ಪ್ರತಿಜ್ಞೆಯನ್ನು ಗೌರವದಿಂದ ಉಳಿಸಿಕೊಳ್ಳಬೇಕು: ಎಂ ಜಿ ಕಜೆ

Upayuktha
0


  • ಎಸ್ ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ ರೋವರ್ ರೇಂಜರ್ ಸಮಾಗಮ,
  • ಸ್ಕೌಟ್ಸ್ ಗೈಡ್ಸ್, ಕಬ್ ಬುಲ್ ಬುಲ್ಸ್ ಉತ್ಸವ 2023-2024ರ ಶಿಬಿರದ ಸಮಾರೋಪ


ಸುಬ್ರಹ್ಮಣ್ಯ: ನಾಯಕತ್ವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳಲೆಂದೇ  ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉಳಿದುಕೊಳ್ಳುತ್ತಿದೆ. ಹಾಗಾಗಿ ಸಿಕ್ಕ ಅವಕಾಶವನ್ನು ಎಲ್ಲಾ ಬಳಸಿಕೊಂಡು ಸಾಗುವುದು ವಿದ್ಯಾರ್ಥಿಗಳ ಕರ್ತವ್ಯ. ತನ್ನನ್ನು ತಾನು ಕಾರ್ಯದಲ್ಲಿ ತೊಡಗಿಸಿಕೊಂಡು ಸಹೋದರತ್ವ ಭಾವನೆಯನ್ನು ಬೆಳೆಸಿಕೊಳ್ಳುವುದು ಈ ಸಂಸ್ಥೆಯ ಕಾರ್ಯ. ನಾವು ಮಾಡಿದ ಪ್ರತಿಜ್ಞೆಯನ್ನು ಗೌರವದಿಂದ ಪ್ರೀತಿಸಿ ಉಳಿಸಿಕೊಳ್ಳಬೇಕು ಉತ್ತಮ ಸ್ಕೌಟರಾಗಿ ದೇಶ ಸೇವೆ ಮಾಡಬೇಕೆಂದು ದ.ಕ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯದರ್ಶಿ ಎಂ.ಜಿ ಕಜೆ ತಿಳಿಸಿದರು.

 


ಇವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಸುಳ್ಯ ದ.ಕ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಸಹಭಾಗಿತ್ವದಲ್ಲಿ ನಡೆದ ರೋವರ್ ರೇಂಜರ್ ಸಮಾಗಮ ಸ್ಕೌಟ್ಸ್ ಗೈಡ್ಸ್ ಕಬ್ ಬುಲ್ ಬುಲ್ಸ್ ಉತ್ಸವ 2023-2024ರ ಶಿಬಿರದ ಸಮಾರೋಪ  ಭಾಷಣದಲ್ಲಿ ಮಾತನಾಡಿದರು.



ಕಷ್ಟ ಎನ್ನುವುದು ಪ್ರತಿಯೊಬ್ಬರಿಗೂ ಬಂದು ಹೋಗುತ್ತಾ ಇರುತ್ತದೆ. ಇದನ್ನು ಮೆಟ್ಟಿ ನಿಂತು ಸಾಗುವುದು ನಮ್ಮ ದೊಡ್ಡ ಸವಾಲಾಗಿರುತ್ತದೆ. ಸವಾಲುಗಳನ್ನು ಎದುರಿಸಿಕೊಂಡು ಹೋಗುವ ಪ್ರಾಧಾನ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಒದಗಿಸುತ್ತದೆ. ಕಲಿಕೆಯ ಸಂದರ್ಭದಲ್ಲಿ ಮಾತ್ರ ಇದರೊಂದಿಗೆ ಬೆರೆಯುವುದಲ್ಲ ಮುಂದಿನ ಜೀವನದಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಅಭಾರಿಯಾಗಿರಬೇಕು ಸತ್ಯವಂತ ಪ್ರಜೆಯಾಗಿ ಬದುಕನ್ನು ರೂಢಿಸಿಕೊಳ್ಳಬೇಕೆಂದು ಪ್ರಾದೇಶಿಕ ನಿರ್ದೇಶಕ ವಿಟಿಯು ಬೆಳಗಾವಿ ಡಾ ಶಿವಕುಮಾರ್ ಹೊಸೊಳಿಕೆ ಮುಖ್ಯ ಅತಿಥಿಯಾಗಿ ಮಾತನಾಡಿದರು.



ಸಮಾಜದಲ್ಲಿ ಏನೇ ಆದರೂ ಎದುರಿಸುವ ಶಕ್ತಿ ಸ್ಕೌಟ್ಸ್ ಮತ್ತು ಗೈಡ್ಸ್ ದು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷ ಮಾಧವ ಬಿ ಕೆ ಅಧ್ಯಕ್ಷ ನೆಲೆಯಲ್ಲಿ ಶುಭ ಹಾರೈಸಿದರು.  ಶಿಬಿರದ ಸಂಪೂರ್ಣ ವರದಿಯನ್ನು ಹಿಮಾಲಯ ವುಡ್ ಬ್ಯಾಡ್ಜ್ ಸ್ಕೌಟ್ಸ್ ಮಾಸ್ಟರ್ ಸುಬ್ರಹ್ಮಣ್ಯ ಕೆ ಎನ್ ನೆರವೇರಿಸಿದರು.



ವೇದಿಕೆಯಲ್ಲಿ ಸೋಮಶೇಖರ್ ನಾಯ್ಕ್ ಪ್ರಾಂಶುಪಾಲ ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ, ನಿವೃತ್ತ ದೈಹಿಕ ನಿರ್ದೇಶಕ ಕೆಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ ತುಕಾರಾಂ ಏನೆಕಲ್ಲು,ವೆಂಕಟೇಶ್ ಎಚ್ ಎಲ್,ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ,ಸಂತೋಷ್ ಕುಮಾರ್ ರೈ ಉಪವಲಯ ಅರಣ್ಯಾಧಿಕಾರಿ ಪಂಜ, ತೀರ್ಥರಾಮ್ ಹೆಚ್ ಅಧ್ಯಕ್ಷರು ಸರಕಾರಿ ನೌಕರರ ಸಂಘ ಸುಳ್ಯ,ರವಿ ಕಕ್ಕೆಪದವು ಅನುಗ್ರಹ ಟ್ರಸ್ಟ್ ಸುಬ್ರಹ್ಮಣ್ಯ,ದಿನೇಶ್ ಶಿರಾಡಿ ಅಧ್ಯಕ್ಷರು ಶಿಕ್ಷಕ- ರಕ್ಷಕ ಸಂಘ ಎಸ್ ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸಂಯೋಜಕ ಪ್ರವೀಣ್ ಮುಂಡೋಡಿ, ರಾಜ್ಯ ಸಂಘಟನಾ ಗೈಡ್ಸ್ ಆಯೋಜಕ ಮಂಜುಳಾ, ಜಿಲ್ಲಾ ಎಡಿಸಿ ವಿಮಲಾ ರಂಗಯ್ಯ ಗೈಡ್ಸ್ ಮತ್ತು ದೇವಿಪ್ರಸಾದ್ ಜಾಕೆ ಸ್ಕೌಟ್ಸ್, ಎಎಸ್ ಸಿಒ ದಕ್ಷಿಣ ಕನ್ನಡದ ಭರತ್ ರಾಜ್, ಉಪಾಧ್ಯಕ್ಷ ಸೋಮಶೇಖರ್ ನೇರಳಾ, ಎಸ್ ಎಸ್ ಪಿ ಯು ಸುಬ್ರಹ್ಮಣ್ಯ ಪ್ರೌಢಶಾಲಾ ವಿಭಾಗದ ಗಣಿತ ಅಧ್ಯಾಪಕ ಕೃಷ್ಣಭಟ್ ಉಪಸ್ಥಿತರಿದ್ದರು.



ಕಾರ್ಯಕ್ರಮವನ್ನು ವಿಮಲಾ ರಂಗಯ್ಯ ಸ್ವಾಗತಿಸಿ, ಉದಯ ಕುಮಾರ್ ರೈ ಎಸ್ ಪ್ರಧಾನ ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಪಂಜ ವಂದಿಸಿದರು, ಸುಜಯಶ್ರೀ ಕೆಪಿಎಸ್ ಬೆಳ್ಳಾರೆ ಸ್ಕೌಟ್ ಮಾಸ್ಟರ್ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top