ಗದ್ದೆ ನಾಟಿ, ಭತ್ತ ಕಟಾವು ಮಾಡಿದ ಎನ್.ಎನ್.ಎಸ್ ಸ್ವಯಂಸೇವಕರು

Upayuktha
0


 

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು, ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನ.7, ಮಂಗಳವಾರದಂದು ಆಯೋಜಿಸಲಾಗಿದ್ದ ಗದ್ದೆ ನಾಟಿ ಮತ್ತು ಭತ್ತ ಕಟಾವು ಕಾರ್ಯಕ್ರಮಗಳು ಉಜಿರೆ ಗ್ರಾಮದ ಅರಳಿಯಲ್ಲಿ ನಡೆದವು. ಈ ಮೂಲಕ ಯುವ ಜನತೆಗೆ ಭತ್ತ ಬೇಸಾಯದ ಕುರಿತು ಮಾಹಿತಿ ನೀಡಲಾಯಿತು.


ಸ್ವಯಂಸೇವಕರು ಎರಡು ಗುಂಪುಗಳಲ್ಲಿ ಒಟ್ಟು 30 ಮಂದಿಯನ್ನು ಒಳಗೊಂಡ ಗುಂಪೊಂದು ದೊಂಪದಪಲ್ಕೆಯಲ್ಲಿ ಹೊಲದ ಮಾಲೀಕರಾದ, ಸುಂದರ್ ರವರ ಮಾರ್ಗದರ್ಶನದಲ್ಲಿ ಒಂದು ಎಕರೆಯಷ್ಟು ಜಾಗದಲ್ಲಿ ಗದ್ದೆ ನಾಟಿ ಮಾಡಿಲಾಯಿತು.


ಅರಳಿಯಲ್ಲಿ ಆಯೋಜಿಸಲಾಗಿದ್ದ ಭತ್ತ ಕಟಾವು ಕಾರ್ಯಕ್ರಮದಲ್ಲಿ ಒಟ್ಟು 35 ಸ್ವಯಂಸೇವಕರು ಮತ್ತೊಂದು ಗುಂಪು ತಾರಾನಾಥ ರವರ ಮಾರ್ಗದರ್ಶನದಲ್ಲಿ ಸುಮಾರು ಒಂದುವರೆ ಏಕರೆಯಷ್ಟು ಜಾಗದಲ್ಲಿ ಕಟಾವು ಮಾಡು ಮತ್ತು ಭತ್ತವನ್ನು ವಿಂಗಡಿಸಲಾಯಿತು.


ದಿನವಿಡಿ ಭತ್ತದ ಗದ್ದೆಯಲ್ಲಿ ಉಲ್ಲಾಸದಿಂದ ಕಾಲ ಕಳೆದ ಸ್ವಯಂಸೇವಕರಿಗೆ ರೈತರಿಂದ ಪ್ರತ್ಯಕ್ಷವಾಗಿ ಭತ್ತ ಬೆಳೆಯುವ ಬಗ್ಗೆ ಹಾಗೂ ಪ್ರಸ್ತುತ ಕೃಷಿಯಲ್ಲಿರುವ ಸಾಧಕ ಬಾಧಕಗಳ ಬಗ್ಗೆ ಅರಿವು ಮತ್ತು ನೈಜ ಕೃಷಿಯ ಅನುಭವವನ್ನು ಪಡೆಯಲಾಯಿತು.


ಯೋಜನಾಧಿಕಾರಿಗಳಾದ ಪ್ರೊ. ದೀಪಾ ಆರ್.ಪಿ. ಮತ್ತು ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಮಾರ್ಗದರ್ಶನ ನೀಡಿದರು. ಎಸ್.ಡಿ.ಎಂ ಕಾಲೇಜು, ಉಜಿರೆಯ ರಸಾಯನಶಾಸ್ತ್ರ ವಿಭಾಗದ, ಪ್ರಯೋಗಾಲಯದ ಸಹಾಯಕ ಪರಮೇಶ್ವರ್ ಸಹಕರಿಸಿದರು. ಘಟಕದ ನಾಯಕರು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top