಧ್ಯಕ್ಷರಾಗಿ ಲಯನ್ ರಮಾನಂದ ನೂಜಿಪ್ಪಾಡಿ, ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಮತ್ತು ಅನೇಕ ಗಣ್ಯರು ಭಾಗವಹಿಸಲಿದ್ದಾರೆ. 



ದಿ| ಚಂದ್ರಶೇಖರ ಬಲ್ಯಾಯ ಸಂಸ್ಮರಣಾ ಪ್ರಶಸ್ತಿ, ಸಾಧಕರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಗುರುವಂದನೆ ಕಾರ್ಯಕ್ರಮದ ನಂತರ "ತ್ರಿಜನ್ಮ ಮೋಕ್ಷ " ಕನ್ನಡ ಯಕ್ಷಗಾನ ಬಯಲಾಟ ಕಾರ್ಯಕ್ರಮ ಆಯೋಜಿಸಲಾಗಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top