ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಶ್ರೀರಾಮ ಸಂಕೀರ್ತನೆ

Upayuktha
0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಮದ್ವಾಧೀಶ ವಿಠಲದಾಸ ನಾಮಾಂಕಿತ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಶ್ರೀರಾಮ ಸಂಕೀರ್ತನೆ ಭಜನಾ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ನಡೆಯಿತು.


ರಾಮನ ಮಹತ್ವವನ್ನು ಭಜನಾ ಸಂಕೀರ್ತನೆಯನ್ನು ಮಾಡುವ ಮೂಲಕ ಪ್ರಸ್ತುತ ಪಡಿಸಿದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಶ್ರೀರಾಮನ ಸ್ತುತಿ ಮಾಡುವವರು ಭಾಗ್ಯವಂತರು. ಭಜನೆಯ ಮೂಲಕ ನಮ್ಮ ಮನಸ್ಸಿನ ಋಣಾತ್ಮಕ ಚಿಂತನೆಯು ದೂರವಾಗುತ್ತದೆ. ಭಜನೆಯು ಮನಃಪೂರ್ವಕವಾಗಿ ದೇವರಿಗೆ ನೀಡುವ ಸಂಪತ್ತು. ಜೀವನದಲ್ಲಿ ಸಜ್ಜನರ ಸಂಘ ಮಾಡುವುದರಿಂದ ಸನ್ಮಾರ್ಗದಲ್ಲಿ ಸಾಗಬಹುದು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ಕೋಶಾಧಿಕಾರಿ ಅಚ್ಯುತ್ ನಾರಾಯಣ, ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ. ಪಿ, ಸದಸ್ಯೆ ವತ್ಸಲಾ ರಾಜ್ಞಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸಂಚಾಲಕ ರವಿ ನಾರಾಯಣ, ವಿವೇಕಾನಂದ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್, ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top