ನಾಳೆ ಶ್ರೀನಿವಾಸ ಜಾಬ್ ಫೇರ್ "ಉದ್ಯೋಗಮೇಳ- 2023"

Upayuktha
0



ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ- ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ಶ್ರೀನಿವಾಸ ಜಾಬ್ ಫೇರ್ "ಉದ್ಯೋಗಮೇಳ - 2023" ಅನ್ನು 27 ನವೆಂಬರ್ 2023 ರಂದು ಬೆಳಗ್ಗೆ 9:30 ರಿಂದ ಸಂಜೆ 5:00 ರವರೆಗೆ ಶ್ರೀನಿವಾಸ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್ ಪಾಂಡೇಶ್ವರ, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.



ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ.ಸಿಎ ಎ. ರಾಘವೇಂದ್ರರಾವ್ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್ ಅವರ ಆಶೀರ್ವಾದದೊಂದಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ. ಬಿಬಿಎ, ಬಿಕಾಂ, ಬಿಸಿಎ, ಎಂಬಿಎ, ಎಂಸಿಎ, ಎಂಎಸ್ ಡಬ್ಲ್ಯೂ, ಬಿಎಚ್ಎಂ, ಎಂಎಚ್ಎಂ, ಐಟಿಐ/ ಡಿಪ್ಲೊಮೊ  ವಿದ್ಯಾರ್ಥಿಗಳು ಭಾಗವಹಿಸಬಹುದು. ಈ ಉದ್ಯೋಗ ಮೇಳದಲ್ಲಿ 44 ಕಂಪನಿಗಳು ಭಾಗವಹಿಸುತ್ತಿವೆ.



ಉದ್ಘಾಟನಾ ಸಮಾರಂಭ: ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಲಿದ್ದು, ಗ್ಲೋ ಟಚ್ ಟೆಕ್ನಾಲಜೀಸ್ ಪೈ. ಲಿಮಿಟೆಡ್ ನಿರ್ದೇಶಕ ಸಿಎ ಎಂ. ಎನ್. ಪೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಗಳೂರು ಕರ್ಣಾಟಕ ಬ್ಯಾಂಕ್‍ನ ಆಂತರಿಕ ವಿಜಿಲೆನ್ಸ್ ಮುಖ್ಯಸ್ಥ ಮತ್ತು ಮುಖ್ಯ ಅನುಸರಣೆ ಅಧಿಕಾರಿ ಶ್ರೀ ನಿರ್ಮಲ್ ಕುಮಾರ್ ಕೇಚಪ್ಪ ಹೆಗ್ಡೆ, ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿ ಸದಸ್ಯರಾದ ಶ್ರೀಮತಿ ವಿಜಯಲಕ್ಷೀ ಆರ್. ರಾವ್, ಪ್ರೊ. ಇಆರ್. ಶ್ರೀಮತಿ ಎ. ಮಿತ್ರಾ ಎಸ್. ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ ಹಾಗೂ ರಿಜಿಸ್ಟಾರ್ ಡಾ. ಅನಿಲ್ ಕುಮಾರ್ ಮುಖ್ಯು ಆತಿಥಿಗಳಾಗಿ ಭಾಗವಹಿಸಲಿದ್ದಾರೆ.



ಭಾಗವಹಿಸುವ ಕಂಪನಿಗಳು:

ಹೋಟೆಲ್ ಓಶಿಯನ್ ಪರ್ಲ್, ಗೋಲ್ಡ್ ಪಿಂಚ್ ಹೋಟೆಲ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್ (ಸಬ್‌ಸೈಡರೀಸ್ ಬ್ಯಾಂಕ್), ಯೆಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಇನ್ವೆಂಜರ್ ಸಾಫ್ಟ್‌ವೇರ್, ಕೋಜೆಂಟ್, ಅದ್ವೈತ್ ಜೆಸಿಬಿ, ಗ್ಲೋ ಟಚ್ ಟೆಕ್ನಾಲಜೀಸ್, ಹೆರೈಜೆನ್, ಎಆರ್‌ಎಂ ಕೆಐಎ, ಎಂಜಿ ಹೆಕ್ಟರ್, ಭಾರತ್ ಆಟೋ ಕಾರ್ಸ್, ಕಾಂಚನ್ ಹುಂಡೈ, ಟಿವಿಎಸ್ ಸಾಯಿ ರಾಧಾ, ಯುನೈಟೆಡ್ ಕಾರ್ಸ್ ಟೊಯೋಟಾ,ಹರ್ಷ, ಐ ಕ್ಯೂ ಡಾಟ್ ನೆಟ್, ಕಾವೇರಿ ಟಾಟಾ ಮೋಟಾರ್ಸ್, ಪೈ ಸೇಲ್ಸ್, ಮರೂರ್ ಗ್ರೂಪ್, ಕಂಟಟಕ ಏಜೆನ್ಸಿ ಲಿಮಿಟೆಡ್, ಅರವಿಂದ್ ಮೋಟಾರ್ಸ್, ರೆನಾಲ್ಟ್, ಆಡಿ, ಟಾಟಾ ಕ್ಯಾಪಿಟಲ್, ರಿಲಯನ್ಸ್ ಲೈಫ್ ಇನ್ಶುರೆನ್ಸ್, ಪೀಪಲ್ ಗಮುಟ್, ಸ್ಟಾರ್ ಯೂನಿಯನ್ ಡೈಚಿ, ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್, ಬಜಾಜ್ ಕ್ಯಾಪಿಟಲ್ ಲಿಮಿಟೆಡ್, ಕೆಟಿಎಂ, ಸಾಯಿ ಶ್ರೀ ಎಂಟರ್‌ಪ್ರೈಸಸ್, ಶ್ರೀರಾಮ್ ಫೈನಾನ್ಸ್, ಮ್ಯಾಟ್ರಿಕ್ಸ್ ಹೋಂಡಾ, ಟಾಟಾಮೋಟಾರ್ಸ್, ಏಂಜೆಲ್ ಬ್ರೋಕಿಂಗ್, ಸ್ಟಾರ್ ಹೆಲ್ತ್ ಇನ್ಶೂರೆನ್ಸ್, ಕರ್ಣಾಟಕ ಬ್ಯಾಂಕ್, ಲಾಮೈಸನ್ ಸಿಟ್ರೊಯೆನ್, ಮಾಂಡೋವಿ ಮೋಟಾರ್ಸ್ ನೆಕ್ಸಾ.



ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9632602839, 7026297400, 9731162400, 9449430680, 6361455835, 9538579585, 8123429268.


ಇಮೇಲ್: placements@srinivasuniversity.edu.in 


ಉಪಸ್ಥಿತಿ:  ಶ್ರೀನಿವಾಸ ವಿವಿ ಪ್ರಭಾರ ಉಪಕುಲಪತಿ ಮತ್ತು  ರಿಜಿಸ್ಟರ್ ಡಾ. ಅನಿಲ್ ಕುಮಾರ್, ಶ್ರೀನಿವಾಸ ವಿವಿ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಪ್ರೊ. ಶ್ವೇತಾ ಪೈ, ಉದ್ಯೋಗ ಮೇಳದ ಸಂಚಾಲಕ - ಪ್ರೊ. ವೆಂಕಟೇಶ್ ಅಮೀನ್, ಡಾ. ಸುಬ್ರಹ್ಮಣ್ಯ ಭಟ್, ಡಾ. ಶ್ರೀಧರ್ ಆಚಾರ್ಯ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top